ಅಬಾರ್ಷನ್ ಮಾತ್ರೆ ಪರಿಣಾಮ ತಡೆಯಲು ಗೂಗಲ್ ಸರ್ಚ್, ತ್ವಿಷಾ ಶರ್ಮಾ ಅಂತಿಮ ಕ್ಷಣ ಬಹಿರಂಗ

Published : Aug 18, 2026, 12:11 PM IST

ಅಬಾರ್ಷನ್ ಮಾತ್ರೆ ಪರಿಣಾಮ ತಡೆಯಲು ಏನು ಮಾಡಬೇಕು ಎಂದು ಗೂಗಲ್ ಮೂಲಕ ಸರ್ಚ್ ಮಾಡಿದ ತ್ವಿಷಾ ಶರ್ಮಾ ಕೊನೆಯ ಗಳಿಗೆಯಲ್ಲಿ ಕರೆಯೊಂದನ್ನು ಮಾಡಿದ್ದಾರೆ. ಪೋಷಕರ ಕರೆ ಮಾಡಿ ತ್ವಿಷಾ ಹೇಳಿದ್ದೇನು?

PREV
16
ತ್ವಿಷಾ ಶರ್ಮಾ ಅಂತಿಮ ಕ್ಷಣಗಳು ಬಹಿರಂಗ

ಮಾಡೆಲ್ ತ್ವಿಷಾ ಶರ್ಮಾ ಪ್ರಕರಣದ ಚಾರ್ಚ್‌ಶೀಟ್ ಸಲ್ಲಿಕೆಯಾಗಿದೆ. ಭೋಪಾಲ್‌ನಲ್ಲಿ ಮೇ ತಿಂಗಳಲ್ಲಿ ನಡೆದ ತ್ವಿಷಾ ಶರ್ಮಾ ಸಾವು ಪ್ರಕರಣ ದೇಶಾದ್ಯಂತ ತೀವ್ರ ಕೋಲಾಹಲಕ್ಕೆ ಕಾರಣವಾಗಿತ್ತು. ಪ್ರಮುಖ ಆರೋಪಿ ಹಾಗೂ ಪತಿ ಸಮರ್ಥ್ ಸಿಂಗ್, ಅತ್ತೆ ಹಾಗೂ ನಿವೃತ್ತಿ ನ್ಯಾಯಾಧೀಶೆ ಗಿರಿಬಾಲ್ ಸಿಂಗ್ ಸೇರಿದಂತೆ ಪ್ರಮುಖರ ಪಾತ್ರ ಪೊಲೀಸ್ ಚಾರ್ಚ್‌ಶೀಟ್‌ನಲ್ಲಿ ಬಹಿರಂಗವಾಗಿದೆ. ತ್ವಿಷಾ ಶರ್ಮಾ ತನ್ನ ಜೀವನದ ಕೊನೆಯ ಕ್ಷಣಗಳ ಅತ್ಯಂತ ನೋವಿನ ಘಟೆಯನ್ನು ಸಿಬಿಐ ಬಹಿರಂಗಪಡಿಸಿದೆ.

26
ಗೂಗಲ್ ಸರ್ಚ್, ತುರ್ತು ಕರೆ

ತ್ವಿಷಾ ಶರ್ಮಾಗೆ ಗರ್ಭಪಾತ ನೀಡಲಾಗಿತ್ತು. ಇದರಿಂದ ತ್ವಿಷಾ ಶರ್ಮಾ ಆರೋಗ್ಯ ಹದಗೆಟ್ಟಿತ್ತು. ತೀವ್ರ ನೋವು, ಆರೋಗ್ಯ ಪರಿಸ್ಥಿತಿಯಲ್ಲಿ ಪರಿಣಾಮ ತಡೆಯಲು ತ್ವಿಷಾ ಶರ್ಮಾ ಗೂಗಲ್ ಮೂಲಕ ಸರ್ಚ್ ಮಾಡಿದ್ದರು. ಏನು ಮಾಡಲು ಸಾಧ್ಯ ಅನ್ನೋದನ್ನು ತಿಳಿದುಕೊಳ್ಳುವ ಪ್ರಯತ್ನ ನಡೆಸಿದ್ದರು. ಇದೇ ವೇಳೆ ವೈದ್ಯಕೀಯ ನೆರವು ಪಡೆಯಲು ತುರ್ತು ಕರೆಗಳನ್ನು ತ್ವಿಷಾ ಶರ್ಮಾ ಮಾಡಿದ್ದರು. ಈ ಕುರಿತು ದಾಖಲೆಯನ್ನು ಫೊರೆನ್ಸಿಕ್ ಹಾಗೂ ಡಿಜಿಟಲ್ ಆಡಿಟ್‌ನಲ್ಲಿ ನೀಡಲಾಗಿದೆ.

36
9.41ಕ್ಕೆ ತಂದೆಗೆ ಕರೆ ಮಾಡಿದ ತ್ವಿಷಾ ಶರ್ಮಾ

ಎಲ್ಲಾ ಪ್ರಯತ್ನಗಳನ್ನು ಮಾಡಿದ ಬಳಿಕ ತ್ವಿಷಾ ಶರ್ಮಾ ಬಳಿ ಯಾವ ಆಯ್ಕೆಯೂ ಉಳಿದಿಲ್ಲ ಎಂದು ನಿರ್ಧರಿಸಿದ್ದರು. ಹೀಗಾಗಿ ಮನೆಯ ಟರೇಸ್‌ಗೆ ತೆರಳಿದ ತ್ವಿಷಾ ಶರ್ಮಾ ಗಟ್ಟಿ ನಿರ್ಧಾರ ಮಾಡಿದ್ದರು. ಬಳಿಕ ತಂದೆಗ ಕರೆ ಮಾಡಿದ್ದರು. ರಾತ್ರಿ 9.41ಕ್ಕೆ ತಂದೆಗೆ ಕರೆ ಮಾಡಿದ ತ್ವಿಷಾ ಶರ್ಮಾ, ಪತಿ ಸಮರ್ಥ‌ನಿಂದ ಅನುಭವಿಸುತಿರುವ ನೋವಿನ ಕುರಿತು ಕೆಲ ಮಾಹಿತಿ ನೀಡಿದ್ದಾರೆ. ತಕ್ಷಣವೇ ಬರಲು ಸೂಚಿಸಿದ್ದಾಳೆ.

46
10.05ಕ್ಕೆ ತಾಯಿಗೆ ಕರೆ

ಟರೇಸ್ ಮೇಲಿನಿಂದಲೇ ರಾತ್ರಿ 10.05ಕ್ಕೆ ತಾಯಿಗೆ ಕರೆ ಮಾಡಿದ ತ್ವಿಷಾ ಶರ್ಮಾ, ತನ್ನ ನೋವು, ಸಮಸ್ಯೆಗಳನ್ನು ಹೇಳಿಕೊಂಡಿದ್ದಾಳೆ. ಪತಿ ಹಾಗೂ ಅತ್ತೆಯಿಂದ ಎದುರಿಸುತ್ತಿರುವ ಕಿರುಕುಳ ಕುರಿತು ಹೇಳಿದ್ದಾಳೆ. ಗಾಬರಿಗೊಂಡ ತಂದೆ ಹಾಗೂ ತಾಯಿ ತಕ್ಷಣವೇ ಬರವುದಾಗಿ ಹೇಳಿದ್ದಾರೆ. ಇಷ್ಟೇ ಅಲ್ಲ ಧೈರ್ಯದಿಂದ ಇರುವಂತೆ ಸೂಚಿಸಿದ್ದಾರೆ.

56
10.23ಕ್ಕೆ ಪತಿ ಹಾಗೂ ಅತ್ತ ಟರೇಸ್‌ಗೆ ದೌಡು

10.23ಕ್ಕೆ ತ್ವಿಷಾ ಶರ್ಮಾ ಟರೇಸ್ ಮೇಲಿದ್ದ ಕಡೆ ಪತಿ ಸಮರ್ಥ್ ಸಿಂಗ್ ಹಾಗೂ ಅತ್ತೆ ದೌಡಾಯಿಸಿದ್ದಾರೆ. ಇವರು ಬರುತ್ತಿದ್ದಂತೆ ತ್ವಿಷಾ ಶರ್ಮಾ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ. ರಾತ್ರಿ 10.55ಕ್ಕೆ ಭೋಪಾಲ್ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ತ್ವಿಷಾ ಶರ್ಮಾ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಸಮರ್ಥ್ ಸಿಂಗ್ ಹಾಗೂ ಅತ್ತೆ ಗಿರಿಬಾಲ್ ಸಿಂಗ್ ಪಾತ್ರದ ಕುರಿತು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

66
ಸಮರ್ಥ್ ಸಿಂಗ್ ಹಾಗೂ ಗಿರಿಬಾಲ್ ವಿರುದ್ದ ಬಲವಾದ ಸಾಕ್ಷ್ಯ

ಸಮರ್ಥ ಸಿಂಗ್ ಹಾಗೂ ಗಿರಿಬಾಲ್ ವಿರುದ್ಧ ಬಲವಾದ ಸಾಕ್ಷ್ಯಗಳಿವೆ. ಗೂಗಲ್ ಸರ್ಚ್, ವ್ಯಾಟ್ಸಾಪ್ ಚಾಟ್, ತುರ್ತು ಕರೆ ಸೇರಿದಂತೆ ಹಲವು ಸಾಕ್ಷ್ಯಗಳನ್ನು ಸಿಬಿಐ ಪೊಲೀಸರು ಕೋರ್ಟ್‌ಗೆ ಸಲ್ಲಿಕೆ ಮಾಡಿದ್ದಾರೆ. ಇದೀಗ ನ್ಯಾಯಾಂಗ ವಿಚಾರಣೆ ಪ್ರಮುಖ ಹಂತ ತಲುಪಿದೆ. ತ್ವಿಷಾ ಶರ್ಮಾ ಕುಟುಂಬಸ್ಥರು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories