CJPಯಂತೆ ಶುರುವಾದ ದಿಮಾಗಿ ನಕ್ಸಲ್ ಜನತಾ ಪಾರ್ಟಿ; ಇನ್‌ಸ್ಟಾಗ್ರಾಂನಿಂದ ಕಣ್ಮರೆಯಾದ ಖಾತೆ

Published : Aug 17, 2026, 12:09 PM IST

ಪ್ರಧಾನಿ ನರೇಂದ್ರ ಮೋದಿಯವರ "ದಿಮಾಗಿ ನಕ್ಸಲ್" ಹೇಳಿಕೆಯ ನಂತರ ಸೋಶಿಯಲ್ ಮೀಡಿಯಾದಲ್ಲಿ "ದಿಮಾಗಿ ನಕ್ಸಲ್ ಜನತಾ ಪಾರ್ಟಿ" ಎಂಬ ಖಾತೆಯೊಂದು ಸಂಚಲನ ಸೃಷ್ಟಿಸಿದೆ. ಇನ್‌ಸ್ಟಾಗ್ರಾಂನಿಂದ ಕಣ್ಮರೆಯಾದ ಈ ಖಾತೆಯು ಎಕ್ಸ್‌ನಲ್ಲಿ ಮತ್ತೆ ಹುಟ್ಟಿಕೊಂಡಿದೆ.

PREV
16
ದಿಮಾಗಿ ನಕ್ಸಲ್ ಜನತಾ ಪಾರ್ಟಿ

ಇತ್ತೀಚಿನ ಪ್ರಧಾನಿ ನರೇಂದ್ರ ಮೋದಿ ಅವರ "ದಿಮಾಗಿ ನಕ್ಸಲ್" ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಕಾಕ್ರೋಚ್ ಜನತಾ ಪಾರ್ಟಿ ಮಾದರಿಯಲ್ಲಿಯೇ ಇನ್‌ಸ್ಟಾಗ್ರಾಂನಲ್ಲೊಂದು "ದಿಮಾಗಿ ನಕ್ಸಲ್ ಜನತಾ ಪಾರ್ಟಿ" ಎಂಬ ಖಾತೆಯನ್ನು ಆರಂಭಿಸಲಾಗಿತ್ತು. ಅದ್ರೆ ಇದೀಗ ಇನ್‌ಸ್ಟಾಗ್ರಾಂ ಪೇಜ್‌ನಿಂದ ಈ ಖಾತೆ ಮಾಯವಾಗಿದೆ.

26
ಧ್ವನಿ ಅಡಗಿಸೋ ಪ್ರಯತ್ನ

ಎಕ್ಸ್ ನಲ್ಲಿ @DNJP_India ಐಡಿಯಲ್ಲಿ ಖಾತೆ ತೆರೆಯಲಾಗಿದೆ. ಈ ಖಾತೆಯಿಂದ 15ಕ್ಕೂ ಅಧಿಕ ಖಾತೆಗಳನ್ನು ಫಾಲೋ ಮಾಡಲಾಗಿದೆ. ತಮ್ಮ ಇನ್‌ಸ್ಟಾಗ್ರಾಂ ಖಾತೆ ಅಳಿಸಿರುವ ಬಗ್ಗೆ ಎಕ್ಸ್ ಖಾತೆಯಲ್ಲಿ, ನಮ್ಮ ಇನ್‌ಸ್ಟಾಗ್ರಾಂ ಖಾತೆ ಮೇಲೆ ಸೈಬರ್ ದಾಳಿ ನಡೆದಿದೆ. ನಮ್ಮ ಧ್ವನಿಯನ್ನು ಎಲ್ಲಿಯವರೆಗೆ ಹತ್ತಿಕ್ಕಲಾಗುತ್ತೆ ಎಂದು ನೋಡೋಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

36
15 ಖಾತೆಗಳನ್ನು ಫಾಲೋ ಮಾಡ್ತಿರೋ ದಿಮಾಗಿ ನಕ್ಸಲ್ ಜನತಾ ಪಾರ್ಟಿ

@DNJP_India ಎಕ್ಸ್ ಖಾತೆಯಿಂದ ಲೋಕಸಭಾ ವಿರೋಧ ಪಕ್ಷದ ನಾಯಕ ಸಂಸದ ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಎಎಪಿ ನಾಯಕ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಯುಟ್ಯೂಬರ್ ದೃವ್ ರಾಠಿ, ಕಾಮಿಡಿಯನ್ ಕೃಣಾಲ್ ಕಾಮ್ರಾ, ನಟ ಪ್ರಕಾಶ್ ರಾಜ್ ಸೇರಿದಂತೆ 15 ಅಕೌಂಟ್‌ಗಳು ಸೇರಿವೆ.

46
ಏರಿಕೆಯಾಗುತ್ತಿರುವ ಫಾಲೋವರ್ಸ್ ಸಂಖ್ಯೆ

ವಿವಿಧ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರಂಗಳಲ್ಲಿ ದಿಮಾಗಿ ನಕ್ಸಲ್ ಜನತಾ ಪಾರ್ಟಿ ಖಾತೆಯ ಫಾಲೋವರ್ಸ್ ಸಂಖ್ಯೆ ವೇಗವಾಗಿ ಏರಿಕೆಯಾಗುತ್ತಿದೆ. ಖಾತೆ ಆರಂಭವಾದ ಮೊದಲ ದಿನವೇ 50 ಸಾವಿರಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿದೆ. ಸದ್ಯ ಕ್ಷಣ ಕ್ಷಣಕ್ಕೂ ದಿಮಾಗಿ ನಕ್ಸಲ್ ಜನತಾ ಪಾರ್ಟಿ ಇನ್‌ಸ್ಟಾಗ್ರಾಂ ಖಾತೆಯ ಫಾಲೋವರ್ಸ್ ಸಂಖ್ಯೆ ಏರಿಕೆಯಾಗುತ್ತಿದೆ. Think, Research, Resist ಎಂಬ ಸ್ಲೋಗನ್‌ನ್ನು ಈ ಪಕ್ಷ ಹೊಂದಿದೆ.

56
ಏನಿದು ದಿಮಾಗಿ ನಕ್ಸಲ್?

ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ದಿಮಾಗಿ ನಕ್ಸಲ್‌ಗಳಿಗೆ ಅಂದ್ರೆ ಮಾನಸಿಕ ನಕ್ಸಲರಿಗೆ ಎಚ್ಚರಿಕೆಯನ್ನು ನೀಡಿದ್ದರು. ನಕ್ಸಲ್ ಮನಸ್ಥಿತಿಯನ್ನು ಹಂಚಿಕೊಳ್ಳುವ ಅಂದ್ರೆ ಸಮಾಜದದಲ್ಲಿ ಅಶಾಂತಿಯನ್ನು ಹರಡಲು ಪ್ರಯತ್ನಿಸುವರನ್ನು ಗುರಿಯಾಗಿಸಿ ಈ ಪದವನ್ನು ಬಳಕೆ ಮಾಡಿದ್ದರು.

66
ಮಾನಸಿಕ ನಕ್ಸಲರು

ಪ್ರಧಾನಿ ಮೋದಿಯವರು ಭಾಷಣದಲ್ಲಿ ಯಾವುದೇ ನಿರ್ದಿಷ್ಟ ಗುಂಪನ್ನು ಹೆಸರಿಸದಿದ್ದರೂ, ಈ ಹೇಳಿಕೆಯು ಗಮನಾರ್ಹ ರಾಜಕೀಯ ವಿವಾದವನ್ನು ಹುಟ್ಟುಹಾಕಿತು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ನಾಯಕ ಪಿ. ಚಿದಂಬರಂ, ಕೆಲವರು ತಮ್ಮನ್ನು "ಮಾನಸಿಕ ನಕ್ಸಲರು" ಎಂದು ಕರೆಯಲು ಹೆಮ್ಮೆಪಡುತ್ತಾರೆ ಎಂದು ಹೇಳಿದ್ದರು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ದಿಮಾಗಿ ನಕ್ಸಲ್ ಜನತಾ ಪಾರ್ಟಿ ಹೆಸರಿನ ಖಾತೆಯೊಂದು ಹುಟ್ಟಿಕೊಂಡಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories