ಮುತ್ತಿನ ಮತ್ತಿನ ಲೀವ್ ಇನ್ ರಿಲೇಶನ್‌ಶಿಪ್ ದುರಂತ, ಯುವತಿ ನೀರಿನ ಟ್ಯಾಂಕ್‌ನಲ್ಲಿ ಶವವಾಗಿ ಪತ್ತೆ, ಚಿನ್ನ ಚಿನ್ನ ಎಂದು ಹಿಂದೆ ಬಿದ್ದು ಪಾರ್ಟ್ನರ್ ಮಾಡಿಕೊಂಡಿದ್ದ. ಹಲವು ಕನಸುಗಳೊಂದಿಗೆ ಪಾರ್ಟ್ನರ್ ಜೊತೆ ಕಾಲ ಕಳೆದ ಯುವತಿ ನೀರಿನ ಟ್ಯಾಂಕ್‌ನಲ್ಲಿ ಎಸೆದ ಪೆಟ್ಟಿಗೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ಲೀವ್ ಇನ್ ರಿಲೇಶನ್‌ಶಿಪ್ ಕೊನೆಯವರೆಗೂ ಅದೇ ರೀತಿ ನಿರ್ವಹಣೆ ಮಾಡಿದ ಉದಾಹರಣೆ ಕಡಿಮೆ. ಹಲವು ಲೀವ್ ಇನ್ ರಿಲೇಶನ್‌ಶಿಪ್ ಸಂಬಂಧ ದುರಂತದಲ್ಲೇ ಅಂತ್ಯಕಂಡಿದೆ. ಇತ್ತೀಚೆಗೆ ಈ ಸಂಬಂಧ ಅತ್ಯಂತ ಕರಾಳ ಘಟನೆಗಳಿಗೂ ಸಾಕ್ಷಿಯಾಗಿದೆ. ಇದಕ್ಕೆ ಮತ್ತೊಂದು ಸೇರಿಕೊಂಡಿದೆ. ಚಿನ್ನ, ರನ್ನಾ ಎಂದು ಹಿಂದೆ ಬಂದಿದ್ದವನ ಜೊತೆ ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವತಿ ಇದೀಗ ದುರಂತ ಅಂತ್ಯಕಂಡಿದ್ದಾಳೆ. ಒಂದೇ ರೂಂನಲ್ಲಿ ಮುತ್ತಿನ ಮತ್ತಿನಲ್ಲಿದ್ದ ಈ ಜೋಡಿ ಸಂಬಂಧ ಅಂತ್ಯಗೊಂಡಿದ್ದು ಮಾತ್ರವಲ್ಲ, ಯುವತಿ ಪಕ್ಕದ ನಿರೀನ ಟ್ಯಾಂಕ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮತ್ತೊಂದು ದುರಂತ ಎಂದರೆ ಮೃತದೇಹ ವಿಲೇವಾರಿ ಮಾಡಲು ಯುವಕನ ತಾಯಿ, ಸಹೋದರ, ಸಹೋದರಿ ನೆರವು ನೀಡಿರುವ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ.
26
ಗೆಳತಿಯನ್ನೇ ಮುಗಿಸಿದ
ಪ್ರೀತಿ, ಲೀವ್ ಇನ್ ರಿಲೇಶನ್‌ಶಿಪ್ ಈಗ ಹೊಸದೇನು ಅಲ್ಲ. ಆದರೆ ಈ ಸಂಬಂಧದಿಂದ ಆಗಿರುವ ಪ್ರಯೋಜನಕ್ಕಿಂತ ದುರಂತಗಳೇ ಹೆಚ್ಚಾಗುತ್ತಿದೆ. ಕಮಲಾನಗರದಲ್ಲಿ ಇವರಿಬ್ಬರು ವಾಸವಿದ್ದರು. ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಈ ಜೋಡಿ ಒಂದೇ ಮನೆಯಲ್ಲಿದ್ದರು. ಇವರ ನಡುವೆ ಜಗಳ ಶುರುವಾಗಿದೆ. ಸಂಬಂಧ ಅಂತ್ಯಗೊಂಡಿದ್ದರೂ ಪರ್ವಾಗಿರಲಿಲ್ಲ ಆದರೆ ಗೆಳತಿಯನ್ನೇ ಮುಗಿಸಲಾಗಿದೆ.
36
ಕೊಲೆ ಮಾಡಿ ಮನೆಯಲ್ಲೇ ಇಟ್ಟ ಶವ
ಜಗಳದ ತಾರಕಕ್ಕೇರಿದ ಬೆನ್ನಲ್ಲೇ ಗೆಳತಿಯನ್ನು ಹತ್ಯೆ ಮಾಡಿದ್ದಾನೆ. ಬಳಿಕ ಒಂದು ದಿನ ಶವವನ್ನು ಮನೆಯಲ್ಲೇ ಇಟ್ಟಿದ್ದಾನೆ. ಇಡೀ ರಾತಿ ಶವ ಹೇಗೆ ವಿಲೇವಾರಿ ಮಾಡಬೇಕು ಎಂದು ಯೋಚಿಸಿದ್ದಾನೆ. ಆದರೆ ತನ್ನ ಐಡಿಯಾಗಳು ಸರಿಯಾಗಿಲ್ಲ ಎಂದು ಎನಿಸಿದೆ. ಹೀಗಾಗಿ ಖತರ್ನಾಕ್ ಗೆಳೆಯ ತನ್ನ ತಾಯಿ, ಸಹೋದರ ಹಾಗೂ ಸಹೋದರಿ ನೆರವು ಪಡೆದಿದ್ದಾನೆ.
ಶವವನ್ನು ಪೆಟ್ಟಿಗೆಯಲ್ಲಿ ಇಟ್ಟು ನೀರಿನ ಟ್ಯಾಂಕ್‌ಗೆ ಎಸೆದ ಪಾಪಿ
ತಾಯಿ, ಸಹೋದರ, ಸಹೋದರಿಯ ನೆರವಿನಿಂದ ಯುವತಿಯ ಶವವನ್ನು ಪೆಟ್ಟಿಗೆ ತುಂಬಿದ್ದಾರೆ. ಬಳಿಕ ಮನೆಯಿಂದ 200 ಮೀಟರ್ ದೂರದಲ್ಲಿರುವ ನೀರಿನ ಟ್ಯಾಂಕ್‌ಗೆ ಎಸೆದಿದ್ದಾರೆ. ಶವ ಪೆಟ್ಟಿಗೆ ಸಮೇತ ಮೇಲೆ ಬರಬಾರದು ಎಂದು ಕಲ್ಲುಗಳನ್ನು ಇಡಲಾಗಿದೆ. ಶವ ಸಾಗಿಸಲು ಈತನ ಬಂಧುಮಿತ್ರರು ನೆರವು ನೀಡಿದ್ದಾರೆ.
56
ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ
ನೀರಿನ ಟ್ಯಾಂಕ್ ಬಳಿಕ ಕೆಟ್ಟ ವಾಸನೆ ಬರುತ್ತಿದ್ದ ಕಾರಣ ಸ್ಥಳೀಯರು ಅನುಮಾನಗೊಂಡಿದ್ದಾರೆ. ಹೀಗಾಗಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪೊಲೀಸರು ಆಗಮಿಸಿದಾಗ ಕೆಲ ಸುಳಿವು ಸಿಕ್ಕಿದೆ. ಹೀಗಾಗಿ ನೀರಿನ ಟ್ಯಾಂಕಿಯಲ್ಲಿರುವ ಎಲ್ಲಾ ನೀರು ಖಾಲಿ ಮಾಡಲು ಸೂಚಿಸಲಾಗಿದೆ. ಬಳಿಕ ಟ್ಯಾಂಕಿಯಲ್ಲಿದ್ದ ಪೆಟ್ಟಿಗೆ ಹೊರತೆಗೆದಾಗ ಘಟನೆ ಬಳೆಕಿಗೆ ಬಂದಿದೆ.
66
ಪಾಟ್ನರ್ ಸೇರಿ ನಾಲ್ವರು ಅರೆಸ್ಟ್
ಕಾರ್ಯಪ್ರವೃತ್ತರಾದ ಪೊಲೀಸ್ ತನಿಖೆ ತೀವ್ರಗೊಳಿಸಿದ್ದಾರೆ. ಯುವತಿ ಗುರುತು ಪತ್ತೆ ಹಚ್ಚಿದ ಬೆನ್ನಲ್ಲೇ ಒಂದೊಂದೇ ಘಟನೆಗಳು ಅನಾವರಣಗೊಂಡಿದೆ. ತಕ್ಷಣವೇ ಗೆಳತಿಯ ಲೀವ್ ಇನ್ ಪಾರ್ಟ್ನರ್ ಗೆಳೆಯ, ಆತನ ತಾಯಿ, ಸಹೋದರ ಹಾಗೂ ಸಹೋದರಿ ನಾಲ್ವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ