ನಟಿ ಕೋಯಲ್ ಮಲಿಕ್ ದಿಢೀರ್ ಶಾಕ್ ನೀಡಿದ್ದಾರೆ. ರಾಜ್ಯಸಭೆಗೆ ನೇಮಕಗೊಂಡ ಮೂರೇ ತಿಂಗಳಿಗೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ಅಷ್ಟಕ್ಕೂ ನಟಿ ಕೋಯಲ್ ಮಲಿಕ್ ದಿಢೀರ್ ನಿರ್ಧಾರಕ್ಕೆ ಕಾರಣವೇನು?
ನಟಿ ಕೊಯೆಲ್ ಮಲಿಕ್ ಕೊಟ್ಟ ಶಾಕ್‌ಗೆ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಹಾಗೂ ಮಮತಾ ಬ್ಯಾನರ್ಜಿ ಕಂಗಾಲಾಗಿದ್ದಾರೆ. ಕಾರಣ ಈಗಾಗಲೇ ಟಿಎಂಸಿ ಇಬ್ಬಾಗವಾಗಿದೆ. ಬಂಡಾಯ ಬಣದ ಸದಸ್ಯರ ಸಂಖ್ಯೆ ಹೆಚ್ಚಾಗುತ್ತಿದೆ. ಒಬ್ಬರ ಹಿಂದೊಬ್ಬರು ಟಿಎಂಸಿಯಿಂದ ದೂರ ಸರಿಯುತ್ತಿದ್ದಾರೆ. ಇದರ ನಡುವೆ ನಟಿ ಕೋಯಲ್ ಮಲಿಕ್ ಮೂರೇ ತಿಂಗಳಿಗೆ ರಾಜ್ಯಸಭಾ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
26
ಮಮತಾ ಬ್ಯಾನರ್ಜಿ ಕಂಗಾಲು
ಮಮತಾ ಬ್ಯಾನರ್ಜಿ ಪಕ್ಷಕ್ಕೆ ಗ್ಲಾಮರ್ ಟಚ್ ಕೊಟ್ಟು ಜನರ ಮತಗಳಿಸಲು ನಡೆಸಿದ ಎಲ್ಲಾ ಕಸರತ್ತುಗಳು ಹಳ್ಳ ಹಿಡಿಯುತ್ತಿದೆ.ಎಪ್ರಿಲ್ 6 ರಂದು ನಟಿ ಕೋಯಲ್ ಮಲಿಕ್ ರಾಜ್ಯಸಭಾ ಸಂಸದೆಯಾಗಿ ಆಯ್ಕೆಯಾಗಿದ್ದರು. ಮಮತಾ ಬ್ಯಾನರ್ಜಿ ನಡೆಗೆ ಟಿಎಂಸಿ ನಾಯಕರು ಚಪ್ಪಾಳೆ ಹೊಡೆದಿದ್ದರು. ಆದರೆ ಮೂರೇ ತಿಂಗಳಲ್ಲಿ ರಾಜ್ಯಸಭಾ ಸಂಸದ ಸ್ಥಾನಕ್ಕೆ ಕೊಯೆಲ್ ಮಲಿಕ್ ರಾಜೀನಾಮೆ ನೀಡಿದ್ದಾರೆ.
36
ಸಿನಿಮಾ ಮೂಲಕ ಜನಪ್ರಿಯತೆ
ಬಂಗಾಳಿ ಸಿನಿಮಾ ಮೂಲಕ ಭಾರಿ ಜನಪ್ರಿಯರಾಗಿರುವ ನಟಿ ಕೋಯೆಲ್ ಮಲಿಕ್ ತಮ್ಮ ನಟನೆಗೆ ಹಲವು ಪುರಸ್ಕಾರ ಪಡೆದಿದ್ದಾರೆ. ಬಂಗಾಳ ಫಿಲ್ಮ್ ಫೇರ್ ಅವಾರ್ಡ್, ಆನಂದಲೋಕ ಪುರಸ್ಕಾರ, ಪಶ್ಚಿಮ ಬಂಗಾಳ ಸರ್ಕಾರ ನೀಡುವ ಮಹಾನಾಯಕ ಸಮ್ಮಾನ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇದೇ ಜನಪ್ರಿಯತೆಯನ್ನು ಮಮತಾ ಬ್ಯಾನರ್ಜಿ ಬಳಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಇದೀಗ ರಾಜೀನಾಮೆ ಮೂಲಕ ಭಾರಿ ಹಿನ್ನಡೆಯಾಗಿದೆ.
ಫೆಬ್ರವರಿ 27, 2026ರಂದು ಟಿಎಂಸಿ ಪಕ್ಷ ಕೋಯೆಲ್ ಮಲಿಕ್ ತನ್ನ ರಾಜ್ಯಸಭಾ ಅಭ್ಯರ್ಥಿ ಎಂದು ಘೋಷಿಸಿತ್ತು. 16ನೇ ಮಾರ್ಚ್‌ರಂದು ಚುನಾವಣೆ ನಡೆದಿತ್ತು. ಎಪ್ರಿಲ್ 16ರಂದು ಕೋಯೆಲ್ ಮಲಿಕ್ ರಾಜ್ಯಸಭಾ ಸಂಸದೆಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.ಜೂನ್ 11 ರಂದು ರಾಜೀನಾಮೆ ಪತ್ರ ರವಾನಿಸಿದರೆ, ಇದೀಗ ಸ್ವೀಕೃತಗೊಂಡಿದೆ.
56
ಮದನ್ ಮಿತ್ರಾ ಬೆನ್ನಲ್ಲೇ ಕೊಯೆಲ್ ಔಟ್
ಟಿಎಂಸಿ ನಾಯಕ ಮದನ್ ಮಿತ್ರಾ ಇತ್ತೀಚೆಗಷ್ಟೇ ಟಿಎಂಸಿಗೆ ರಾಜೀನಾಮೆ ನೀಡಿದ್ದರು. ಬಳಿಕ ರಿತಬ್ರತಾ ಬ್ಯಾನರ್ಜಿ ಮುಂದಾಳತ್ವದಲ್ಲಿರುವ ಟಿಎಂಸಿ ಬಂಡಾಯ ಪಡೆ ಸೇರಿಕೊಂಡಿದ್ದಾರೆ. ಮದನ್ ಮಿತ್ರಾ ಬೆನ್ನಲ್ಲೇ ಇದೀಗ ಕೋಯೆಲ್ ಮಲಿಕ್ ರಾಜ್ಯಸಭಾ ಸಂಸದೆಗೆ ರಾಜೀನಾಮೆ ನೀಡಿದ್ದಾರೆ. ಇದೀಗ ಬಂಡಾಯ ಪಡೆ ಸೇರಿಕೊಳ್ಳುತ್ತಾರೋ ಅನ್ನೋ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.
66
ಪಶ್ಚಿಮ ಬಂಗಾಳದಲ್ಲಿ ಕೋಲಾಹಲ
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಟಿಎಂಸಿ ಒಡೆದು ಹೋಳಾಗಿದೆ. ಮಮತಾ ಬ್ಯಾನರ್ಜಿ ವಿರುದ್ಧವೇ ಬಂಡಾಯ ಎದ್ದಿದೆ. ಪಕ್ಷದಿಂದ ಒಬ್ಬರ ಹಿಂದೆ ಒಬ್ಬರಾಗಿ ರಾಜೀನಾಮೆ ನೀಡುತ್ತಿದ್ದಾರೆ. 20 ಲೋಕಸಭಾ ಸಂಸದರು ಈಗಾಗಲೇ ಟಿಎಂಸಿಯಿಂದ ಹೊರಬಂದು ನ್ಯಾಷನಲ್ ಸಿಟಿಜನ್ ಪಾರ್ಟಿ ಸೇರಿಕೊಂಡಿದ್ದಾರೆ.ಇದೀಗ ಕೋಯಲ್ ಕೂಡ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ