ಭಾರತದ ಮೊಟ್ಟ ಮೊದಲ ಹೈಡ್ರೋಜನ್ ರೈಲಿಗೆ ನಾಳೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಈ ರೈಲಿಗೆ ಇಂಧನವಾಗಿ ಹೈಡ್ರೋಜನ್ ಬಳಸಲಾಗುತ್ತೆ. ಯಾವ ಮಾರ್ಗದಲ್ಲಿ ಈ ರೈಲು ಸೇವೆ ನೀಡಲಿದೆ. ವಿಶೇಷತೆ ಸೇರಿದಂತೆ ಸಂಪೂರ್ಣ ಡಿಟೇಲ್ ಇಲ್ಲಿದೆ.
ಭಾರತದಲ್ಲಿ ಮೊದಲ ಬಾರಿಗೆ ಹೈಡ್ರೋಜನ್ ರೈಲು ಸೇವೆಗೆ ಸಿದ್ಧವಾಗಿದೆ. ನಾಳೆ (ಜು.17) ಪ್ರಧಾನಿ ನರೇಂದ್ರ ಮೋದಿ ಹೈಡ್ರೋಜನ್ ಚಾಲಿತ ರೈಲಿಗೆ ಚಾಲನೆ ನೀಡಲಿದ್ದಾರೆ. ಸಂಪೂರ್ಣವಾಗಿ ಹೈಡ್ರೋಜನ್ ಮೂಲಕ ಈ ರೈಲು ಓಡಲಿದೆ. ಹೀಗಾಗಿ ಪರಿಸರಕ್ಕೆ ಪೂರಕವಾಗಿ ಹಾಗೂ ಕಡಿಮೆ ನಿರ್ವಹಣೆ ವೆಚ್ಚದಲ್ಲಿ ಈ ರೈಲು ಸಾಗಲಿದೆ. ಈ ಮೂಲಕ ಭಾರತೀಯ ರೈಲ್ವೇ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ತೆರೆದುಕೊಳ್ಳುತ್ತಿದೆ.
26
ಯಾವ ಮಾರ್ಗದಲ್ಲಿ ಹೈಡ್ರೋಜನ್ ರೈಲು ಸೇವೆ
ಭಾರತದ ಮೊದಲ ಹೈಡ್ರೋಜನ್ ರೈಲು ಹರ್ಯಾಣದ ಜಿಂದ್‌ನಿಂದ ಸೋನಿಪತ್‌ಗೆ ಸೇವೆ ನೀಡಲಿದೆ. ಒಟ್ಟು 89 ಕಿಲೋಮೀಟರ್ ಪ್ರಯಾಣವಿದೆ. ಪ್ರತಿ ದಿನ 2 ರೌಂಡ್ ಟ್ರಿಪ್ ಮಾಡಲಿದೆ. ಒಟ್ಟು 2600 ಪ್ರಯಾಣಿಕರನ್ನು ಹೊತ್ತೊಯ್ಯಲಿದೆ. ಒಟ್ಟು 12 ನಿಲ್ದಾಣಗಳಲ್ಲಿ ರೈಲು ನಿಲುಗಡೆಯಾಗಲಿದೆ.
36
ಈ ರೈಲಿನ ತಂತ್ರಜ್ಞಾನವೇನು?
ಜಿಂದ್ ಟು ಸೋನಿಪತ್ ಸೇವೆ ನೀಡಲಿರುವ ಭಾರತದ ಮೊದಲ ಹೈಡ್ರೋಜನ್ ರೈಲು 1,200 ಕಿಲೋವ್ಯಾಟ್ ಹೈಡ್ರೋಜನ್ ಇಂಧನ ಪ್ರೊಪಲ್ಶನ್ ಸಿಸ್ಟಮ್ ಹೊಂದಿದೆ. ತುಂಬಿಸುವ ಹೈಡ್ರೋಜನ್‌ಗೆ ಆಮ್ಲಜನ ಸೇರಿಸಿ ವಿದ್ಯುತ್ ಉತ್ಪಾದಿಸಲಾಗುತ್ತದೆ. ಈ ವಿದ್ಯುತ್‌ನಿಂದ ರೈಲಿನ ಮೋಟಾರು ಜಲಿಸಲಿದೆ. ಇದು ಕಾರ್ಬನ್ ಮುಕ್ತ ಹಾಗೂ ಪರಿಸರಕ್ಕೆ ಪೂರಕವಾಗಿದೆ. ವಿಶೇಷವಾಗಿ ಎಲ್ಲೆಲ್ಲ ರೈಲು ವಿದ್ಯುದ್ದೀಕರಣ ಆಗಿಲ್ಲವೋ ಅಲ್ಲಿ ಈ ರೈಲು ಬಳಸಲು ಸೂಕ್ತ.
ನಾಳೆ ಪ್ರಧಾನಿ ಮೋದಿ ಚಾಲನೆ ನೀಡಲಿರುವ ಹೈಡ್ರೋಜನ್ ರೈಲು ಭಾರತದ ಮೊದಲ ಹೈಡ್ರೋಜನ್ ರೈಲು. ಆದರೆ 2022ರಲ್ಲಿ ಜರ್ಮನಿ ಮೊದಲ ಬಾರಿಗೆ ಹೈಡ್ರೋಜನ್ ರೈಲು ಸೇವೆ ಆರಂಭಿಸಿತ್ತು. ಬಳಿಕ ಜಪಾನ್, ಚೀನಾ, ಅಮೆರಿಕ, ಫ್ರಾನ್ಸ್, ಇಟಲಿ, ಆಸ್ಟ್ರಿಯಾ, ಯುಕೆ ಈ ಹೈಡ್ರೋಜನ್ ರೈಲು ಬಳಸುತ್ತಿದೆ. ಹೈಡ್ರೋಜನ್ ರೈಲು ಗಂಟೆಗೆ 120 ಕಿಲೋಮೀಟರ್ ವೇಗದಲ್ಲಿ ಚಲಿಸಲಿದೆ.
56
ಹಲವು ಪ್ರಯೋಗದ ಬಳಿಕ ಸೇವೆ
ಹೈಡ್ರೋಜನ್ ರೈಲಿನಲ್ಲಿ ಇತರ ರೈಲಿನಲ್ಲಿರುವಂತೆ ಎಲ್ಲಾ ಸುರಕ್ಷತಾ ವಿಧಾನ ಅಳವಡಿಸಲಾಗಿದೆ. ಇನ್ನು ಇದಕ್ಕಾಗಿ ವಿಶೇಷ ತಂತ್ರಜ್ಞರ ತಂಡವೂ ಲಭ್ಯವಿದೆ. ತಾಂತ್ರಿಕ ಬೆಂಬಲ ಸೇರಿದಂತೆ ಎಲ್ಲಾ ನೆರವು ನೀಡಲಾಗಿದೆ. ಈಗಾಗಲೇ ಹಲವು ಬಾರಿ ಪ್ರಯೋಗದ ಬಳಿಕ ನಾಳೆ ಅಧಿಕೃತವಾಗಿ ಹೈಡ್ರೋಜನ್ ರೈಲು ಸೇವೆ ಆರಂಭಿಸಲಿದೆ.
66
ಹೊಸ ರೈಲು, ಹೊಸ ಭಾರತ
ವಿದ್ಯುದ್ದೀಕರಣ ಇಲ್ಲದ ಕೆಲ ಪ್ರದೇಶಗಳಲ್ಲಿ ಈ ಹೈಡ್ರೋಜನ್ ರೈಲು ಬಳಕೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಕೆಲ ದುರ್ಗಮ ಪ್ರದೇಶ, ಬೆಟ್ಟ, ಗುಡ್ಡಗಳ ನಡುವೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಸವಾಲಾಗಿರುತ್ತದೆ. ಈ ಪ್ರದೇಶಗಲ್ಲಿ ಹೈಡ್ರೋಜನ್ ರೈಲು ಬಳಸುವ ಉದ್ದೇಶವಿದೆ. ಇನ್ನು ಸಬರ್ಬನ್ ರೈಲುಗಳಲ್ಲೂ ಹೈಡ್ರೋಜನ್ ರೈಲು ಬಳಕೆಗೆ ರೂಪುರೇಶೆ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ