ಮುಕೇಶ್ ಅಂಬಾನಿ ಮನೆ 'ಆಂಟಿಲಿಯಾ' ಈಗ ಮಾರಾಟ ಮಾಡಿದ್ರೆ ಬೆಲೆ ಎಷ್ಟು? ಮಾರುಕಟ್ಟೆ ದರ

Published : Jul 16, 2026, 11:43 AM IST

ಭಾರತದ ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಅವರ 'ಆಂಟಿಲಿಯಾ' ಮನೆ 2010ರಲ್ಲಿ ಸುಮಾರು 15,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿತ್ತು. ಆದರೆ, ಇಂದಿನ ಮಾರುಕಟ್ಟೆ ದರದಲ್ಲಿ ಇದೇ ಮನೆಯನ್ನು ಮತ್ತೆ ಕಟ್ಟಲು ಎಷ್ಟು ಹಣ ಬೇಕಾಗಬಹುದು ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.

PREV
16
ಆಂಟಿಲಿಯಾ

ಭಾರತದ ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ, ತಮ್ಮ ಕುಟುಂಬದ ಜೊತೆ ಮುಂಬೈನಲ್ಲಿರುವ 'ಆಂಟಿಲಿಯಾ' ಮನೆಯಲ್ಲಿ ವಾಸಿಸುತ್ತಿದ್ದಾರೆ. ಇದು ವಿಶ್ವದ ಅತ್ಯಂತ ದುಬಾರಿ ಮನೆಗಳಲ್ಲಿ ಒಂದಾಗಿದೆ. ಆಂಟಿಲಿಯಾ ಐಷಾರಾಮಿ ಸೌಲಭ್ಯಗಳು ಮತ್ತು ವಿನ್ಯಾಸದಿಂದಾಗಿ ಸುದ್ದಿಯಲ್ಲಿರುತ್ತದೆ. ಆಂಟಿಲಿಯಾ ಕಟ್ಟಡದ ನಿರ್ಮಾಣ ಕಾರ್ಯ 2006ರಲ್ಲಿ ಶುರುವಾಗಿತ್ತು. ಬರೋಬ್ಬರಿ ನಾಲ್ಕು ವರ್ಷಗಳ ನಂತರ 2010ರಲ್ಲಿ ಆಂಟಿಲಿಯಾ ಪೂರ್ಣಗೊಂಡಿತು.

26
ಆಂಟಿಲಿಯಾ ನಿರ್ಮಾಣಕ್ಕೆ ಸುಮಾರು 15,000 ಕೋಟಿ ರೂಪಾಯಿ ಖರ್ಚು

2006 ರಿಂದ 2010ರ ಸಮಯದಲ್ಲಿ ಆಂಟಿಲಿಯಾ ನಿರ್ಮಾಣಕ್ಕೆ ಸುಮಾರು 15,000 ಕೋಟಿ ರೂಪಾಯಿ ಖರ್ಚಾಗಿತ್ತು ಎಂಬ ವರದಿಗಳಿವೆ. ಅಂದಿನ ಅಮೆರಿಕನ್ ಡಾಲರ್ ಮೌಲ್ಯದಲ್ಲಿ ಇದು ಸುಮಾರು 2 ಬಿಲಿಯನ್ ಡಾಲರ್ ಆಗಿತ್ತು. ಇದರ ಅಡಿಪಾಯಕ್ಕಾಗಿಯೇ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಲಾಗಿತಂತೆ. ಆದರೆ, ಇದೇ ಆಂಟಿಲಿಯಾ ಮನೆಯನ್ನು ಈಗ ಅದೇ ಗಾತ್ರ ಮತ್ತು ಗುಣಮಟ್ಟದಲ್ಲಿ ಮತ್ತೆ ಕಟ್ಟಬೇಕಾದರೆ ಎಷ್ಟು ಖರ್ಚಾಗಬಹುದು ಗೊತ್ತಾ? ಆ ಕುರಿತ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.

36
38 ರಿಂದ 40,000 ಕೋಟಿ

ರಿಯಲ್ ಎಸ್ಟೇಟ್ ತಜ್ಞರ ಪ್ರಕಾರ, ನಿರ್ಮಾಣ ಸಾಮಗ್ರಿಗಳ ಬೆಲೆ, ಭೂಮಿಯ ಮೌಲ್ಯ ಮತ್ತು ತಂತ್ರಜ್ಞಾನದ ವೆಚ್ಚಗಳು ಹಲವು ಪಟ್ಟು ಹೆಚ್ಚಾಗಿರುವುದರಿಂದ, ಇಂದು ಆಂಟಿಲಿಯಾವನ್ನು ಹೊಸದಾಗಿ ಕಟ್ಟಲು 38,000 ಕೋಟಿ ರೂಪಾಯಿಗಿಂತ ಹೆಚ್ಚು ಖರ್ಚಾಗುತ್ತದೆಯಂತೆ. ಕೆಲವು ಅಂದಾಜಿನ ಪ್ರಕಾರ, ಇದರ ಮೌಲ್ಯ 40,000 ಕೋಟಿ ರೂಪಾಯಿ ತಲುಪಿದರೂ ಅಚ್ಚರಿಯಿಲ್ಲ. ಸುಮಾರು 4 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿರುವ ಈ ಬಂಗಲೆ, ಪ್ರಬಲ ಭೂಕಂಪವನ್ನ ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.

46
ಆಂಟಿಲಿಯಾದಲ್ಲಿ ಏನೇನಿದೆ?

ಈ ಮನೆಯಲ್ಲಿ ಮೂರು ಹೆಲಿಪ್ಯಾಡ್‌ಗಳು, ಹಲವು ಅಂತಸ್ತಿನ ಕಾರ್ ಪಾರ್ಕಿಂಗ್, ಖಾಸಗಿ ಚಿತ್ರಮಂದಿರ, ಜಿಮ್, ಸ್ಪಾ, ದೇವಸ್ಥಾನ ಸೇರಿದಂತೆ ಹಲವಾರು ಐಷಾರಾಮಿ ಸೌಲಭ್ಯಗಳಿವೆ. ಮುಂಬೈನ ಬಿಸಿ ವಾತಾವರಣವನ್ನು ಗಮನದಲ್ಲಿಟ್ಟುಕೊಂಡು,

56
ಸ್ನೋ ರೂಮ್

ಮನೆಯೊಳಗೆ ಕೃತಕ ಹಿಮಪಾತದ ಅನುಭವ ನೀಡುವ 'ಸ್ನೋ ರೂಮ್' ಕೂಡ ಇದೆ. ಈ ಸೌಲಭ್ಯವೇ ಆಂಟಿಲಿಯಾವನ್ನು ವಿಶ್ವದ ವಿಶಿಷ್ಟ ಖಾಸಗಿ ಮನೆಗಳಲ್ಲಿ ಒಂದನ್ನಾಗಿ ಮಾಡಿದೆ. ಇದರ ಒಳಾಂಗಣ ವಿನ್ಯಾಸ ಯಾವುದೇ ಅರಮನೆಗೆ ಕಡಿಮೆ ಇಲ್ಲ.

66
ಐಷಾರಾಮಿ ಜೀವನಶೈಲಿ ಮತ್ತು ಆಧುನಿಕ ವಾಸ್ತುಶಿಲ್ಪ

ಪ್ರತಿ ಮಹಡಿಯನ್ನು ವಿಭಿನ್ನವಾದ ವಿನ್ಯಾಸದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಅಂಬಾನಿ ಕುಟುಂಬದ ಆಂಟಿಲಿಯಾ ಕೇವಲ ಒಂದು ಮನೆಯಲ್ಲ. ಇದು ಭಾರತದ ಐಷಾರಾಮಿ ಜೀವನಶೈಲಿ ಮತ್ತು ಆಧುನಿಕ ವಾಸ್ತುಶಿಲ್ಪದ ಜ್ಞಾನವನ್ನು ಜಗತ್ತಿಗೆ ತೋರಿಸುವ ಒಂದು ದೊಡ್ಡ ಸಂಕೇತವಾಗಿದೆ. ಇಂದಿನ ಮಾರುಕಟ್ಟೆ ಮೌಲ್ಯದಲ್ಲಿ ಮುಂಬೈನ ಹೃದಯಭಾಗದಲ್ಲಿ ಇಂತಹ ಬಂಗಲೆಯನ್ನು ಮತ್ತೆ ನಿರ್ಮಿಸುವುದು ತುಂಬಾ ಕಷ್ಟದ ಕೆಲಸವೆಂದೇ ಪರಿಗಣಿಸಲಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories