ತಿರುಪತಿ ಲಡ್ಡು ತಯಾರಿಕೆಗೆ ಬಳಸುವ ತುಪ್ಪದಲ್ಲಿ ಗೋಮಾಂಸದ ಅಂಶಗಳಿವೆ ಎಂದು ಟಿಡಿಪಿ ಆರೋಪಿಸಿದೆ. 2022 ಮತ್ತು 2023ರ ಪ್ರಯೋಗಾಲಯ ವರದಿಗಳು ತುಪ್ಪ ಕಲಬೆರಕೆಯಾಗಿದ್ದು, ಪ್ರಾಣಿಜನ್ಯ ಅಂಶಗಳನ್ನು ಹೊಂದಿದೆ ಎಂದು ದೃಢಪಡಿಸಿವೆ ಎಂದು ಆಡಳಿತಾರೂಢ ಪಕ್ಷ ಹೇಳಿದೆ.
‘ತಿರುಪತಿ ಲಡ್ಡು ತಯಾರಿಕೆಗೆ ಪೂರೈಸಿದ್ದ ಕಲಬೆರಕೆ ತುಪ್ಪವನ್ನು ಸಸ್ಯಜನ್ಯ ಜಿಡ್ಡಿನಿಂದ ತಯಾರಿಸಲಾಗಿತ್ತೇ ಹೊರತೂ, ಅದರಲ್ಲಿ ಗೋಮಾಂಸ, ಹಂದಿಯ ಮಾಂಸದ ಅಂಶಗಳು ಇರಲಿಲ್ಲ’ ಎಂದು ಸಿಬಿಐ ಚಾರ್ಜ್‌ಶೀಟನ್ನು ಉಲ್ಲೇಖಿಸಿ ವೈಎಸ್‌ಆರ್ ಕಾಂಗ್ರೆಸ್ ನಾಯಕರು ನೀಡಿದ್ದ ಹೇಳಿಕೆಯನ್ನು ಆಡಳಿತಾರೂಢ ಟಿಡಿಪಿ (ತೆಲುಗುದೇಶಂ) ತಿರಸ್ಕರಿಸಿದೆ.
24
ತುಪ್ಪ ಕಲಬೆರಕೆ ಆಗಿದೆ
ಈ ಕುರಿತು ಹೇಳಿಕೆ ನೀಡಿರುವ ಆಂಧ್ರಪ್ರದೇಶ ಸರ್ಕಾರದ ಸಚಿವ ಪಿ.ಕೇಶವ, ‘ಟಿಟಿಡಿಗೆ (ತಿರುಮಲ ತಿರುಪತಿ ದೇವಸ್ಥಾನ) ಪೂರೈಸುವ ತುಪ್ಪ ಕಲಬೆರಕೆ ಆಗಿದೆ ಎಂದು 2022ರಲ್ಲಿ ಮೈಸೂರಿನ ಸಿಎಫ್‌ಟಿಆರ್‌ಐ ತನ್ನ ವರದಿಯಲ್ಲಿ ಸ್ಪಷ್ಟಪಡಿಸಿತ್ತು. ಅದರ ಹೊರತಾಗಿಯೂ ವೈಎಸ್ಸಾರ್ ಸರ್ಕಾರ ಕಲಬೆರಕೆ ತುಪ್ಪ ಖರೀದಿ ಮುಂದುವರೆದಿತ್ತು.
34
ತುಪ್ಪದಲ್ಲಿನ ಗೋಮಾಂಸ
2023ರಲ್ಲಿ ಗುಜರಾತ್‌ನ ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿ ಪ್ರಯೋಗಾಲಯದ ವರದಿ, ತುಪ್ಪದಲ್ಲಿ ಪ್ರಾಣಿಜನ್ಯ ಅಂಶಗಳಿವೆ ಎಂದು ಅತ್ಯಂತ ಸ್ಪಷ್ಟವಾಗಿ ಉಲ್ಲೇಖಿಸಿತ್ತು. ಅದರನ್ನು ಆಧರಿಸಿಯೇ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕಲಬೆರಕೆ ತುಪ್ಪದಲ್ಲಿನ ಗೋಮಾಂಸದ ಬಗ್ಗೆ ಪ್ರಸ್ತಾಪಿಸಿದ್ದರು’ ಎಂದರು.
‘ಹಿಂದಿನ ಸಿಎಂ ಜಗನ್‌ಗೆ ತುಪ್ಪ ಖರೀದಿಗೆ ಕೇವಲ ವಾಣಿಜ್ಯ ವ್ಯವಹಾರವಾಗಿತ್ತೇ ವಿನಃ ವೆಂಕಟೇಶ್ವರನ ಮೇಲಿನ ಭಕ್ತಿಯ ವಿಷಯವಾಗಿರಲಿಲ್ಲ. ಅದರೆ ನಾಯ್ಡು ಅವರು ಜವಾಬ್ದಾರಿಯುತ ವ್ಯಕ್ತಿಯಾಗಿರುವ ಕಾರಣ, ಜನರ ಮುಂದೆ ಸತ್ಯಾಂಶ ಬಹಿರಂಗಪಡಿಸಿದ್ದಾರೆ’ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ