ಡಿಎಸ್‌ಪಿ ರಶ್ಮಿ ರಂಜನ್‌ ದಾಸ್‌ಗೆ ದೊಡ್ಡ ತಲೆನೋವಾದ ಕೆಂಪು ಕೂದಲು: ಏನಿದು ವಿವಾದ?

Published : Jan 30, 2026, 08:17 PM IST

ಕರ್ತವ್ಯ ನಿರ್ವಹಿಸುತ್ತಿರುವ ಡಿಎಸ್‌ಪಿ ರಶ್ಮಿ ರಂಜನ್‌ ದಾಸ್‌ ತಮ್ಮ ಕೂದಲಿಗೆ ಕೆಂಪು ಬಣ್ಣ ಬಳಿದುಕೊಂಡಿದ್ದು ವಿವಾದಕ್ಕೆ ಕಾರಣವಾಗಿದೆ. ಇದನ್ನು ಶಿಸ್ತಿನ ಉಲ್ಲಂಘನೆ ಎಂದು ಪರಿಗಣಿಸಿರುವ ಪೊಲೀಸ್ ಇಲಾಖೆ, ಕೂದಲನ್ನು ಮತ್ತೆ ಕಪ್ಪು ಬಣ್ಣಕ್ಕೆ ಬದಲಾಯಿಸುವಂತೆ ಅವರಿಗೆ ಸೂಚನೆ ನೀಡಿದೆ.

PREV
15
ಡಿಎಸ್‌ಪಿಗೆ ಸೂಚನೆ

ಒಡಿಶಾದ ಡಿಎಸ್ಪಿ ಹುದ್ದೆಯಲ್ಲಿದ್ದ ಪೊಲೀಸ್‌ ಅಧಿಕಾರಿಯೊಬ್ಬರು ತಮ್ಮ ತಲೆಗೂದಲಿಗೆ ಬಳಿದುಕೊಂಡ ಕೆಂಪು ಬಣ್ಣವೀಗ ತಲೆನೋವಾಗಿ ಪರಿಣಮಿಸಿದೆ. ಇದೀಗ ಕೆಂಪು ಬಣ್ಣ ಬದಲಿಸುವಂತೆ ಪೊಲೀಸ್ ಇಲಾಖೆ ಡಿಎಸ್‌ಪಿಗೆ ಸೂಚನೆ ನೀಡಲಾಗಿದೆ.

25
ಕೂದಲು ಕಪ್ಪು ಮಾಡಿಕೊಳ್ಳುವಂತೆ ಆದೇಶ

ಜಗತ್‌ಸಿಂಗ್ಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಎಸ್‌ಪಿ ರಶ್ಮಿ ರಂಜನ್‌ ದಾಸ್‌ (49) ತಮ್ಮ ಕೂದಲಿಗೆ ಪೂರ್ತಿ ಕೆಂಪು ಬಣ್ಣ ಬಳಿದುಕೊಂಡವರು. ‘ಇದು ಶಿಸ್ತಿನ ಉಲ್ಲಂಘನೆ’ ಎಂದಿರುವ ಪೊಲೀಸ್‌ ಇಲಾಖೆ, ಕೂದಲು ಕಪ್ಪು ಮಾಡಿಕೊಳ್ಳುವಂತೆ ಆದೇಶಿಸಲಾಗಿದೆ.

35
ಪೊಲೀಸ್‌ ಅಧಿಕಾರಿಗೆ ಇದು ಶೋಭೆ ತರದು

ಪೊಲೀಸ್‌ ಸಮವಸ್ತ್ರ ಧರಿಸಿರುವ ದಾಸ್‌ರ ತಲೆಯ ಮೇಲೆ ಕೆಂಪು ಟೊಪ್ಪಿಯಂತೆ ಕಾಣುವ ಬಣ್ಣದ ಕೂದಲಿನ ಫೋಟೋಗಳು ವೈರಲ್‌ ಆಗಿವೆ, ಜನರಿಂದ ತರಹೇವಾರಿ ಅಭಿಪ್ರಾಯಗಳು ಬರತೊಡಗಿವೆ. ‘ಪೊಲೀಸ್‌ ಅಧಿಕಾರಿಗೆ ಇದು ಶೋಭೆ ತರದು’ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದರೆ, ಇನ್ನೊಂದಿಷ್ಟು ಮಂದಿ, ‘ಕೂದಲಿನ ಬಣ್ಣವನ್ನಾಧರಿಸಿ ಅವರ ವೃತ್ತಿಪರತೆಯನ್ನು ಪ್ರಶ್ನಿಸಲಾಗದು. ಭೂಗತಲೋಕದಲ್ಲಿ ನಡುಕ ಹುಟ್ಟಿಸಿರುವ ಅಧಿಕಾರಿ ಅವರು’ ಎನ್ನುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)

45
ಮೊದಲಿನಂತೆಯೇ ಕಪ್ಪು ಮಾಡಿಕೊಳ್ಳಿ

ಹೀಗಿರುವಾಗ ಐಜಿ ಸತ್ಯಜಿತ್‌ ನಾಯ್ಕ್‌ ಮಧ್ಯಪ್ರವೇಶ ಮಾಡಿದ್ದು, ‘ಪೊಲೀಸ್‌ ವೃತ್ತಿಯಲ್ಲಿರುವವರು ತಮ್ಮ ಸಮವಸ್ತ್ರವನ್ನು ಗೌರವಿಸಬೇಕು ಹಾಗೂ ಶಿಸ್ತಿಗೆ ಆದ್ಯತೆ ನೀಡಬೇಕು. ಅದ್ದರಿಂದ ಕೆಂಪಾಗಿರುವ ಕೂದಲಿನ ಬಣ್ಣವನ್ನು ಮೊದಲಿನಂತೆಯೇ ಕಪ್ಪು ಮಾಡಿಕೊಳ್ಳಿ’ ಎಂದು ಎಚ್ಚರಿಕೆ ನೀಡಿದ್ದಾರೆ. (ಸಾಂದರ್ಭಿಕ ಚಿತ್ರ)

ಇದನ್ನೂ ಓದಿ: ಸತ್ಯ ನನ್ನ ಪರವಾಗಿದೆ, ಸದ್ಯದಲ್ಲೇ ಎಲ್ಲವನ್ನೂ ಹೇಳ್ತೇನೆ; ಪೋಸ್ಟ್ ವೈರಲ್ ಬೆನ್ನಲ್ಲೇ ನಟಿ ಕಾವ್ಯಾ ಗೌಡ ಹೇಳಿಕೆ!

55
ಪ್ರತಿಕ್ರಿಯೆ ನೀಡದ ಅಧಿಕಾರಿ

ಈ ಬಗ್ಗೆ ರಶ್ಮಿ ರಂಜನ್‌ ದಾಸ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪೊಲೀಸ್‌ ಕೈಪಿಡಿಯಲ್ಲಿ ಕೇಶವಿನ್ಯಾಸದ ಬಗ್ಗೆ ಯಾವುದೇ ನಿಯಮಗಳಿರದಿದ್ದರೂ ಅದು ಸರಳವಾಗಿರಬೇಕು ಎಂಬ ನಿಯಮವಿದೆ ಎಂಬುದು ಗಮನಾರ್ಹ. (ಸಾಂದರ್ಭಿಕ ಚಿತ್ರ)

ಇದನ್ನೂ ಓದಿ: ಉದ್ಯಮಿ ಸಿ.ಜೆ. ರಾಯ್ ಸಾವು ಬಗ್ಗೆ ಹಲವು ಅನುಮಾನ: ಆ ಒಂದು ರೂಂ ಓಪನ್ ಮಾಡುವಂತೆ ಕೇರಳ ಐಟಿ ಅಧಿಕಾರಿಗಳ ಒತ್ತಾಯ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories