Ahmedabad ಏರ್‌ ಇಂಡಿಯಾ ವಿಮಾನ ದುರಂತ: 260 ಸಾವು, ಮತ್ತೆ ದಟ್ಟವಾಯ್ತು ಅದೇ ಅನುಮಾನ!

Published : Jan 31, 2026, 08:41 AM IST

260 ಜನರನ್ನು ಬಲಿ ಪಡೆದ ಏರ್‌ ಇಂಡಿಯಾ ವಿಮಾನ ದುರಂತದ ತನಿಖೆಯಲ್ಲಿ ಯಾವುದೇ ತಾಂತ್ರಿಕ ದೋಷ ಅಥವಾ ದುಷ್ಕೃತ್ಯದ ಸಂಚು ಕಂಡುಬಂದಿಲ್ಲ ಎಂದು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ವರದಿ ಮಾಡಿದೆ.

PREV
14
ವಿಮಾನ ಅಪಘಾತ ತನಿಖಾ ಬ್ಯೂರೋ

260 ಜನರನ್ನು ಬಲಿ ಪಡೆದಿದ್ದ ಏರ್‌ ಇಂಡಿಯಾ ದುರಂತಕ್ಕೆ ವಿಮಾನದಲ್ಲಿನ ಯಾವುದೇ ತಾಂತ್ರಿಕ ದೋಷ ಕಾರಣವಲ್ಲ. ಜತೆಗೆ ಅದು ದುಷ್ಕೃಕೃತ್ಯದ ಸಂಚು ಎಂಬುದಕ್ಕೂ ಸಾಕ್ಷಿ ಇಲ್ಲ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ವಿಮಾನ ಅಪಘಾತ ತನಿಖಾ ಬ್ಯೂರೋ(ಎಎಐಬಿ) ವರದಿಯಲ್ಲಿ ಉಲ್ಲೇಖಿಸಲಾಗಿದೆ.

24
ಇಬ್ಬರು ಪೈಲಟ್‌

ಇದರಿಂದಾಗಿ, ಅಪಘಾತಕ್ಕೆ ತುತ್ತಾದ ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳಿಂದಾಗಿಯೇ ದುರ್ಘಟನೆ ಸಂಭವಿಸಿರಬಹುದು ಎಂಬ ಸಂಶಯ ದಟ್ಟವಾಗಿದೆ. ಹೀಗಾಗಿ ಪೈಲಟ್‌ಗಳ ಪಾತ್ರದ ಬಗ್ಗೆ ತನಿಖೆ ಗಮನ ಹರಿಸಿದೆ.

34
2025ರ ಜೂ.12

ಈ ಸಂಬಂಧದ ತನಿಖಾ ವರದಿ ಜೂನ್‌ನಲ್ಲಿ ಅಧಿಕೃತವಾಗಿ ಪ್ರಕಟವಾಗಲಿದೆ ಎಂದು ಬ್ಲೂಂ ಬರ್ಗ್‌ ಸುದ್ದಿಸಂಸ್ಥೆ ವರದಿ ಮಾಡಿದೆ. 2025ರ ಜೂ.12ರಂದು ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್‌ ಇಂಡಿಯಾದ ಬೋಯಿಂಗ್‌ 787 ವಿಮಾನ ಟೇಕ್‌ಆಫ್‌ ಆದ ಕೆಲವೇ ನಿಮಿಷಗಳಲ್ಲಿ ಆಸ್ಪತ್ರೆಯೊಂದಕ್ಕೆ ಅಪ್ಪಳಿಸಿತ್ತು. ಪರಿಣಾಮ ಪ್ರಯಾಣಿಕರು, ಆಸ್ಪತ್ರೆಯಲ್ಲಿದ್ದ ವೈದ್ಯ ವಿದ್ಯಾರ್ಥಿಗಳು ಮೃತಪಟ್ಟಿದ್ದರು.

44
600 ಅಡಿ ಎತ್ತರದಿಂದ ಪತನ

ಲಂಡನ್‌ಗೆ ಹೊರಟಿದ್ದ ವಿಮಾನವು ಸುಮಾರು 600 ಅಡಿ ಎತ್ತರದಿಂದ ಟೇಕ್ ಆಫ್ ಆದ ಕೇವಲ 32 ಸೆಕೆಂಡುಗಳಲ್ಲಿ ಪತನಗೊಂಡಿತ್ತು. ವಿಮಾನ ಹಾಸ್ಟೆಲ್‌ ಮೇಲೆ ಬಿದ್ದಿದ್ದರಿಂದ ಅಲ್ಲಿದ್ದ 19 ಮಂದಿ ಸಾವು ಕಂಡಿದ್ದರು. ಬದುಕುಳಿದ ಏಕೈಕ ವ್ಯಕ್ತಿ ಭಾರತೀಯ ಮೂಲದ ಬ್ರಿಟಿಷ್ ಪ್ರಜೆ ವಿಶ್ವಾಸ್ ಕುಮಾರ್ ರಮೇಶ್.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories