ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಸಾಮಾನ್ಯ ವ್ಯಕ್ತಿ ಎಂದು ಭಾವಿಸಿ ಪೊಲೀಸ್ ಅಧಿಕಾರಿಯ ಮುಂದೆಯೇ ಡೀಲ್ ಮಾಡಲು ಹೋದಾಗ ಈ ದಂಧೆ ಬಯಲಾಗಿದ್ದು, ಐವರನ್ನು ಬಂಧಿಸಿ ಇಬ್ಬರು ಯುವತಿಯರನ್ನು ರಕ್ಷಿಸಲಾಗಿದೆ.
2000 ಸಾವಿರ ರೂಪಾಯಿ ನೀಡಿದರೆ ಹೆಣ್ಣು ಮಕ್ಕಳು ಮಸಾಜ್ ಮಾಡ್ತಾರೆ ಎಂದು ಸಾಮಾನ್ಯ ವ್ಯಕ್ತಿ ಎಂದು ಭಾವಿಸಿ ಪೊಲೀಸರ ಮುಂದೆಯೇ ಡೀಲ್ ಮಾಡಲು ಹೋಗಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಗ್ಯಾಂಗೊಂದು ಸಿಕ್ಕಿಬಿದ್ದಿದೆ. ಘಟನೆಗೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲ್‌ನ ವಡಶ್ಶೇರಿಯಲ್ಲಿ ಈ ಘಟನೆ ನಡೆದಿದೆ.
24
ಪೊಲೀಸರ ಮುಂದೆಯೇ ಡೀಲ್
ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲ್‌ನ ವಡಶ್ಶೇರಿಯ ಸಬ್-ಇನ್ಸ್‌ಪೆಕ್ಟರ್ ಕುಥಾಲಿಂಗಂ ಅವರು ಜನವರಿ 11 ರಂದು ಮುಪ್ತಿಯ ಓಝಿನಸ್ಸೆರಿ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದರು. ಆ ಸಮಯದಲ್ಲಿ, ಅಲ್ಲಿನ ಲಾಡ್ಜ್‌ನಲ್ಲಿ ಕೆಲಸ ಮಾಡುತ್ತಿದ್ದ 22 ವರ್ಷದ ಉದ್ಯೋಗಿ ಅರುಲ್ ಮೋಹನ್ ಎಂಬಾತ ಅಲ್ಲಿಗೆ ಆಗಮಿಸಿದ್ದಾನೆ. ಅಲ್ಲಿ ಆತ ಯಾರಿಗೋ ಕರೆ ಮಾಡಿ ಮಹಿಳೆಯರುೆ ಸ್ಪಾದಲ್ಲಿ ಮಸಾಜ್ ನೀಡುತ್ತಾರೆ, ಅದಕ್ಕೆ ಕೇವಲ 2000 ರೂ.ಗಳನ್ನು ಪಾವತಿ ಮಾಡಿದರೆ ಸಾಕು ಎಂದು ಹೇಳಿದ್ದಾನೆ.
34
ಸ್ಪಾ ಹೆಸರಿನಲ್ಲಿ ಮಹಿಳೆಯರನ್ನು ಕೆಲಸಕ್ಕಿಟ್ಟುಕೊಂಡು ಕಿರುಕುಳ
ಇದಾದ ನಂತರ, ಸಬ್ ಇನ್ಸ್‌ಪೆಕ್ಟರ್ ಕುಥಾಲಿಂಗಂ ಅಲ್ಲಿಗೆ ಹೋದಾಗ ಅಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದು ದೃಢಪಟ್ಟಿದೆ. ಇದಾದ ನಂತರ ಇನ್ಸ್‌ಪೆಕ್ಟರ್ ವೇಲಮ್ಮಾಳ್ ನೇತೃತ್ವದ ಪೊಲೀಸರು ನಾಗರಕೋಯಿಲ್‌ನ ಒಂದು ನಿರ್ದಿಷ್ಟ ಪ್ರದೇಶದಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ ಸ್ಪಾ ಹೆಸರಿನಲ್ಲಿ ಯುವತಿಯರನ್ನು ಕೆಲಸಕ್ಕೆ ಇಟ್ಟುಕೊಂಡು ಒತ್ತಾಯಪೂರ್ವಕವಾಗಿ ಅವರನ್ನು ಲೈಂಗಿಕ ಕ್ರಿಯೆಗೆ ಒತ್ತಾಯಿಸಿ ಹಣ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಘಟನಾ ಸ್ಥಳದಲ್ಲಿದ್ದ ಇಬ್ಬರು ಯುವತಿಯರನ್ನು ಪೊಲೀಸರು ರಕ್ಷಿಸಿದ್ದಾರೆ. ಆರೋಪಿಗಳು ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದರು ಎಂದು ತಿಳಿದುಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಪಿನ್ ಬ್ರಿಟ್ಟೊ (33), ತಹಿಲ್ (20), ಲಾಡ್ಜ್ ಮ್ಯಾನೇಜರ್ ವಿಜಿಜನ್ ಮಿಥುನ್ ಬಾಬು (31) ಮತ್ತು ಲಾಡ್ಜ್ ಉದ್ಯೋಗಿ ಅರುಲ್ ಮೋಹನ್ ಸೇರಿದಂತೆ 5 ಜನರನ್ನು ಬಂಧಿಸಿದ್ದಾರೆ. ಈ ಘಟನೆಯ ನಂತರ ಪೊಲೀಸರು ನಗರದ ವಿವಿಧ ಲಾಡ್ಜ್‌ಗಳ ಮೇಲೆ ದಾಳಿ ನಡೆಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ