26 ಲಕ್ಷ ದೀಪಗಳಿಂದ ಝಗಮಗಿಸಿದ ಆಯೋಧ್ಯೆ ದೀಪೋತ್ಸವದಲ್ಲಿ 2 ವಿಶ್ವದಾಖಲೆ ನಿರ್ಮಾಣವಾಗಿದೆ.ಆಯೋಧ್ಯೆ ಶ್ರೀರಾಮನ ದೀಪಾವಳಿ ವೈಭವ ಮರುಕಳಿಸಿದೆ. ಯೋಗಿ ಆದಿತ್ಯನಾಥ್ ದೀಪೋತ್ಸವಕ್ಕೆ ಚಾಲನೆ ನೀಡಿದ್ದು ಮಾತ್ರವಲ್ಲ, ದಾಖಲೆ ಪ್ರಮಾಣ ಪತ್ರ ಸ್ವೀಕರಿಸಿದ್ದಾರೆ.
ಪ್ರಭು ಶ್ರೀರಾಮನ ಆಯೋಧ್ಯೆಯಲ್ಲಿ ಅದ್ಧೂರಿ ದೀವಾವಳಿ ಸಂಭ್ರಮ ನಡೆಯುತ್ತಿದೆ. ಆಯೋಧ್ಯೆಯಲ್ಲಿ ದೀಪೋತ್ಸವ ಅತ್ಯಂತ ವಿಶೇಷ. ಶ್ರೀರಾಮ ಆಯೋಧ್ಯೆಗೆ ಮರಳಿದಾಗ ಸಿಕ್ಕ ಅದ್ಧೂರಿ ದೀಪೋತ್ಸವ ಸ್ವಾಗತ ಹೋಲುವಂತೆ ಇದೀಗ ಆಯೋಧ್ಯೆ ಸಿಂಗಾರಗೊಂಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಯೋಧ್ಯೆ ದೀಪೋತ್ಸವಕ್ಕೆ ಚಾಲನೆ ನೀಡಿದ್ದಾರೆ.
26
26 ಲಕ್ಷ ದೀಪಗಳ ಅಲಂಕಾರ
26 ಲಕ್ಷ ದೀಪಗಳ ಅಲಂಕಾರ
ಸರಯು ನದಿ ತೀರದಲ್ಲಿ ದಾಖಲೆ ನಿರ್ಮಾಣವಾಗಿದೆ. ಆಯೋಧ್ಯೆಯ ಸರಯು ನದಿ ಸೇರಿದಂತೆ ಇತರ ಘಾಟ್‌ಗಳಲ್ಲಿ ಒಟ್ಟು 26 ಲಕ್ಷ ಹಣತೆ ಬೆಳಗಿ ದೀಪೋತ್ಸವ ಆಚರಿಸಲಾಗಿದೆ. ಈ ಮೂಲಕ ಐತಿಹಾಸಿಕ ದೀಪೋತ್ಸವ ಆಚರಿಸಲಾಗಿದೆ. ಲಕ್ಷಾಂತರ ಭಕ್ತರು ಆಯೋಧ್ಯೆಯಲ್ಲಿ ದೀಪಾವಳಿ ಆಚರಿಸಿದ್ದಾರೆ. ಇತ್ತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ದೀಪಾವಳಿ ಸಂಭ್ರಮದಲ್ಲಿ ಪಾಲ್ಗೊಂಡರು.
36
ಸರಯು ನದಿ ತೀರದಲ್ಲಿ ದಾಖಲೆ
ಸರಯು ನದಿ ತೀರದಲ್ಲಿ ದಾಖಲೆ
ಆಯೋಧ್ಯೆ ದೀಪಾವಳಿಯಲ್ಲಿ 2 ದಾಖಲೆ ನಿರ್ಮಾಣವಾಗಿದೆ. ಮೊದಲ ದಾಖಲೆ, ಬರೋಬ್ಬರಿ 26,17,215 ದೀಪಗಳಿಂದ ಆಯೋಧ್ಯೆ ಬೆಳಗಿದೆ.ಇದು ಎಣ್ಣೆ ಬಳಸಿ ಅತೀ ಹೆಚ್ಚು ದೀಪದ ಹಣತೆ ಹಚ್ಚಿದ ದಾಖಲೆಯಾಗಿದೆ. ಇಷ್ಟೇ ಅಲ್ಲ ಸರಯು ಸೇರಿದಂತೆ ಇತರ ಘಾಟ್‌ಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಲ್ಲಿ ಆರತಿ ಬೆಳಗಿದ ವಿಶ್ವದಾಖಲೆ ನಿರ್ಮಾಣವಾಗಿದೆ.
ದೀಪಗಳನ್ನು ಹಚ್ಚಿ ದಾಖಲೆ ನಿರ್ಮಾಣವಾಗುತ್ತಿದ್ದಂತೆ ಗಿನ್ನಿಸ್ ವಿಶ್ವದಾಖಲೆ ಸಮಿತಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಎರಡು ಗಿನ್ನಿಸ್ ವಿಶ್ವದಾಖಲೆಯ ಪ್ರಮಾಣ ಪತ್ರ ನೀಡಿದ್ದಾರೆ. ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆ ಹಾಗೂ ಆಯೋಧ್ಯೆ ಜಿಲ್ಲಾಡಳಿತ ಈ ದೀಪೋತ್ಸವ ಆಯೋಜಿಸಿದೆ.
56
ಲೇಸರ್ ಲೈಟ್ ಶೋ
ಲೇಸರ್ ಲೈಟ್ ಶೋ
ಆಯೋಧ್ಯೆ ದೀಪೋತ್ಸವದಲ್ಲಿ ಹಣತೆಗಳ ಜೊತೆಗೆ ಲೇಸರ್ ಲೈಟ್ ಶೋ ಕೂಡ ಆಯೋಜಿಸಲಾಗಿದೆ. ದೇಶದ ಮೂಲೆ ಮೂಲೆಯಿಂದ ಭಕ್ತರು ಆಯೋಧ್ಯೆ ದೀಪೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಶ್ರೀರಾಮ ಕಾಲದ ಗತವೈಭವನ್ನು ಮರುಕಳಿಸುವ ರೀತಿಯಲ್ಲಿ ಆಯೋಧ್ಯೆಯಲ್ಲಿ ದೀಪೋತ್ಸವ ಆಚರಿಸಲಾಗುತ್ತಿದೆ.
66
ರಾಮನ ಅವಮಾನಿಸಿದವರಿಗೆ ಯೋಗಿ ಚಾಟಿ
ರಾಮನ ಅವಮಾನಿಸಿದವರಿಗೆ ಯೋಗಿ ಚಾಟಿ
ಶ್ರೀರಾಮನನ್ನು ಕಾಂಗ್ರೆಸ್ ಕಾಲ್ಪನಿಕ ಎಂದಿತ್ತು, ಇತ್ತ ಸಮಾಜವಾದಿ ಪಾರ್ಟಿ ನಾಯಕರು, ದೀಪಾವಳಿ, ಹಣತೆ ಯಾಕೆ ಎಂದು ಪ್ರಶ್ನಿಸಿದ್ದರು. ಭಾರತದ ಅಸ್ಮಿತೆ, ಪರಂಪರೆಯನ್ನು ಅವಮಾನಿಸಿದರು. ಆಯೋಧ್ಯೆಯ ಇತಿಹಾಸವನ್ನು ಅಳಿಸಿ ಹಾಕುವ ಪ್ರಯತ್ನ ಮಾಡಿದರು. ಆದರೆ ಶ್ರೀರಾಮ ಆಶೀರ್ವಾದದಿಂದ ಆಯೋಧ್ಯೆ ಮತ್ತೆ ಬೆಳಗುತ್ತಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.