Indira Gandhi And Feroze Gandhi Marriage Video: ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾಗಾಂಧಿ ಹಾಗೂ ಫಿರೋಜ್ ಗಾಂಧಿ ಅವರು ಪ್ರೀತಿಸಿ ಮದುವೆಯಾಗಿದ್ದರು. ಇವರಿಬ್ಬರ ಮದುವೆಗೆ ವಿರೋಧವಿತ್ತು. ಆ ನಂತರ ಕುಟುಂಬದ ಒಪ್ಪಿಗೆ ಪಡೆದು ಮದುವೆಯಾಗಿದ್ದ ಇವರ ಮದುವೆ ವಿಡಿಯೋ ಈಗ ವೈರಲ್ ಆಗ್ತಿದೆ.
ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾಗಾಂಧಿ ಅವರು ರಾಜಕೀಯ ವಿಚಾರವಾಗಿ ಎಷ್ಟು ಹೆಸರು ಮಾಡಿದ್ದರೋ ಹಾಗೆ ಅವರ ಮದುವೆ ಕೂಡ ಸಿಕ್ಕಾಪಟ್ಟೆ ಚರ್ಚೆ ಆಗಿತ್ತು. ಸ್ವಾತಂತ್ರ್ಯ ಹೋರಾಟಗಾರ ಮತ್ತು ರಾಜಕಾರಣಿ ಫಿರೋಜ್ ಗಾಂಧಿ ಅವರನ್ನು ಮದುವೆಯಾಗಿದ್ದರು. ಆಗಿನ ಕಾಲದಲ್ಲಿ ಈ ಮದುವೆಯು ಅನೇಕರಿಗೆ ಅಚ್ಚರಿ ಮೂಡಿಸಿತ್ತು.
27
ಪರಿಚಯ ಆಗಿದ್ದೆಲ್ಲಿ?
ಇಂಗ್ಲೆಂಡ್‌ನಲ್ಲಿ ಇಂದಿರಾ ಮತ್ತು ಫಿರೋಜ್ ಪರಿಚಯ ಆಗಿತ್ತು. ಇಂದಿರಾ ಅವರು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾರೆ, ಫಿರೋಜ್ ಅವರು ಕೂಡ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಓದುತ್ತಿದ್ದರು. ಇಬ್ಬರೂ ಭಾರತದ ಸ್ವಾತಂತ್ರ್ಯ ಚಳುವಳಿಯ ಬೆಂಬಲಿಗರಾಗಿದ್ದರು. ಈ ಸಾಮಾನ್ಯ ಆಸಕ್ತಿಯಿಂದಲೇ ಇಬ್ಬರು ಫ್ರೆಂಡ್ಸ್ ಆದರು. ಆಮೇಲೆ ಈ ಸ್ನೇಹ ಪ್ರೀತಿಗೆ ತಿರುಗಿತು.
37
ಫಿರೋಜ್‌ಗೆ ಗಾಂಧಿ ಹೆಸರು ಕೊಟ್ಟಿದ್ದ ಗಾಂಧೀಜಿ
ಇಂದಿರಾ ಗಾಂಧಿ ಅವರು ನೆಹರು ಕುಟುಂಬಕ್ಕೆ ಸೇರಿದ್ದರು. ಫಿರೋಜ್ ಅವರು ಪಾರ್ಸಿ ಸಮುದಾಯಕ್ಕೆ ಸೇರಿದ್ದರು. ಸಾಮಾಜಿಕ, ಧಾರ್ಮಿಕ ಭಿನ್ನಾಭಿಪ್ರಾಯಗಳನ್ನು ಮೀರಿ ಈ ಮದುವೆ ನಡೆದಿತ್ತು. ಇಂದಿರಾ ಅವರ ತಂದೆ ಜವಾಹರಲಾಲ್ ನೆಹರು ಅವರು ಆರಂಭದಲ್ಲಿ ಈ ಮದುವೆಗೆ ಒಪ್ಪಿರಲಿಲ್ಲ ಎನ್ನಲಾಗುತ್ತದೆ. ಆಮೇಲೆ ಇವರು ಮಗಳ ಪ್ರೀತಿಯನ್ನು ಒಪ್ಪಿದರಂತೆ. ಮಹಾತ್ಮಾ ಗಾಂಧಿ ಅವರು ಈ ಮದುವೆಗೆ ಬೆಂಬಲ ನೀಡಿದ್ದರು, ಫಿರೋಜ್‌ಗೆ "ಗಾಂಧಿ" ಎಂಬ ಉಪನಾಮ ನೀಡಿದ್ದರಂತೆ. ಫಿರೋಜ್ ಅವರ ಮೂಲ ಉಪನಾಮ ಘಂಡಿ ಎನ್ನಲಾಗಿದೆ.
ಇಂದಿರಾ ಗಾಂಧಿ ಅವರು ಬಹಳ ಸಿಂಪಲ್ ಆದ ಸೀರೆಯುಟ್ಟಿದ್ದರು. ಅದು ಸರಳವಾದ ಗುಲಾಬಿ ಬಣ್ಣದ ಹತ್ತಿ ಸೀರೆಯಾಗಿತ್ತು. ಅವರು ಯಾವುದೇ ಆಭರಣಗಳನ್ನು ಧರಿಸಿರಲಿಲ್ಲ, ಕೇವಲ ಹೂವಿನ ಮಾಲೆಗಳನ್ನು ಹಾಕಿಕೊಂಡಿದ್ದರು. ಇಷ್ಟು ಶ್ರೀಮಂತರಾದರೂ ಕೂಡ ಅವರು ಸಿಂಪಲ್ ಆಗಿ ಮದುವೆಯಾಗಿದ್ದರು.
57
ಎಲ್ಲಿ ಮದುವೆ ನಡೆಯಿತು?
ಅಲಹಾಬಾದ್‌ನಲ್ಲಿ ಸಾಂಪ್ರದಾಯಿಕ ಹಿಂದೂ ಧರ್ಮದ ಪ್ರಕಾರ 1942ರಲ್ಲಿ, ಇಂದಿರಾ ಮತ್ತು ಫಿರೋಜ್ ಗಾಂಧಿ ಮದುವೆಯಾದರು. ಒಂದೂವರೆ ಗಂಟೆಯಲ್ಲಿ ಈ ಮದುವೆ ಮುಗಿದಿತ್ತು. ಈ ಮದುವೆಯು ರಾಷ್ಟ್ರೀಯವಾಗಿ ಗಮನ ಸೆಳೆದಿತ್ತು. ಅವರ ದಾಂಪತ್ಯ ಜೀವನದ ಜೊತೆ ಜೊತೆಗೆ ರಾಜಕೀಯ ಚಟುವಟಿಕೆಗಳು, ಸ್ವಾತಂತ್ರ್ಯ ಹೋರಾಟವು ನಡೆಯುತ್ತಿತ್ತು. ಆಮೇಲೆ ಇವರಿಗೆ ರಾಜೀವ್ ಗಾಂಧಿ, ಸಂಜಯ್ ಗಾಂಧಿ ಎಂಬ ಎಂಬ ಮಕ್ಕಳು ಜನಿಸಿದರು.
67
ಹೃದಯಾಘಾತದಿಂದ ನಿಧನ
ಫಿರೋಜ್ ಗಾಂಧಿ ಅವರು ರಾಜಕೀಯದಲ್ಲಿ ಆಕ್ಟಿವ್ ಆಗಿದ್ದರು, ಸಂಸತ್ ಸದಸ್ಯರಾಗಿದ್ದರು. ಅವರು ಪ್ರಾಮಾಣಿಕತೆ, ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಹೆಸರು ಮಾಡಿದ್ದರು. ಇಂದಿರಾ ಗಾಂಧಿ ಪ್ರಧಾನಿ ಆಗುವ ಮುನ್ನ, 1960 ರಲ್ಲಿ ಫಿರೋಜ್ ಗಾಂಧಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು.
77
ದೇಶಕ್ಕೆ ಸಂದೇಶ
ಎರಡು ವಿಭಿನ್ನವಾದ ಹಿನ್ನೆಲೆಯ ವ್ಯಕ್ತಿಗಳು ಹೇಗೆ ಪ್ರೀತಿಯಲ್ಲಿ ಒಂದಾಗಿ, ದೇಶಕ್ಕಾಗಿ ಒಟ್ಟಿಗೆ ಕೆಲಸ ಮಾಡಬಹುದು ಎಂದು ಇಂದಿರಾ ಮತ್ತು ಫಿರೋಜ್ ಮದುವೆ ಸಂದೇಶ ನೀಡಿತು.