ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ(Sonia Gandhi)ಯವರ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’(Belonging: A Journey Of Love) ಅಧಿಕೃತ ಬಿಡುಗಡೆ ಸಮಾರಂಭ ಸೋಮವಾರ ದೆಹಲಿಯಲ್ಲಿ ನಡೆಯಿತು.
ಸೋನಿಯಾ ಗಾಂಧಿ ಆತ್ಮಚರಿತ್ರೆ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ(Sonia Gandhi)ಯವರ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’(Belonging: A Journey Of Love) ಅಧಿಕೃತ ಬಿಡುಗಡೆ ಸಮಾರಂಭ ಸೋಮವಾರ ದೆಹಲಿಯಲ್ಲಿ ನಡೆಯಿತು.
211
Belonging: A Journey of Love: ಒಂದೇ ವಾರದಲ್ಲಿ ಎರಡು ಲಕ್ಷ ಪ್ರತಿ ಮಾರಾಟ!
ವಿಶೇಷವೆಂದರೆ ನ.10ರಂದು ಮಾರುಕಟ್ಟೆಗೆ ಬಂದ ಕೃತಿಯ 2 ಲಕ್ಷ (200,000) ಪ್ರತಿಗಳು ಮಾರಾಟವಾಗಿವೆ. ಈ ಮೂಲಕ ಪ್ರಕಾಶನ ಸಂಸ್ಥೆಗೆ ಒಂದೇ ವಾರದಲ್ಲಿ ಸುಮಾರು 20 ಕೋಟಿ ರು. ಆದಾಯ ಹರಿದುಬಂದಿದೆ.
311
ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಕೃತಿ ಬಿಡುಗಡೆ
ಕೃತಿ ಬಿಡುಗಡೆ ಸಮಾರಂಭದಲ್ಲಿ ಕರ್ನಾಟಕ ಸಿಎಂ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ತಮಿಳುನಾಡು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಮತ್ತು ಬಿಜೆಪಿ ನಾಯಕ ಅಮರಿಂದರ್ ಸಿಂಗ್ ಮೊದಲಾದವರಿದ್ದರು.
ನವದೆಹಲಿಸೋಮವಾರ ಇಲ್ಲಿ ನಡೆದ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಬಿಡುಗಡೆ ಸಮಾರಂಭದಲ್ಲಿ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಟಿಎಂಸಿಯ ಅಭಿಷೇಕ್ ಬ್ಯಾನರ್ಜಿ, ತಮಿಳುನಾಡು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಮತ್ತು ಬಿಜೆಪಿ ನಾಯಕ ಅಮರಿಂದರ್ ಸಿಂಗ್ ಸೇರಿದಂತೆ ಹಲವಾರು ಭಾರತೀಯ ಬ್ಲಾಕ್ ನಾಯಕರು ಭಾಗವಹಿಸಿದ್ದರು.
511
ಸಿಎಂ ಡಿಕೆ ಶಿವಕುಮಾರಗೆ ಎರಡನೇ ಸಾಲಿನ ಸೀಟು, ಸಿದ್ದರಾಮಯ್ಯ ನಾಲ್ಕನೇ ಸಾಲು!
ಸಭೆಯಲ್ಲಿ ಸೋನಿಯಾ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಮಾಜಿ ಮುಖ್ಯಸ್ಥ ರಾಹುಲ್ ಗಾಂಧಿ, ತಮಿಳುನಾಡು ಸಿಎಂ ವಿಜಯ್, ಎಸ್ಪಿ ನಾಯಕ ಅಖಿಲೇಶ್ ಯಾವ್ ಮೊದಲ ಸಾಲಲ್ಲಿದ್ದರು.
ಡಿ.ಕೆ. ಶಿವಕುಮಾರ್, ತೆಲಂಗಾಣ ಸಿಎಂ ರೇವಂತ ರೆಡ್ಡಿ, ಹಿಮಾಚಲ ಸಿಎಂ ಸುಖವಿಂದರ್ ಸಿಂಗ್ ಸುಖು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ 2ನೇ ಸ್ಥಾನದಲ್ಲಿದ್ದರು.
611
ಸಿದ್ದರಾಮಯ್ಯಗೆ ನಾಲ್ಕನೇ ಸಾಲಿನ ಸೀಟು
ಕರ್ನಾಟಕ ಮಾಜಿ ಸಿಎಂ ಸಿದ್ದರಾಮಯ್ಯ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್, ಕಾಶ್ಮೀರ ಮುಖ್ಯಮಂತ್ರಿ ಒಮರ್ ಒಬ್ದುಲ್ಲಾ, ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಎನ್ಸಿಪಿ (ಎಸ್ಪಿ) ನಾಯಕಿ ಸುಪ್ರಿಯಾ ಸುಳೆ, ಬಿಜೆಪಿ ನಾಯಕ ಮತ್ತು ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಕೂಡ ಬಂದಿದ್ದರು.
711
ಕುಟುಂಬದ ಅಪಪ್ರಚಾರಕ್ಕೆ ಅಂತ್ಯ ಹಾಡಲು ಆತ್ಮಕತೆ: ಸೋನಿಯಾ
‘ನಮ್ಮ ಕುಟುಂಬದ ಬಗ್ಗೆ ಸತ್ಯವಲ್ಲದ ಅನೇಕ ವಿಷಯಗಳನ್ನು ಬರೆಯಲಾಗಿತ್ತು. ಆ ಸಂಗತಿಗಳನ್ನು ಸರಿಪಡಿಸಿ, ವಾಸ್ತವವನ್ನು ತಿಳಿಸಲು ನಾನು ಬಯಸಿದ್ದೆ. ನನ್ನ ಆತ್ಮಕಥೆಯನ್ನು ಬರೆಯಲು ಇದೇ ಪ್ರಮುಖ ಕಾರಣ’ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಸೋಮವಾರ ತಿಳಿಸಿದ್ದಾರೆ.
811
ಸೋನಿಯಾ ಗಾಂಧಿ ಆತ್ಮಕಥೆ ಬರೆಯಲು ಕಾರಣವೇನು?
ತಮ್ಮ ‘ಬಿಲಾಂಜಿಂಗ್: ಎ ಜರ್ನಿ ಆಫ್ ಲವ್’ ಪುಸ್ತಕದ ಅಧಿಕೃತ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ನನ್ನ ಕುಟುಂಬ, ಅತ್ತೆ, ಗಂಡ, ಮಗ, ಮಗಳ ಬಗ್ಗೆ ತುಂಬಾ ಹೇಳಲಾಗಿದೆ. ಅದರಲ್ಲಿ ಹೆಚ್ಚಿನವು ಅವಾಸ್ತವಿಕ ಕಥೆಗಳು. ಅನೇಕ ಸುಳ್ಳು ಕಥೆಗಳನ್ನು ಹೆಣೆಯಲಾಗಿದೆ. ಇವುಗಳನ್ನು ಸರಿಪಡಿಸಿ, ಸಮಾಜಕ್ಕೆ ಸತ್ಯವನ್ನು ತಿಳಿಸಲು ನಾನು ಬಯಸಿದ್ದೆ. ಇದು ಆತ್ಮಕಥೆ ಬರೆಯಲು ಮುಖ್ಯ ಕಾರಣ’ ಎಂದರು.
911
ಬಿಲಾಂಗಿಂಗ್ ಎ ಜರ್ನಿ ಆಫ್ ಲವ್: ಯಾರ ಒತ್ತಾಯಕ್ಕೆ ಬರೆದರು ಸೋನಿಯಾ?
‘ನನ್ನ ಸ್ನೇಹಿತರು ನನ್ನ ಕಥೆಯನ್ನು ಬರೆಯಲೇಬೇಕೆಂದು ಪದೇಪದೇ ಹೇಳುತ್ತಿದ್ದರು. ನನ್ನ ಮನದಾಳದ ಭಾವನೆಗಳನ್ನು ಹೇಳಿಕೊಳ್ಳಲು ನಾನು ಹಿಂಜರಿಯುತ್ತಿದ್ದೆ, ಆದರೆ ರಾಹುಲ್, ಪ್ರಿಯಾಂಕಾ ಹಾಗೂ ಮಂಜುಲಿಕಾ ದುಬೆ ಅವರ ಒತ್ತಾಯದ ಮೇರೆಗೆ, ಅಂತಿಮವಾಗಿ ನಾನು ಒಪ್ಪಿಕೊಂಡೆ. ಆರಂಭದಲ್ಲಿ ಕಷ್ಟವಾಯಿತು, ಆದರೆ ಒಮ್ಮೆ ಶುರು ಮಾಡಿದ ಮೇಲೆ, ಎಲ್ಲವೂ ಪ್ರವಾಹದಂತೆ ಹೊರಹರಿಯಿತು’ ಎಂದರು.
‘ಬಿಲಾಂಗಿಂಗ್’ ಎಂಬ ಶೀರ್ಷಿಕೆಯನ್ನು ನಾನೇ ಆಯ್ಕೆ ಮಾಡಿಕೊಂಡೆ. ಏಕೆಂದರೆ ಇದರ ಅರ್ಥ ‘ಒಂದರ ಭಾಗವಾಗಿರುವುದು’. ನನ್ನ ವಿಷಯದಲ್ಲಿ ಹೇಳುವುದಾದರೆ, ನಾನು ಇಲ್ಲಿನ ಭಾಗವಾಗಲು ಎಷ್ಟು ಕಷ್ಟಪಟ್ಟೆ ಎಂಬುದನ್ನು ಇದು ಸೂಚಿಸುತ್ತದೆ. ಭಾರತದಲ್ಲಿಯೂ ಅನೇಕ ಮಹಿಳೆಯರ ಸ್ಥಿತಿ ಇದೇ ಆಗಿದೆ. ಅವರು ಮದುವೆಯಾದಾಗ, ಒಂದೇ ಹಿನ್ನೆಲೆಯಿಂದ ಬಂದವರಾಗಿರಬಹುದು, ಆದರೆ ಅವರು ತಮ್ಮ ಹೊಸ ಮನೆಗೆ ಹೊಂದಿಕೊಳ್ಳುವುದು ಕಷ್ಟ’ ಎಂದರು.
1011
ಅತ್ತೆ ಕಂಡರೆ ಭಯವಿತ್ತು:
‘ನಾನು ಭಾರತಕ್ಕೆ ಬಂದು ಇಂದಿರಾ ಗಾಂಧಿಯವರ ಸೊಸೆಯಾದಾಗ, ಅಲ್ಲಿನ ವಾತಾವರಣವು ನನ್ನ ಇಟಾಲಿಯನ್ ಹಿನ್ನೆಲೆಯಲ್ಲಿದ್ದಷ್ಟು ಅನೌಪಚಾರಿಕವಾಗಿರಲಿಲ್ಲ. ಅಲ್ಲಿನ ಪರಿಸರವು ಹೆಚ್ಚು ಔಪಚಾರಿಕವಾಗಿತ್ತು. ಆದರೆ, ಇಟಲಿಯಲ್ಲಿ ನನ್ನ ಪಾಲನೆ-ಪೋಷಣೆಯು ನನಗೆ ಹಿರಿಯರಿಗೆ ಗೌರವ ನೀಡಲು ಕಲಿಸಿತ್ತು. ಅದು ನನಗೆ ಸಹಾಯಕವಾಯಿತು. ಆರಂಭದಲ್ಲಿ ಅತ್ತೆ ಇಂದಿರಾ ಗಾಂಧಿ ಅವರ ಬಗ್ಗೆ ಭಯವಿತ್ತು. ಅವರನ್ನು ಮಮ್ಮಿ ಎಂದು ಕರೆಯಲು ಪ್ರಾರಂಭಿಸಲು ಸಮಯ ಬೇಕಾಯಿತು’ ಎಂದು ಸ್ಮರಿಸಿದರು.
1111
ಪತಿ ರಾಜಕೀಯ ಪ್ರವೇಶ ಇಷ್ಟವಿರಲಿಲ್ಲ:
‘ನನ್ನ ಪತಿ ರಾಜೀವ್ ಗಾಂಧಿ ರಾಜಕೀಯಕ್ಕೆ ಸೇರುವುದನ್ನು ನಾನು ತೀವ್ರವಾಗಿ ವಿರೋಧಿಸಿದ್ದೆ. ಬಹುಶಃ ನಾನು ಸ್ವಾರ್ಥಿಯಾಗಿದ್ದೆ ಎನ್ನಬಹುದು, ಏಕೆಂದರೆ ನಮಗಿದ್ದ ಸಮಯವನ್ನೆಲ್ಲ ನಾವು ಕಳೆದುಕೊಳ್ಳುತ್ತೇವೆ ಎಂದು ನನಗೆ ಅನ್ನಿಸಿತ್ತು. ಅವರಿಗೆ ಸಾಕಷ್ಟು ಪ್ರಯಾಣ ಮಾಡಬೇಕಾದ ಅನಿವಾರ್ಯತೆಯಿತ್ತು. ನಮ್ಮ ಜೀವನ ಬದಲಾಯಿತು, ಆದರೆ ನಮ್ಮ ನಡುವಿನ ಬಾಂಧವ್ಯ ಇನ್ನಷ್ಟು ಗಟ್ಟಿಯಾಯಿತು. ರಾಜೀವ್ ಮರಣದ ನಂತರ, ನಾನು ಮಗುವಾದೆ. ನನ್ನ ಮಕ್ಕಳಾದ ರಾಹುಲ್ ಹಾಗೂ ಪ್ರಿಯಾಂಕಾ ನನ್ನ ಪೋಷಕರಾದರು’ ಎಂದು ಮೆಲುಕು ಹಾಕಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ