ಆಪ್ ತೊರೆದು ಬಿಜೆಪಿ ಸೇರಿದ ಬೆನ್ನಲ್ಲೇ ರಾಘವ್ ಚಡ್ಡಾಗೆ ಫಾಲೋವರ್ಸ್‌ಗಳಿಂದ ಬಿಗ್ ಶಾಕ್

Published : Apr 25, 2026, 12:55 PM IST

ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರು ಆಪ್ ಪಕ್ಷ ತೊರೆದು ಇತರ 6 ಸಂಸದರೊಂದಿಗೆ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಈ ರಾಜಕೀಯ ಬೆಳವಣಿಗೆಯ ನಂತರ, ರಾಘವ್ ಚಡ್ಡಾ ಅವರಿಗೆ ದೊಡ್ಡ ಆಘಾತ ನೀಡಿದೆ.

PREV
15
ರಾಘವ್ ಚಡ್ಡಾಗೆ ಶಾಕ್ ನೀಡಿದ ಫಾಲೋವರ್ಸ್

ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಆಪ್ ತೊರೆಯುವ ಘೋಷಣೆ ಮಾಡಿದ ನಂತರ ದೇಶದ ರಾಜಕೀಯದಲ್ಲಿ ಸಂಚಲನ ಸೃಷ್ಟಿಯಾಗಿದೆ. ರಾಘವ್ ಚಡ್ಡಾ, ಅಶೋಕ್ ಮಿತಲ್ ಸೇರಿದಂತೆ ಒಟ್ಟು 7 ಆಪ್ ಸಂಸದರು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಬಿಜೆಪಿ ಸೇರ್ಪಡೆ ಬೆನ್ನಲ್ಲೇ ರಾಘವ್ ಚಡ್ಡಾ ಅವರಿಗೆ ಬಿಗ್ ಶಾಕ್ ಎದುರಾಗಿದೆ.

25
ಫಾಲೋವರ್ಸ್ ಸಂಖ್ಯೆಯಲ್ಲಿ ಗಣನೀಯ ಇಳಿಕೆ

ಮೊಬೈಲ್ ರೀಚಾರ್ಜ್ ವ್ಯಾಲಿಡಿಟಿ ಸೇರಿದಂತೆ ಹಲವು ಮಧ್ಯಮ ವರ್ಗದ ಜನತೆಯ ಸಮಸ್ಯೆಗಳನ್ನು ರಾಜ್ಯಸಭೆಯಲ್ಲಿ ಚರ್ಚಿಸಿದ್ದರಿಂದ ರಾಘವ್ ಚಡ್ಡಾ ಜನಪ್ರಿಯತೆ ಅಧಿಕವಾಗಿತ್ತು. ಈ ಜನಪ್ರಿಯತೆಯಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ರಾಘವ್ ಚಡ್ಡಾ ಫಾಲೋವರ್ಸ್ ಸಂಖ್ಯೆ ಏರಿಕೆಯಾಗಿತ್ತು. ಇದೀಗ ಬಿಜೆಪಿ ಸೇರ್ಪಡೆ ಘೋಷಣೆ ಬಳಿಕ ಚಡ್ಡಾ ಫಾಲೋವರ್ಸ್ ಸಂಖ್ಯೆ ಇಳಿಕೆಯಾಗ್ತಿದೆ ಎಂದು ವರದಿಯಾಗಿದೆ.

35
ಎಷ್ಟು ಇಳಿಕೆ?

ಕೆಲ ವರದಿಗಳ ಪ್ರಕಾರ, ರಾಘವ್ ಚಡ್ಡಾ ಏಪ್ರಿಲ್ 24ರಂದು ಇನ್‌ಸ್ಟಾಗ್ರಾಂನಲ್ಲಿ 14.5 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದ್ದರು. ಬಿಜೆಪಿ ಸೇರಿದ ನಂತರ ಇಂದು ಏಪ್ರಿಲ್ 25ರಂದು ಫಾಲೋವರ್ಸ್ ಸಂಖ್ಯೆಯಲ್ಲಿ ಸುಮಾರು 8 ಲಕ್ಷ ಕಡಿಮೆಯಾಗಿದೆ. ಈ ಸುದ್ದಿ ಬರೆಯುವ ಸಂದರ್ಭದಲ್ಲಿ ರಾಘವ್ ಚಡ್ಢಾ (raghavchadha88) ಇನ್‌ಸ್ಟಾಗ್ರಾಂನಲ್ಲಿ 13.6 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

45
ಬಿಜೆಪಿ ಸ್ವಾಗತ

ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಚಡ್ಢಾ, ತಾವು ಇತರ 6 ಸಂಸದರ ಜತೆ ಪಕ್ಷವನ್ನು ತೊರೆಯುತ್ತಿರುವುದಾಗಿ ಘೋಷಿಸಿದರು. ನಂತರ ಮಿತ್ತಲ್‌ ಹಾಗೂ ಪಾಠಕ್‌ರ ಜೊತೆಗೂಡಿ ಬಿಜೆಪಿ ಕಚೇರಿಗೆ ತೆರಳಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನಬಿನ್‌ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು. ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು.

ಇದನ್ನೂ ಓದಿ: ಒಂದೇ ಏಟಿಗೆ ಆಪ್ ಗಲಿಬಿಲಿ, ಪಕ್ಷ ತೊರೆದು 7 ಸಂಸದರು ಬಿಜೆಪಿಗೆ, ಉಳಿದಿರೋ ಮೂವರು ಯಾರು?

55
ಆಪ್‌ ವಿರುದ್ಧವೇ ಹೋರಾಟ

ಕಳೆದ ಕೆಲವು ವರ್ಷಗಳಿಂದ, ನಾನು ತಪ್ಪು ಪಕ್ಷದಲ್ಲಿರುವ ಸರಿಯಾದ ವ್ಯಕ್ತಿ ಎನಿಸುತ್ತಿತ್ತು. ಇಂದು, ನಾನು ಆಪ್‌ನಿಂದ ದೂರ ಸರಿದು ಜನರ ಜೊತೆ ಹೆಚ್ಚು ನಿಕಟವಾಗಿ ಕೆಲಸ ಮಾಡಲು ನಿರ್ಧರಿಸಿದ್ದೇನೆ. 2012ರಲ್ಲಿ ಸ್ಥಾಪನೆ ಆದಾಗಿನ ಪಕ್ಷ ಇದಾಗಿಲ್ಲ. ಇಂದು ನಾನು ಬದಲಾಗಿರುವ ಆಪ್‌ ವಿರುದ್ಧವೇ ಹೋರಾಟ ಆರಂಭಿಸುತ್ತೇನೆ ಎಂದು ರಾಘವ್ ಚಡ್ಡಾ ಹೇಳಿದ್ದಾರೆ.

ಇದನ್ನೂ ಓದಿ: 1-2 ದಿನದಲ್ಲಿ 2ನೇ ಸಂಧಾನ ಸಭೆ? - ಇರಾನ್‌ ಸಚಿವ ಅರಾಗ್ಚಿ ಪಾಕ್‌ಗೆ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories