ಪ್ರಧಾನಿ ಮೋದಿ ಬೋಟ್ ಹತ್ತುತ್ತಾರೆ ಎಂದು ಗೊತ್ತಿರಲಿಲ್ಲ,ರೋಚಕ ಘಟನೆ ಬಿಚ್ಚಿಟ್ಟ ಮೊಹಮ್ಮದ್ ಇಫ್ತಿಕರ್ ಅಹಮ್ಮದ್ ಹೇಳಿದ್ದಾರೆ. ಬೋಟ್‌ಮ್ಯಾನ್ ಜೊತೆ ಮೋದಿ ಮಾತುಕತೆ ಸೇರಿದಂತೆ ಕೆಲ ರೋಚಕ ಘಟನೆ ಬಯಲಾಗಿದೆ.
ಪಶ್ಚಿಮ ಬಂಗಾಳದ ಎರಡನೇ ಹಂತದ ಮತದಾನ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಇದರ ನಡುವೆ ಇಂದು ಬೆಳಗ್ಗೆ ಮೋದಿ ಹೂಗ್ಲಿ ನದಿಯಲ್ಲಿ ಬೋಟಿಂಗ್ ಮಾಡಿದ್ದಾರೆ. ಬೋಟಿಂಗ್ ವೇಳೆ ಕ್ಯಾಮೆರಾ ಮೂಲಕ ಸುಂದರ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಕೋಲ್ಕತ್ತಾದ ಹೂಗ್ಲಿ ನದಿಯಲ್ಲಿ ತಮ್ಮ ದಿನವನ್ನು ಆರಂಭಿಸಿದ ಪ್ರಧಾನಿ, ಗಂಗಾ ಮಾತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಪ್ರಧಾನಿ ಮೋದಿಯನ್ನು ಹೂಗ್ಲಿ ನದೆಯಲ್ಲಿ ಕರೆದುಕೊಂಡ ಹೋದ ಬೋಟ್‌ಮ್ಯಾನ್ ಕೆಲ ರೋಚಕ ಘಟನೆ ಬಿಚ್ಚಿಟ್ಟಿದ್ದಾರೆ.
26
ಏಳು ಬೋಟ್ ಬೇಕು ಎಂದ ಸಿಬ್ಬಂದಿಗಳು
ಹೂಗ್ಲಿ ಘಾಟ್ ಏರಿಯಾದಲ್ಲಿ ಕೆಲ ಸಿಬ್ಬಂದಿಗಳು ಆಗಮಿಸಿ ಬೋಟ್ ಬೇಕು ಎಂದು ಕೇಳಿದ್ದರು. 7 ಬೋಟ್ ಬೇಕು ಎಂದು ಕೇಳಿದ್ದರು. ನಾನು ಸರಿ ಎಂದಿದ್ದೆ ಎಂದು ಬೋಟ್ ಮಾಲೀಕ ಮೊಹಮ್ಮದ್ ಇಫ್ತಿಕರ್ ಅಹಮ್ಮದ್ ಹೇಳಿದ್ದಾರೆ. ತಕ್ಷಣವೇ ಬೋಟ್ ವ್ಯವಸ್ಥೆ ಮಾಡಲು ಹೇಳಿದ್ದರು. ಆಗಲೂ ಯಾವ ಸುಳಿವು ನನಗೆ ಇರಲಿಲ್ಲ. ಸರಿ ಎಂದು ತಕ್ಷಣಕ್ಕೆ ಇತರರಿಗೂ ಮಾಹಿತಿ ನೀಡಿ ನನ್ನ ಬೋಟ್ ಸೇರಿದಂತೆ ಇತರ ಬೋಟ್ ವ್ಯವಸ್ಥೆ ಮಾಡಿದೆ.
36
ಪ್ರಧಾನಿ ಮೋದಿ ಬರುತ್ತಾರೆ ಎಂದು ಗೊತ್ತಿರಲಲ್ಲ
ಬೋಟ್ ರೆಡಿ ಮಾಡಿದ ಮರು ಕ್ಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ಎಲ್ಲರಿಗೂ ಅಚ್ಚರಿಯಾಗಿತ್ತು. ಪ್ರಧಾನಿ ನರೇಂದ್ರ ಈ ಸಣ್ಣ ಬೋಟ್ ಹತ್ತುತ್ತಾರೆ ಎಂದು ನಾನು ಊಹಿಸಿರಲಿಲ್ಲ. ಈ ಕುರಿತು ಯಾವುದೇ ಸುಳಿವು ಕೂಡ ನನಗೆ ಇರಲಿಲ್ಲ ಎಂದು ಇಫ್ತಿಕರ್ ಹೇಳಿದ್ದಾರೆ.
ಪ್ರಧಾನಿ ಮೋದಿ ಬೋಟ್ ಹತ್ತಿದ ಬಳಿಕ ಮಾತುಕತೆ ಆರಂಭಿಸಿದ್ದಾರೆ. ಪ್ರಧಾನಿ ಬಳಿ ಏನು ಮಾತನಾಡಲಿ, ಹೇಗೆ ಮಾತನಾಡಲಿ ಅನ್ನೋ ಆತಂಕವೇ ನನ್ನಲ್ಲಿ ತುಂಬಿತ್ತು. ಅಷ್ಟರಲ್ಲೇ ಮೋದಿಯೇ ಮಾತನಾಡಲು ಆರಂಭಿಸಿದ್ದರು. ಇದರ ನಡುವೆ ನಾವೆಲ್ಲಾ ಜೊತೆಯಾಗಿ ಸಹಬಾಳ್ವೆಯಿಂದ ಬದುಕುಬೇಕು ಎಂದು ಮೋದಿ ಹೇಳಿದ್ದಾರೆ ಎಂದು ಮೊಹಮ್ಮದ್ ಇಫ್ತಿಕರ್ ಹೇಳಿದ್ದಾರೆ
56
1,000 ರೂಪಾಯಿ ನೀಡಿದ ಮೋದಿ
ಪ್ರಧಾನಿ ಮೋದಿ ಒಂದು ಬೋಟಿನಲ್ಲಿದ್ದರೆ, ಭದ್ರತಾ ಸಿಬ್ಬಂದಿಗಳು ಇನ್ನುಳಿದ ಬೋಟ್‌ನಲ್ಲಿದ್ದರು. ಮತ್ತೊಬ್ಬ ಬೋಟ್ ಮಾಲೀಕ ಗೌರಂಗ್ ಬಿಸ್ವಾಸ್ ಈ ಕುರಿತು ಮಾತನಾಡಿದ್ದಾರೆ. ಮೋದಿ ಸುಮಾರು 1 ಗಂಟೆ ಹೂಗ್ಲಿ ನದಿಯಲ್ಲಿ ಬೋಟಿಂಗ್ ಮಾಡಿದ್ದಾರೆ. ಇಳಿದು ಬಂದ ಬಳಿಕ ಮೋದಿ ತಬ್ಬಿಕೊಂಡರು. ಬಳಿಕ 1000 ರೂಪಾಯಿ ನೀಡಿದರು ಎಂದು ಬಿಸ್ವಾಸ್ ಹೇಳಿದ್ದಾರೆ.
66
ಸಂಭ್ರಮ ಹಂಚಿಕೊಂಡ ಮೋದಿ
ಪವಿತ್ರ ಗಂಗಾ ನದಿಯ ಮಹತ್ವದ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಮೋದಿ, "ಗಂಗಾ ನದಿ ಬಂಗಾಳದ ಆತ್ಮದ ಮೂಲಕ ಹರಿಯುತ್ತದೆ" ಎಂದು ಹೇಳಿದ್ದಾರೆ. ಚುನಾವಣೆಯ ಈ ಸಮಯದಲ್ಲಿ ಪಶ್ಚಿಮ ಬಂಗಾಳ ರಾಜ್ಯವನ್ನು ಅಭಿವೃದ್ಧಿಪಡಿಸುವ ಬದ್ಧತೆಯನ್ನು ಪ್ರಧಾನಿ ವ್ಯಕ್ತಪಡಿಸಿದ್ದಾರೆ. ಹೂಗ್ಲಿ ನದಿಯಲ್ಲಿ ಬೋಟ್‌ನಲ್ಲಿ ಸಾಗುತ್ತಿರುವ ತಮ್ಮ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.
ಸಂಭ್ರಮ ಹಂಚಿಕೊಂಡ ಮೋದಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ