ಇದು ಒಂದು ದೇಶ, ಒಂದು ಗಂಡ ಯೋಜನೆಯೇ? ಆಪರೇಷನ್ ಸಿಂದೂರ್ ಬಗ್ಗೆ ಮಾನ್ ವಿವಾದಾತ್ಮಕ ಹೇಳಿಕೆ

Published : Jun 04, 2025, 09:39 AM IST

ಆಪರೇಷನ್ ಸಿಂದೂರದ ಯಶಸ್ಸನ್ನು ತಿಳಿಸುವ ದೇಶವ್ಯಾಪಿ ಅಭಿಯಾನಕ್ಕೆ ಇತ್ತೀಚೆಗೆ ಬಿಜೆಪಿ ಕರೆ ನೀಡಿತ್ತು.

PREV
14

ಚಂಡೀಗಢ: ‘ಬಿಜೆಪಿಯು ಸಿಂದೂರವನ್ನು ತಮಾಷೆಯಾಗಿ ಪರಿವರ್ತಿಸಿದೆ. ಆಪರೇಷನ್ ಸಿಂದೂರ ಒಂದು ದೇಶ, ಒಂದು ಗಂಡ ಯೋಜನೆಯೇ?’ ಎಂದು ಪ್ರಶ್ನಿಸುವ ಮೂಲಕ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಿವಾದ ಸೃಷ್ಟಿಸಿದ್ದಾರೆ.

24

ಬಿಜೆಪಿ ಕಾರ್ಯಕರ್ತರು ಆಪರೇಷನ್ ಸಿಂದೂರದ ಹೆಸರಿನಲ್ಲಿ ಲೂಧಿಯಾನಾ ಉಪಚುನಾವಣೆಯಲ್ಲಿ ಮತ ಕೇಳುತ್ತಿದ್ದಾರೆ ಎಂಬ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯು ಆಪರೇಷನ್ ಸಿಂದೂರದ ಹೆಸರಿನಲ್ಲಿ ಮತ ಕೇಳುತ್ತಿದೆ ಎಂದು ಹೇಳಿದರು.

34

ಅವರು ಸಿಂದೂರವನ್ನು ತಮಾಷೆಯಾಗಿ ಪರಿವರ್ತಿಸಿದ್ದಾರೆ. ಪ್ರತಿ ಮನೆಗೂ ಸಿಂದೂರ ತಲುಪಿಸುತ್ತಿದ್ದಾರೆ. ನೀವೀಗ ಪ್ರಧಾನಿ ಮೋದಿಯವರ ಹೆಸರಲ್ಲಿ ಸಿಂಧೂರವನ್ನು ಧರಿಸುತ್ತೀರೇ? ಇದು ಒಂದು ದೇಶ, ಒಂದು ಗಂಡ ಯೋಜನೆಯೇ?’ ಎಂದು ಪ್ರಶ್ನಿಸಿದರು.

44

ಆಪರೇಷನ್ ಸಿಂದೂರದ ಯಶಸ್ಸನ್ನು ತಿಳಿಸುವ ದೇಶವ್ಯಾಪಿ ಅಭಿಯಾನಕ್ಕೆ ಇತ್ತೀಚೆಗೆ ಬಿಜೆಪಿ ಕರೆ ನೀಡಿತ್ತು. ಅಭಿಯಾನದ ಭಾಗವಾಗಿ ಬಿಜೆಪಿ ಕಾರ್ಯಕರ್ತರು ಪ್ರತಿ ಮನೆಗೆ ಸಿಂದೂರ (ಕುಂಕುಮ) ತಲುಪಿಸುತ್ತಿದ್ದಾರೆ ಎಂಬ ಸುದ್ದಿಯಾಗಿತ್ತು. ಆದರೆ ಸರ್ಕಾರದ ಪತ್ರಿಕಾ ಮಾಹಿತಿ ಬ್ಯೂರೋ ಈ ವದಂತಿಯನ್ನು ಅಲ್ಲಗಳೆದಿದೆ.

Read more Photos on
click me!

Recommended Stories