ಕಳೆದ ವರ್ಷ ಮೋದಿ ವಿದೇಶ ಪ್ರವಾಸಕ್ಕೆ ₹180 ಕೋಟಿ ವೆಚ್ಚ

Published : Aug 07, 2026, 08:08 AM IST

ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರ 23 ದೇಶಗಳ ಪ್ರವಾಸಕ್ಕೆ 180 ಕೋಟಿ ರೂ. ವೆಚ್ಚವಾಗಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದೆ. 2021ಕ್ಕೆ ಹೋಲಿಸಿದರೆ ಈ ವೆಚ್ಚವು 5 ಪಟ್ಟು ಹೆಚ್ಚಾಗಿದ್ದು, ಕಳೆದ 5 ವರ್ಷಗಳಲ್ಲಿ ಒಟ್ಟು 557.5 ಕೋಟಿ ರೂ. ಖರ್ಚಾಗಿದೆ.

PREV
15

ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅಮೆರಿಕ, ಬ್ರಿಟನ್‌, ಚೀನಾ ಸೇರಿದಂತೆ 23 ದೇಶಗಳಿಗೆ ಪ್ರವಾಸ ಕೈಗೊಂಡಿದ್ದು, ಇದಕ್ಕೆ 180 ಕೋಟಿ ರು. ವೆಚ್ಚವಾಗಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದೆ.

25

2021ರಲ್ಲಿ ಮೋದಿ ವಿದೇಶಿ ಪ್ರವಾಸಕ್ಕೆ 36 ಕೋಟಿ ರು. ಖರ್ಚಾಗಿತ್ತು. ಅದಕ್ಕೆ ಹೋಲಿಸಿದರೆ ಕಳೆದ ವರ್ಷ ಈ ಪ್ರಮಾಣ 5 ಪಟ್ಟು ಹೆಚ್ಚಾಗಿದೆ. ಜೊತೆಗೆ ಕಳೆದ 5 ವರ್ಷದಲ್ಲಿ ಪ್ರಧಾನಿ ವಿದೇಶ ಪ್ರವಾಸಕ್ಕೆ 557.5 ಕೋಟಿ ರು. ಖರ್ಚಾಗಿದೆ.

35

ಸರ್ಕಾರ ನೀಡಿರುವ ದೇಶವಾರು ನೀಡಿರುವ ಅಂಕಿಅಂಶಗಳ ಪ್ರಕಾರ, ‘ಫ್ರಾನ್ಸ್‌ (25.5 ಕೋಟಿ ರು.), ಅಮೆರಿಕ (16.5 ಕೋಟಿ ರು.) ಸೌದಿ ಅರೇಬಿಯಾ (15.5 ಕೋಟಿ ರು.), ಬ್ರೆಜಿಲ್‌, (17.7 ಕೋಟಿ ರು.), ಚೀನಾ (10.5 ಕೋಟಿ ರು.), ಬ್ರಿಟನ್ (9.9 ಕೋಟಿ ರು.) ಖರ್ಚಾಗಿವೆ.

45

ಇದರ ಜೊತೆಗೆ ಮಾರಿಷಸ್‌, ಥಾಯ್ಲೆಂಡ್‌ ಸೇರಿದಂತೆ ಇನ್ನು ಕೆಲ ದೇಶಗಳಿಗೆ ಪ್ರಧಾನಿ ಭೇಟಿ ನೀಡಿದ್ದಾರೆ ಎಂದಿದೆ. ಇದರ ಜತೆಗೆ ಈ ವರ್ಷ ಇದುವರೆಗೆ ಪ್ರಧಾನಿ ವಿದೇಶ ಪ್ರವಾಸಕ್ಕೆ 74.59 ಕೋಟಿ ರು. ಖರ್ಚಾಗಿದೆ ಎಂದು ಅಂಕಿಅಂಶಗಳಲ್ಲಿ ಉಲ್ಲೇಖಿಸಲಾಗಿದೆ.

55

ಸಂಸದರಾದ ಸಂಜಯ್ ಸಿಂಗ್ ಮತ್ತು ವಿ ಶಿವದಾಸನ್ ಅವರು ತಮ್ಮ ಪ್ರಶ್ನೆಯಲ್ಲಿ, 2021 ರಿಂದ ಪ್ರಧಾನ ಮಂತ್ರಿಗಳು ಕೈಗೊಂಡ ವಿದೇಶಿ ಭೇಟಿಗಳ ದೇಶವಾರು ವಿವರಗಳನ್ನು ಮತ್ತು 2021 ರಿಂದ ಅಂತಹ ಭೇಟಿಗಳಿಗಾಗಿ ವರ್ಷವಾರು ಮತ್ತು ಭೇಟಿವಾರು ಒಟ್ಟು ವೆಚ್ಚವನ್ನು ವಿದೇಶಾಂಗ ಸಚಿವಾಲಯಕ್ಕೆ (ಎಂಇಎ) ಕೇಳಿದ್ದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories