ಭಾರತದಲ್ಲಿ ಜನಪ್ರಿಯ ಮದ್ಯ ಓಲ್ಡ್ ಮಾಂಕ್, ರಾಯಲ್ ಚಾಲೆಂಜ್ ಸೇರಿದಂತೆ ಕೆಲ ಪ್ರಮುಖ ಬ್ರ್ಯಾಂಡ್ ಮಾರಾಟ ನಿಷೇಧಿಸಲಾಗಿದೆ. ಯಾವೆಲ್ಲಾ ಬ್ರ್ಯಾಂಡ್ ಮದ್ಯ ಬ್ಯಾನ್ ಮಾಡಾಲಗಿದೆ. ಯಾಕೆ? ಇಲ್ಲಿದೆ ಲಿಸ್ಟ್
ಭಾರತದಲ್ಲಿ ಹಲವು ಮದ್ಯ ಬ್ರ್ಯಾಂಡ್‌ಗಳು ಮದ್ಯ ಪ್ರಿಯರ ಜೊತೆ ಬೆಸೆದುಕೊಂಡಿದೆ. ಈ ಪೈಕಿ ಓಲ್ಡ್ ಮಾಂಕ್, ರಾಯಲ್ ಚಾಲೆಂಜ್ ಸೇರಿದಂತೆ ಹಲವಿದೆ. ಇದೀಗ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (FSSAI) ಈ ಮದ್ಯ ಮಾರಾಟಕ್ಕೆ ನಿಷೇಧ ಹೇರಿದೆ. ಸಾಮಾನ್ಯ ಮದ್ಯಕ್ಕೆ ರಮ್, ವಿಸ್ಕಿ ಕೃತಕ ಫ್ಲೇವರ್ ಸೇರಿಸಿ ಮಾರಾಟ ಮಾಡಿರುವುದು ಸಾಬೀತಾದ ಕಾರಣ ತಕ್ಷಣದಿಂದ ಕೆಲ ಬ್ರ್ಯಾಂಡ್ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ.
25
ಯಾವೆಲ್ಲಾ ಮದ್ಯ ಭಾರತದಲ್ಲಿ ತಕ್ಷಣದಿಂದ ಬ್ಯಾನ್
ಓಲ್ಡ್ ಮಾಂಕ್: ಓಲ್ಡ್ ಮಾಂಕ್‌ನ ಮೂರು ವೇರಿಯೆಂಟ್ ಮದ್ಯ ಬ್ಯಾನ್ ಮಾಡಲಾಗಿದೆ. ಓಲ್ಡ್ ಮಾಂಕ್‌ನ ಮೋಹನ್ ರಾಕಿ ಸ್ಪ್ರಿಂಗ್‌ವಾಟರ್ ಮದ್ಯ ಘಟಕದಲ್ಲಿ ತಯಾರಾಗುವ ಓಲ್ಡ್ ಮಾಂಕ್‌ನ ಮೂರು ಆವೃತ್ತಿಯನ್ನು ಬ್ಯಾನ್ ಮಾಡಲಾಗಿದೆ.
ರಾಯಲ್ ಚಾಲೆಂಜ್, ಆಂಟಿಕ್ವಿಟಿ ಬ್ಲೂ: ಡಿಯಾಜಿಯೋ ಇಂಡಿಯಾದ ಯುನೈಟೆಡ್ ಸ್ಪಿರಿಟ್ಸ್ ಮಾಲೀಕತ್ವದ ಪ್ರಮುಖ ಬ್ರ್ಯಾಂಡ್ ರಾಯಲ್ ಚಾಲೆಂಜ್ ಹಾಗೂ ಆ್ಯಂಟಿಕ್ವಿಟಿ ಬ್ಲೂ ವಿಸ್ಕಿ ಬ್ಯಾನ್ ಮಾಡಲಾಗಿದೆ.
35
ಬ್ಯಾಗ್‌ಪೈಪರ್ ಹಾಗೂ ಓಲ್ಡ್ ಕ್ಯಾಸ್ಕ್ ಬ್ಯಾನ್
ಇನ್‌ಬ್ರೂ ಬೆವರೇಜಸ್ ಸಂಸ್ಥೆಯ ಬ್ಯಾಗ್‌ಪೈಪರ್ ಡೆಲಕ್ಸ್ ವಿಸ್ಕಿ ಹಾಗೂ ಓಲ್ಡ್ ಕ್ಯಾಸ್ಕ್ ಡೆಲಕ್ಸ್ XXX ರಮ್ ಮದ್ಯಗಳನ್ನು ಬ್ಯಾನ್ ಮಾಡಲಾಗಿದೆ. ಕೃತಕ ಫ್ಲೇವರ್ ಬಳಸಿರುವುದು ಮಾತ್ರವಲ್ಲ, ಲೇಬಲ್ ಮೇಲೆ ಗ್ರಾಹಕರಿಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ. ಜೊತೆಗೆ ಕೃತಕ ಫ್ಲೇವರ್ ಬಳಸುತ್ತಿರುವ ಕುರಿತು ಲೇಬಲ್ ಮೇಲೆ ಉಲ್ಲೇಖಿಸಿಲ್ಲ ಎಂದು FSSAI ಹೇಳಿದೆ.
ಬ್ಯಾನ್ ಆಗಿರುವ ಮದ್ಯಗಳು ಎಂಪಿಆರ್ ಔಟ್‌ಲೆಟ್ ಸೇರಿದಂತೆ ಬಾರ್‌ಗಳಲ್ಲಿರುವ ದಾಸ್ತುನುಗಳ ಕತೆ ಏನು? ದಾಸ್ತಾನು ಮದ್ಯಗಳಿಗೆ FSSAI ಒಂದು ಅವಕಾಶ ನೀಡಿದೆ. ಮದ್ಯದ ಬಾಟಲಿ ಮೇಲೆ ನೈಜ ಅಥವಾ ಕೃತಕ ಫ್ಲೇವರ್ ಮದ್ಯವೇ ಅನ್ನೋದು ಸ್ಪಷ್ಟವಾಗಿ ಉಲ್ಲೇಖಿಸಲು ಸೂಚಿಸಿದೆ. ತಕ್ಷಣದಿಂದಲೇ ಉತ್ಪಾದನೆಯಾಗುವ ಮದ್ಯಗಳಲ್ಲಿ ಕೃತಕ ಫ್ಲೇವರ್ ಬಳಸುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.
55
ಓಲ್ಡ್ ಮಾಂಕ್ ಕುರಿತು ಮೀಮ್ಸ್
ಓಲ್ಡ್ ಮಾಂಕ್ ರಮ್ ಬ್ಯಾನ್ ಎಂದು ಘೋಷಣೆಯಾಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಮೀಮ್ಸ್ ಹರಿದಾಡುತ್ತಿದೆ. ರಿಪ್ ಓಲ್ಡ್ ಮಾಂಕ್ ಎಂದು ಹಲವರು ಕಣ್ಣೀರು ಸುರಿಸುತ್ತಿದ್ದಾರೆ. ನೆಚ್ಚಿನ ಮದ್ಯ ಇನ್ನು ಸಿಗಲ್ಲ ಎಂದು ಹಲವು ಬೇಸರ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಇನ್ನು ನೈಜ ಸ್ವರೂಪದಲ್ಲಿ ಓಲ್ಡ್ ಮಾಂಕ್ ಲಭ್ಯವಾಗಲಿದೆ. ಇಷ್ಟು ದಿನ ಕೃತಕ ಫ್ಲೇವರ್ ಮದ್ಯ ಕುಡಿದೆ ಕುಣಿದಾಡಿದ್ದೇವೆ. ಇನ್ನು ಅಸಲಿ ಮದ್ಯ ಸಿಗಲಿದೆ ಎಂದು ಹಲವರು ಸಂಭ್ರಮಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ