ಪಹಲ್ಗಾಮ್ ದಾಳಿಯಾದಾಗ ಇದರ ಹಿಂದಿರುವ ಎಲ್ಲರನ್ನೂ ಮಣ್ಣಲ್ಲಿ ಹೂತುಹಾಕುವ ಪ್ರತಿಜ್ಞೆ ಮಾಡಿದ್ದ ನರೇಂದ್ರ ಮೋದಿ, ಭಾರತದ ಸೇನೆಯ ಮೂಲಕ ಅದನ್ನು ಮಾಡಿ ತೋರಿಸಿದ್ದಾರೆ. ಇಲ್ಲಿಯವರೆಗೂ ಮರ್ಕಜ್ ಸುಭಾನ್ ಅಲ್ಲಾ ಅನ್ನೋದು ಮಸೀದಿ ಎಂದು ಹೇಳುತ್ತಿದ್ದ ಪಾಕ್‌ನ ಬಂಡವಾಳ ಜಗತ್ತಿನ ಮುಂದೆ ಬೆತ್ತಲಾಗಿದೆ.
210
ಭಾರತೀಯ ಸೇನೆಯ ದಾಳಿಗೆ ಗುರಿಯಾದ ಒಂಬತ್ತು ಭಯೋತ್ಪಾದಕ ಶಿಬಿರಗಳಲ್ಲಿ ಮಹತ್ವದ ತಾಣಗಳಲ್ಲಿ ಒಂದಾದ ಸುಭಾನ್ ಅಲ್ಲಾ ಕ್ಯಾಂಪ್ ಹಲವು ವರ್ಷಗಳಿಂದ ಜೈಶ್-ಎ-ಮೊಹಮ್ಮದ್ (ಜೆಇಎಂ) ನ ಭದ್ರಕೋಟೆಯಾಗಿತ್ತು. 2001ರ ಸಂಸತ್ ದಾಳಿ ಹಾಗೂ 2019ರ ಪುಲ್ವಾಮಾ ದಾಳಿಯನ್ನು ಇದೇ ಕ್ಯಾಂಪ್‌ನಿಂದಲೇ ಯೋಜಿಸಲಾಗಿತ್ತು.
310
ಲಾಹೋರ್‌ನಿಂದ 400 ಕಿ.ಮೀ ದೂರದಲ್ಲಿರುವ ಬಹವಾಲ್ಪುರ್ ಪಾಕಿಸ್ತಾನದ 12 ನೇ ಅತಿದೊಡ್ಡ ನಗರವಾಗಿದೆ. ಸುಭಾನ್ ಅಲ್ಲಾ ಕ್ಯಾಂಪಸ್ 18 ಎಕರೆಗಳಲ್ಲಿ ಹರಡಿಕೊಂಡಿದೆ. ಇದನ್ನು ಉಸ್ಮಾನ್-ಒ-ಅಲಿ ಕ್ಯಾಂಪಸ್ ಎಂದೂ ಕರೆಯುತ್ತಾರೆ, ಇದು ಜೆಇಎಂನ ನೇಮಕಾತಿ, ನಿಧಿಸಂಗ್ರಹಣೆ ಮತ್ತು ಬೋಧನೆಗಾಗಿ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ.
ಮಸೀದಿ ಹಾಗೂ ಟೆರರ್ ಕ್ಯಾಂಪ್ ಆಗಿದ್ದ ಇದಕ್ಕೆ, ಜೆಇಎಂನ ಮುಖ್ಯ ಸಂಘಟನೆಯಾದ ಅಲ್-ರಹಮತ್ ಟ್ರಸ್ಟ್ ಮೂಲಕ ಹಣಕಾಸು ಒದಗಿಸಲಾಗಿತ್ತು. ಇದು 2011 ರವರೆಗೆ ಮೂಲ ರಚನೆಯಾಗಿಯೇ ಇತ್ತು ಆದರೆ 2012 ರ ಹೊತ್ತಿಗೆ ತರಬೇತಿ ಸೌಲಭ್ಯಗಳನ್ನು ಹೊಂದಿರುವ ದೊಡ್ಡ ಸಂಕೀರ್ಣವಾಗಿ ಬದಲಾವಣೆ ಮಾಡಲಾಗಿತ್ತು.
510
2001 ರ ಸಂಸತ್ತಿನ ದಾಳಿ, 2016 ರ ಪಠಾಣ್‌ಕೋಟ್ ದಾಳಿ ಮತ್ತು 2019 ರ ಪುಲ್ವಾಮಾ ದಾಳಿ ಸೇರಿದಂತೆ ಭಾರತೀಯ ನೆಲದಲ್ಲಿ ನಡೆದ ಹಲವಾರು ಮಾರಕ ದಾಳಿಗಳ ಹಿಂದೆ ಜೆಇಎಂ ಕೈವಾಡವಿದೆ.
610
ಇದರ ಮುಖ್ಯ ಸಂಚುಕೋರ ಮೌಲಾನಾ ಮಸೂದ್ ಅಜರ್. ಈ ಉಗ್ರ ಜನಿಸಿದ್ದೇ ಬಹಾವಲ್ಪುರದಲ್ಲಿ. ಅವನ ಇಡೀ ಕುಟುಂಬ ಮರ್ಕಜ್ ಸುಭಾನ್ ಅಲ್ಲಾದಲ್ಲಿಯೇ ವಾಸ ಮಾಡುತ್ತಿತ್ತು. ಅಲ್ಲಿ ಭಾರೀ ಕಾವಲು ಇರುವ ಸಂಕೀರ್ಣದಲ್ಲಿ ವಾಸಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅಜರ್ ಮಸೂದ್‌ನಲ್ಲಿ ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ.
710
ಪಾಕಿಸ್ತಾನದಲ್ಲಿ 2002 ರಲ್ಲಿ ಅಧಿಕೃತವಾಗಿ ನಿಷೇಧಿಸಲ್ಪಟ್ಟಿದ್ದರೂ, ಜೆಇಎಂ ತನ್ನ ಶಿಬಿರವನ್ನು ನಡೆಸಲು ಸಂಪೂರ್ಣ ಕಾರ್ಯಾಚರಣೆಯ ಸ್ವಾತಂತ್ರ್ಯವನ್ನು ನೀಡಲಾಗಿತ್ತು.
810
ಈ ಶಿಬಿರವು ಪಾಕಿಸ್ತಾನ ಸೇನಾ ಕಂಟೋನ್ಮೆಂಟ್‌ನಿಂದ ಕೆಲವೇ ಮೈಲುಗಳಷ್ಟು ದೂರದಲ್ಲಿದೆ. ಇದು ಪಾಕಿಸ್ತಾನದ 31 ಕಾರ್ಪ್ಸ್‌ನ ಪ್ರಧಾನ ಕಚೇರಿಯಾಗಿದೆ. ಹೆಚ್ಚುವರಿಯಾಗಿ, ಬಹವಾಲ್ಪುರವು ರಹಸ್ಯ ಪರಮಾಣು ಸೌಲಭ್ಯವನ್ನು ಹೊಂದಿದೆ ಎಂದು ವರದಿಯಾಗಿದೆ.
910
ಲಷ್ಕರ್-ಎ-ತೈಬಾ (ಎಲ್‌ಇಟಿ), ಹಿಜ್ಬುಲ್ ಮುಜಾಹಿದ್ದೀನ್ ಮತ್ತು ಜೈಶ್-ಎ-ಮೊಹಮ್ಮದ್ (ಜೆಇಎಂ) ಎಂಬ ಮೂರು ಭಯೋತ್ಪಾದಕ ಸಂಘಟನೆಗಳನ್ನು ಗುರಿಯಾಗಿಸಿಕೊಂಡು ಭಾರತ ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿದೆ. ಈ ದಾಳಿಯಲ್ಲಿ 80 ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಉನ್ನತ ಭದ್ರತಾ ಪಡೆಗಳು ತಿಳಿಸಿವೆ.
1010
ಈ ನಡುವೆ ಪಾಕಿಸ್ತಾನ ಸೇನೆಯು ಅನಿಯಂತ್ರಿತ ಗುಂಡಿನ ದಾಳಿ ನಡೆಸಿ ಮೂವರು ನಾಗರಿಕರ ಸಾವಿಗೆ ಕಾರಣವಾದ ನಂತರ, ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ ಉದ್ದಕ್ಕೂ ಸ್ಥಳಾಂತರಿಸಲು ಭಾರತದ ಗೃಹ ಸಚಿವ ಅಮಿತ್ ಶಾ ಆದೇಶಿಸಿದ್ದಾರೆ.