ಅಣ್ಣಾಮಲೈಯಲ್ಲಿ ಏನಿದೆ? ಆತ ಝಿರೋ ಎಂದು ಆದಿತ್ಯ ಠಾಕ್ರೆ ಗುಡುಗಿದ್ದಾರೆ. ಆದರೆ ಅಣ್ಣಾಮಲೈ ಅರ್ಹತೆ, ಐಪಿಎಸ್ ಅಧಿಕಾರಿ ಸೇರಿದಂತೆ ಹಲವು ಅಂಕಿ ಅಂಶಗಳ ಮುಂದಿಟ್ಟು ಸೋಶಿಯಲ್ ಮೀಡಿಯಾದಲ್ಲಿ ಠಾಕ್ರೆಗೆ ಸರಿಯಾಗಿ ಝಾಡಿಸಲಾಗಿದೆ.
ತಮಿಳುನಾಡು ಬಿಜೆಪಿ ನಾಯಕ ಅಣ್ಣಾಮಲೈ ಹಾಗೂ ಮುಂಬೈ ಎಂಎನ್ಎಸ್ ನಾಯಕ ರಾಜ್ ಠಾಕ್ರೆ ನಡುವಿನ ಸಮರ ಇದೀಗ ಮತ್ತಷ್ಟು ತೀವ್ರಗೊಂಡಿದೆ. ರಾಜ್ ಠಾಕ್ರೆಯ ರಸಮಲೈ ಹೇಳಿಕೆಗೆ ತಿರುಗೇಟು ನೀಡಿದ್ದ ಅಣ್ಣಾಮಲೈಗೆ ಇದೀಗ ಉದ್ಧವಾ ಠಾಕ್ರೆ ಪುತ್ರ ಆಧಿತ್ಯ ಠಾಕ್ರೆ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಣ್ಣಾಮಲೈ ಶೂನ್ಯ ಎಂದ ಆದಿತ್ಯ ಠಾಕ್ರೆಗೆ ಹಲವರು ಕ್ಲಾಸ್ ತೆಗೆದುಕೊಂಡಿದ್ದಾರೆ.
26
ಅಣ್ಣಾಮಲೈ ಏನೂ ಅಂದರೆ ಏನೂ ಅಲ್ಲ, ಶೂನ್ಯ
ಮುಂಬೈ ಮಹಾನಗರ ಪಾಲಿಕೆ ಚುನಾವಣೆ ಕಾವು ತೀವ್ರಗೊಳ್ಳುತ್ತಿದ್ದಂತೆ ಶಿವಸೇನೆ, ಎಂಎನ್ಎಸ್ ಅಣ್ಣಾಮಲೈ ವಿರುದ್ಧ ಸಮರಕ್ಕಿಳಿದಿದೆ. ಅಣ್ಣಾಮಲೈ ಬಿಜೆಪಿಯ ಪ್ರಮುಖ ನಾಯಕ, ಅವರೇ ಬಿಜೆಪಿಯ ಮುಖ. ಆದರೆ ಅಣ್ಣಾಮಲೈ ಫುಲ್ ಝೀರೋ ಎಂದು ಆದಿತ್ಯ ಠಾಕ್ರೆ ಹೇಳಿದ್ದಾರೆ.
36
ಅಣ್ಣಾಮಲೈಗೆ ಸಿಂಘಮ್ ಎಂದ ಜನ
ಅದಿತ್ಯ ಠಾಕ್ರೆಗೆ ಅಣ್ಣಾಮಲೈ ಯಾರು ಅನ್ನೋದನ್ನು ದಾಖಲೆ ಸಮೇತ ನೀಡಿದ್ದಾರೆ. ಬಳಿಕ ಆದಿತ್ಯ ಠಾಕ್ರೆ ಯಾರು ಎಂದು ಪ್ರಶ್ನಿಸಿದ್ದಾರೆ, ಕುಟುಂಬ ರಾಜಕಾರಣ, ವಶಂಪಾರಂಪರ್ಯ ಹೊರತುಪಡಿಸಿದರೆ ಆದಿತ್ಯ ಠಾಕ್ರೆ ಬಳಿ ಏನಿದೆ? ಆದಿತ್ಯ ಠಾಕ್ರೆಗೆ ನಿಕ್ ನೇಮ್ ನೇಪೋ ಕಿಡ್ , ಆದರೆ ಅಣ್ಣಾಮಲೈ ನಿಕ್ ನೇಮ್ ಸಿಂಘಮ್ ಎಂದು ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ತಿರುಗೇಟು ನೀಡಿದ್ದಾರೆ.
ಅಣ್ಣಾಮಲೈ ಯಾರು ಅನ್ನೋದನ್ನು ಚಿಂತಕ, ಲೇಖಕ, ಆನಂದ್ ರಂಘನಾಥನ್ ವಿವರಿಸಿದ್ದಾರೆ. 12ನೇ ತರಗತಿಯಲ್ಲಿ ಶೇಕಡಾ 95 ಮಾರ್ಕ್ಸ್, ಬಿಇ ಎಂಜಿನಿಯರಿಂಗ್‌ನಲ್ಲಿ ಶೇಕಡಾ 84, UPSE ರ್ಯಾಂಕ್ 244, CAT ಅಂಕ 99.32 , ಐಐಎಂ ಲಖೌನದಲ್ಲಿ ಪದವಿ, ಆಕ್ಸ್‌ಫರ್ಡ್‌ನಲ್ಲಿ ಅಧ್ಯಯನ, ಐಪಿಎಸ್ ಅಧಿಕಾರಿ, ಪೊಲೀಸ್ ಸೂಪರಿಡೆಂಟ್, ಡೆಪ್ಯೂಟಿ ಕಮಿಷನರ್ ಆಫ್ ಪೊಲೀಸ್, ತಮಿಳು ನಾಡು ಬಿಜೆಪಿ ಮಾಜಿ ಅಧ್ಯಕ್ಷರಾಗಿದ್ದಾರೆ. ಆದಿತ್ಯ ಠಾಕ್ರೆ ಅರ್ಹತೆ ಕುಟುಂಬ ರಾಜಕಾರಣ ಎಂದು ಆನಂದ್ ರಂಘನಾಥನ್ ಹೇಳಿದ್ದಾರೆ.
56
ಬಾಳ್ ಠಾಕ್ರೆ ಸಂಪಾದನೆ ಮಾತ್ರ
ಆದಿತ್ಯ ಠಾಕ್ರೆ ಶಿವಸೇನೆಯ ನಾಯಕ, ಮಾಜಿ ಮಂತ್ರಿಯಾಗಿದ್ದಾರೆ. ಇದು ಬಾಳ್ ಠಾಕ್ರೆ ಸ್ಥಾಪಿಸಿದ ಶಿವಸೇನೆಯಿಂದ. ಆದಿತ್ಯ ಠಾಕ್ರೆ ಕುಟುಂಬ ರಾಜಕಾರಣ ಮಾಡಿದ್ದು ಬಿಟ್ಟರೆ ಸ್ವಂತವಾಗಿ ಏನು ಮಾಡಿದ್ದಾರೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಅಣ್ಣಾಮಲೈ ತಮ್ಮ ಸೇವೆಯಲ್ಲಿ ದಕ್ಷ ಪೊಲೀಸ್ ಅಧಿಕಾರಿಯಾಗಿ ಸಿಂಘಮ್ ಎಂದು ಗುರುತಿಸಿಕೊಂಡಿದ್ದಾರೆ ಎಂದು ಜನರು ಪ್ರತಿಕ್ರಿಯಿಸಿದ್ದಾರೆ.
ಬಾಳ್ ಠಾಕ್ರೆ ಸಂಪಾದನೆ ಮಾತ್ರ
66
ಮುಂಬೈಗೆ ಬರುತ್ತೇನೆ ಏನು ಮಾಡುತ್ತೀರಿ?
ರಾಜ್ ಠಾಕ್ರೆ ವ್ಯಂಗ್ಯವಾಗಿ ಅಣ್ಣಾಮಲೈಗೆ ರಸಮಲೈ ಎಂದಿದಿದ್ದರು. ಇದೇ ವೇಳೆ ಶಿವಸೇನೆ ಸೇರಿದಂತೆ ಕೆಲ ಕಾರ್ಯಕರ್ತರು ಮುಂಬೈ ಬಂದರೆ ಕಾಲು ಮುರಿಯುತ್ತೇವೆ ಎಂದ ಧಮ್ಕಿ ಹಾಕಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಅಣ್ಣಾಮಲೈ, ನನಗೆ ಧಮ್ಕಿ ಹಾಕಲು ಅವರು ಯಾರು, ನಾನು ಮುಂಬಗೆ ಬರುತ್ತೇನೆ, ಅದೇನು ಮಾಡುತ್ತೀರಿ ನಾನು ನೋಡುತ್ತೇನೆ. ಈ ರೀತಿಯ ಬೆದರಿಕೆಗೆ ನಾನು ಹೆದರುವುದಿಲ್ಲ ಎಂದು ಅಣ್ಣಾಮಲೈ ತಿರುಗೇಟು ನೀಡಿದ್ದರು.
ಮುಂಬೈಗೆ ಬರುತ್ತೇನೆ ಏನು ಮಾಡುತ್ತೀರಿ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ