ಹೇಗ್: ಸದ್ಯ ನೆದರ್ಲೆಂಡ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿನ ಸರ್ಕಾರ 11ನೇ ಶತಮಾನದ ಚೋಳರ ಕಾಲದ ಅನ್ನೈಮಂಗಲಂ ತಾಮ್ರದ ಫಲಕಗಳನ್ನು ಹಸ್ತಾಂತರಿಸಿದೆ. ಕೆಳಗೆ ಫೋಟೋಗಳೊಂದಿಗೆ ವಿವರಗಿವೆ ಮುಂದೆ ಓದಿ
ಹೇಗ್: ಸದ್ಯ ನೆದರ್ಲೆಂಡ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿನ ಸರ್ಕಾರ 11ನೇ ಶತಮಾನದ ಚೋಳರ ಕಾಲದ ಅನ್ನೈಮಂಗಲಂ ತಾಮ್ರದ ಫಲಕಗಳನ್ನು ಹಸ್ತಾಂತರಿಸಿದೆ.
25
ಪ್ರಧಾನಿ ಮೋದಿಗೆ ಚೋಳರ ಕಾಲದ ತಾಮ್ರ ಫಲಕ ಹಸ್ತಾಂತರಿಸಿದ ನೆದರ್ಲೆಂಡ್ಸ್!
ನೆದರ್ಲೆಂಡ್ಸ್‌ನಲ್ಲಿ ಲೈಡೆನ್ ಫಲಕಗಳು ಎಂದು ಕರೆಯಲ್ಪಡುವ ಅನ್ನೈಮಂಗಲಂ ಅನ್ನು ಭಾರತಕ್ಕೆ ಮರಳಿ ತರಲು 2012ರಿಂದಲೂ ಸರ್ಕಾರ ಪ್ರಯತ್ನಿಸುತ್ತಲೇ ಇತ್ತು. ಕೊನೆಗೂ ಫಲಪ್ರದವಾಗಿದೆ.
35
ತಮಿಳು ಭಾಷೆಯಲ್ಲಿರುವ ಚೋಳರ ಕಾಲದ ತಾಮ್ರ ಪತ್ರ
ರಾಜೇಂದ್ರ ಚೋಳ I ಕಾಲದ ಈ ತಾಮ್ರ ಫಲಕದಲ್ಲಿನ ಕೆತ್ತನೆಗಳು ತಮಿಳು ಭಾಷೆಯಲ್ಲಿದೆ. ಇದು 21 ದೊಡ್ಡ ಫಲಕ ಮತ್ತು 3 ಸಣ್ಣ ಫಲಕಗಳನ್ನು ಹೊಂದಿದ್ದು, 30 ಕೇಜಿ ತೂಕ ಹೊಂದಿದ್ದು ಉಂಗುರದಿಂದ ಬಂಧಿಸಲ್ಪಟ್ಟಿದೆ.
ತಮಿಳುನಾಡಿನ ನಾಗಪಟ್ಟಣಂ ಡಚ್ ಈಸ್ಟ್ ಇಂಡಿಯಾ ಕಂಪನಿಯ ನಿಯಂತ್ರಣದಲ್ಲಿದ್ದಾಗ ಡಚ್ ಅಧಿಕಾರಿ ಫ್ಲೋರೆಂಟಿಯಸ್ ಕ್ಯಾಂಪರ್ ಎಂಬಾತ 1703-1712ರ ಅವಧಿಯಲ್ಲಿ ಈ ಶಾಸನಗಳನ್ನು ವಶಪಡಿಸಿಕೊಂಡಿದ್ದ.
55
ಪ್ರಧಾನಿ ಮೋದಿ ನೆದರ್‌ಲ್ಯಾಂಡ್ ಪ್ರವಾಸ
ಆ ಬಳಿಕ ಕಾಲಾಂತರದಲ್ಲಿ ಅದು ಲೈಡೆನ್ ವಿವಿ ಸೇರಿತ್ತು. ಅಲ್ಲಿ ನಿಬಂಧನೆಗಳೊಂದಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಿತು. ಇದು ಭಾರತದ ಗಮನಕ್ಕೆ ಬಂದು ಪ್ರಾಚೀನ ಅಪರೂಪದ ವಸ್ತುಗಳನ್ನು ಪಡೆಯಲು ಪ್ರಯತ್ನಿಸುತ್ತಲೇ ಇತ್ತು. ಆದರೀಗ ಫಲಪ್ರದವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ