ನವದೆಹಲಿ(ಮೇ 06)ಇಂಥ ಘಟನೆಗಳು ಆಗಾಗ ದೇಶ ಮತ್ತು ನಮ್ಮ ಜನರ ಬಗೆಗಿನ ಅಭಿಮಾನ ಹೆಚ್ಚು ಮಾಡುತ್ತವೆ. ವೀರ ಯೋಧನ ಪತ್ನಿ ಸೇನೆ ಸೇರಿ ದೇಶ ಸೇವೆ ಮಾಡಲು ಸಿದ್ಧರಾಗಿ ನಿಂತಿದ್ದಾರೆ. ತನಗೆ ಸಾಧ್ಯವಾಗದಿದ್ದರೆ ಮಗಳನ್ನು ಸೇರಿಸುತ್ತೇನೆ ಎಂದು ಹೇಳೀದ್ದಾರೆ.
ನವದೆಹಲಿ(ಮೇ 06) ಪಲ್ಲವಿ ಶರ್ಮಾ ಈಕೆ ಯಾರು ಎಂಬುದು ನಿಮಗೆ ಗೊತ್ತಿಲ್ಲದೆ ಇರಬಹುದು. ಆದರೆ ಕರ್ನಲ್ ಅಶುತೋಶ್ ಶರ್ಮಾ ಈ ಹೆಸರನ್ನೆ ಕೇಳಿಯೇ ಇರುತ್ತೀರಿ. ಜಮ್ಮು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಹಂದ್ವಾರಾದಲ್ಲಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರ ಪತ್ನಿ.
ಪಲ್ಲವಿ ಶರ್ಮಾ ಸಹ ಈಗ ದೇಶ ಸೇವೆ ಮಾಡಲು ಭಾರತೀಯ ಸೈನ್ಯ ಸೇರುತ್ತೇನೆ ಎಂದು ಹೇಳಿದ್ದಾರೆ. ವಯಸ್ಸಿನ ಕಾರಣಕ್ಕೆ ನನಗೆ ಸಾಧ್ಯವಾಗದಿದ್ದರೆ ನನ್ನ ಮಗಳನ್ನು ಸೇರಿಸುತ್ತೇನೆ ಎಂದು ಶಪಥ ಮಾಡಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಮಿನಿಸ್ಟರಿಯೊಂದಿಗೂ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ಯೋಧ ಪುತ್ರನ ಅಂತಿಮ ದರ್ಶನಕ್ಕೆ 2600 ಕಿಮೀ..ಲೆಕ್ಕವೇ ಅಲ್ಲ ಬಿಡಿ
ನಾನು ಸ್ವಯಂ ಪ್ರೇರಿತವಾಗಿ ಸೈನ್ಯ ಸೇರಲು ಬಯಸುತ್ತಿದ್ದೇನೆ. ಸಚಿವಾಲಯ ಅನುಮತಿ ನೀಡಿದರೆ ಸೈನ್ಯದ ಸಮವಸ್ತ್ರದಲ್ಲಿ ಇರುತ್ತೇನೆ ಎಂದು ಅಭಿಮಾನದ ಮಾತುಗಳನ್ನೇ ಆಡುತ್ತಾರೆ.
ಒತ್ತೆ ಇಟ್ಟುಕೊಂಡಿದ್ದ ಸ್ಥಳೀಯರನ್ನು ಉಗ್ರರ ಕೈನಿಂದ ಬಿಡಿಸಲು ಹೋದಾಗ ವೀರ ಯೋಧ ದೇಶಕ್ಕಾಗಿ ಪ್ರಾಣ ನೀಡಿದ್ದರು.
ರಾಷ್ಟ್ರೀಯ ರೈಫಲ್ಸ್ 21 ನ್ನು ಶರ್ಮಾ ಮುನ್ನಡೆಸುತ್ತಿದ್ದರು. ಇದೇ ವೇಳೆ ಲಷ್ಕರ್ ಇ ತೋಯ್ಬಾ ಸಂಘಟನೆಯ ಉಗ್ರರನ್ನು ಎದುರಿಸಬೇಕಾದ ಪರಿಸ್ಥಿತಿ ಬಂದಿತ್ತು.
ಶರ್ಮಾ ಅವರಿಗೆ 11 ವರ್ಷದ ಮಗಳಿದ್ದಾರೆ. ಉತ್ತರ ಪ್ರದೇಶ ಮೂಲದ ಕುಟುಂಬ ಜೈಪುರದಲ್ಲಿ ವಾಸವಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಗಲಿದ ಯೋಧನಿಗೆ ಮಂಗಳವಾರ ಅಂತಿಮ ನಮನ ಸಲ್ಲಿಸಲಾಯಿತು.