ಎಣ್ಣೆ ಏಟಿಗೆ ಕುತುಬ್ ಮಿನಾರ್ ಗೋಡೆಗೆ ಡಿಕ್ಕಿ, ಕಾರಿನಲ್ಲಿ ಸ್ಫೋಟ!

Published : May 06, 2020, 05:53 PM ISTUpdated : May 06, 2020, 06:10 PM IST
ಎಣ್ಣೆ ಏಟಿಗೆ ಕುತುಬ್ ಮಿನಾರ್ ಗೋಡೆಗೆ ಡಿಕ್ಕಿ, ಕಾರಿನಲ್ಲಿ ಸ್ಫೋಟ!

ಸಾರಾಂಶ

ಲಾಕ್‌ಡೌನ್ ಸಡಿಲಿಕೆ  ಮದ್ಯ ಮಾರಾಟ ಆರಂಭ| ಎಣ್ಣೆ ನಶೆಯಲ್ಲಿ ಕಾರು ಚಲಾಯಿಸಿ ಕುತುಬ್ ಮಿನಾರ್ ಗೊಡೆಗೆ ಡಿಕ್ಕಿ ಹೊಡೆದ ಚಾಲಕ| ನಶೆಯಲ್ಲಿ ತೇಲಾಡುತ್ತಿದ್ದ ಚಾಲಕನನ್ನು ಂಧಿಸಿದ ಪೊಲೀಸರು

ನವದೆಹಲಿ(ಮೇ.06): ಮದ್ಯದ ನಶೆಯಲ್ಲಿ ತೇಲಾಡುತ್ತಿದ್ದ ವ್ಯಕ್ತಿಯೊಬ್ಬ ಕಾರು ಚಲಾಯಿಸುತ್ತಿದ್ದಾಗ ದೆಹಲಿಯ ಐತಿಹಾಸಿಕ ಕುತುಬ್ ಮಿನಾರ್ ಗೋಡೆಗೆ ಡಿಕ್ಕಿ ಹೊಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗೋಡೆಗೆ ಭಾರಿ ಹಾನಿಯುಂಟಾಗಿದೆ. ಈ ಅಪಘಾತದ ಬೆನ್ನಲ್ಲೇ ಕಾರಿಗೆ ಬೆಂಕಿ ತಗುಲಿದ್ದು, ಸ್ಫೋಟ ಸಂಭವಿಸಿದೆ. ಈ ಅಪಘಾತ ಮಂಗಳವಾರ ಬೆಳಗ್ಗೆ ಮುಂಜಾನೆ ಸುಮಾರು ಮೂರೂವರೆಗೆ ಸಂಭವಿಸಿದೆ. ಇನ್ನು ಕುತುಬ್ ಮಿನಾರ್ ಭದ್ರತಾ ಸಿಬ್ಬಂದಿ ಕಾರು ಚಾಲಕನನ್ನು ರಕ್ಷಿಸಿದ್ದಾರೆ.

ಗಾಯಗೊಂಡಿದ್ದ ಹಾಗೂ ಸುಟ್ಟ ಸ್ಥಿತಿಯಲ್ಲಿದ್ದ ಚಾಲಕನನ್ನು ಸಫ್ದರ್‌ಗಂಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಗೋಡೆಗೆ ಡಿಕ್ಕಿ ಹೊಡೆದ ವ್ಯಕ್ತಿಯನ್ನು ಅರುಣ್ ಚೌಹಾಣ್ ಎಂದು ಗುರುತಿಸಲಾಗಿದ್ದು, ಈತ ದೆಲಿಯ ಮಹಿಪಾಲ್ಪುರ್ ನಿವಾಸಿಯಾಗಿದ್ದಾನೆ. ಈತ ಓರ್ವ ಸೇಳ್ ಪರ್ಚೇಜ್ ಕೆಸಲ ಮಾಡುತ್ತಾನೆ.

ಈಕೆ ವಿದ್ಯಾರ್ಥಿನಿ, ತುಂಬು ಗರ್ಭಿಣಿ... ತಿಹಾರ್ ಜೈಲು ಸೇರಿ ಮೂರು ವಾರ!

ಘಟನೆ ಬೆನ್ನಲ್ಲೇ ಭಾರತೀಯ ಪುರಾತತ್ವ ಇಲಾಖೆ ದೆಹಲಿ ಪೊಲೀಸರಿಗೆ ಪತ್ರವೊಂದನ್ನು ಬರೆದಿದ್ದು, ಐತಿಹಾಸಿಕ ಸ್ಮಾರಕ ಕುತುಬ್ ಮಿನಾರ್ ಗೋಡೆಗೆ ಆಗಿರುವ ಹಾನಿ ಸರಿಪಡಿಸಲು ಬತಗುಲುವ ವೆಚ್ಚವನ್ನು ಆರೋಪಿಯಿಂದ ಪಡೆದುಕೊಳ್ಳುವಂತೆ ಸೂಚಿಸಿದೆ.

ಇನ್ನು ದೆಹಲಿಯಲ್ಲಿ ಮಾರ್ಚ್ 3ರ ಬಳಿಕ ಲಾಕ್‌ಡೌನ್ ಸಡಿಲಗೊಳಿಸಲಾಗಿದ್ದು, ಮದ್ಯ ಮಾರಾಟ ಆರಂಭಿಸಲಾಗಿದೆ. ಕಳೆದ ನಲ್ವತ್ತು ದಿನಗಳಿಂದ ಮದ್ಯವಿಲ್ಲದೇ ಪರದಾಡುತ್ತಿದ್ದ ಎಣ್ಣೆ ಪ್ರಿಯರು ವೈನ್‌ ಶಾಪ್‌ಗಳಿಂದ ಭರ್ಜರಿಯಾಗಿ ಮದ್ಯ ಖರೀದಿಸಿ ನಶೆಯಲ್ಲಿ ತೂರಾಡಲಾರಂಭಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಮನೆಯಲ್ಲಿ ಒಂದು ರೂಪಾಯಿ ಇಲ್ಲ ಆದ್ರೂ ಸಿಸಿಟಿವಿ ಯಾಕೆ ಹಾಕಿದ್ರಿ: ಸಿಕ್ಕಿದ್ದನ್ನು ದೋಚಿ ಪತ್ರ ಬರೆದಿಟ್ಟು ಹೋದ ಕಳ್ಳ