ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ಲೋಕ್ ಪೋಲ್ ಮತ್ತು ಯೆಸ್ ಇಂಡಿಯಾ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಗಳು ಹೊರಬಿದ್ದಿವೆ. ಪ್ರಶಾಂತ್ ಕಿಶೋರ್ ಅವರ ಜನ್ ಸೂರಜ್ ಪಕ್ಷವು ಫಲಿತಾಂಶದ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ.
ಈ ವರ್ಷದ ಅಂತ್ಯಕ್ಕೆ ಬಿಹಾರ ವಿಧಾನಸಭಾ ಚುನಾವಣೆ ನಡೆಯಲಿದೆ. ಮುಂದಿನ 5 ವರ್ಷ ಬಿಹಾರಕ್ಕೆ ಯಾರು ಸಿಎಂ ಆಗ್ತಾರೆ ಎಂಬುದರ ಬಗ್ಗೆ ತೀವ್ರ ಕುತುಹೂಲ ಮೂಡಿಸಿದೆ. ಚುನಾವಣೆ ದಿನಾಂಕ ಪ್ರಕಟಕ್ಕೂ ಮುನ್ನವೇ ಆಡಳಿತ ರೂಢ ಜೆಡಿಯು-ಬಿಜೆಪಿ ಮೈತ್ರಿ ಸರ್ಕಾರ ಜನಪ್ರಿಯ ಯೋಜನೆಗಳನ್ನು ಘೋಷಿಸೋದರ ಜೊತೆ ಕಾರ್ಯರೂಪಕ್ಕೆ ತರುತ್ತಿವೆ.
27
ಚುನಾವಣೆ ಪ್ರಚಾರ
ಇತ್ತ ಆರ್‌ಜೆಡಿ, ಕಾಂಗ್ರೆಸ್ ಸೇರಿದಂತೆ ಇನ್ನುಳಿದ ಪಕ್ಷಗಳು ತಮ್ಮದೇ ರೀತಿಯಲ್ಲಿ ಚುನಾವಣೆ ಪ್ರಚಾರವನ್ನು ನಡೆಸುತ್ತಿವೆ. ಚುನಾವಣೆ ತಜ್ಞ ಅಂತ ಕರೆಸಿಕೊಳ್ಳುವ ಪ್ರಶಾಂತ್ ಕಿಶೋರ್, ಜನಸೂರಜ್ ಪಕ್ಷ ಬಿಹಾರದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಬಿಜೆಪಿ-ಜೆಡಿಯು-ಲೋಕಜನ್ ಶಕ್ತಿ ಪಕ್ಷಗಳ ನಡುವೆ ಕ್ಷೇತ್ರ ಹಂಚಿಕೆ ನಡೆಯಬೇಕಿದೆ. ಇನ್ನು ಆರ್‌ಜೆಡಿ-ಕಾಂಗ್ರೆಸ್ ಜೊತೆಯಾಗಿ ಸ್ಪರ್ಧೆ ಮಾಡುತ್ತಾ ಎಂಬುದರ ಬಗ್ಗೆಯೂ ಸ್ಪಷ್ಟತೆ ಇಲ್ಲ.
37
ಲೋಕ್ ಪೋಲ್ ಮತ್ತು ಯೆಸ್ ಇಂಡಿಯಾ
ಈ ಎಲ್ಲಾ ಬೆಳವಣಿಗೆ ನಡುವೆ ಲೋಕ್ ಪೋಲ್ ಮತ್ತು ಯೆಸ್ ಇಂಡಿಯಾ ಚುನಾವಣಾ ಪೂರ್ವ ಸಮೀಕ್ಷೆ ಮಾಡಿವೆ. ಈ ಸಮೀಕ್ಷೆಯಲ್ಲಿ ಯಾರಿಗೆ ಎಷ್ಟು ಸೀಟ್ ಎಂಬುದರ ಬಗ್ಗೆ ಹೇಳಲಾಗಿದೆ.
ಮಹಾಘಟಬಂಧನ್ (ಆರ್‌ಜೆಡಿ+ಕಾಂಗ್ರೆಸ್) 118 ರಿಂದ 126 ಕ್ಷೇತ್ರಗಳನ್ನು ಗೆಲ್ಲುವ ಸಾಧ್ಯತೆಗಳಿವೆ.
ಎನ್‌ಡಿಎ 105 ರಿಂದ 114 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆಗಳಿವೆ.
ಇತರರು 2 ರಿಂದ 5 ಕ್ಷೇತ್ರಗಳಲ್ಲಿ ಗೆಲ್ಲಬಹುದು.
ಸರ್ಕಾರ ರಚನೆಗೆ 122 ಕ್ಷೇತ್ರಗಳಲ್ಲಿ ಗೆಲ್ಲಬೇಕಾಗುತ್ತದೆ.
57
ಮತಗಳ ಶೇಕಡಾವಾರು ಹಂಚಿಕೆ
ಲೋಕ್ ಪೋಲ್ ಸಮೀಕ್ಷೆ ಪ್ರಕಾರ, ಮಹಾಘಟಬಂಧನ್ ಮತ್ತು ಎನ್‌ಡಿಎ ನಡುವೆ ತೀವ್ರ ಪೈಪೋಟಿ ನಡೆಯಲಿದೆ. ಇತರರು ಅಥವಾ ಸ್ವತಂತ್ರ ಅಭ್ಯರ್ಥಿಗಳ ಗೆಲುವಿನ ಸಂಖ್ಯೆ ಡಬಲ್ ಡಿಜಿಟ್ ದಾಟಿದ್ರೆ ಬಿಹಾರ ರಾಜಕೀಯದಲ್ಲಿ ಕಿಂಗ್ ಮೇಕರ್ ಆಗಲಿದ್ದಾರೆ. ಲೋಕ್ ಪೋಲ್ ಸಮೀಕ್ಷೆ ಪ್ರಕಾರ, ಮತಗಳ ಶೇಕಡಾವಾರು ಹಂಚಿಕೆ ಈ ರೀತಿಯಾಗಿದೆ.
ಮಹಾಘಟ್‌ಬಂಧನ್: ಶೇ.39 ರಿಂದ ಶೇ.4 2
ಎನ್‌ಡಿಎ: ಶೇ.38 ರಿಂದ ಶೇ.41
67
ಯೆಸ್ ಇಂಡಿಯಾ ಸಮೀಕ್ಷೆ
ಪೂರ್ಣಿಯಾದ 24 ಕ್ಷೇತ್ರಗಳಲ್ಲಿ ಮುಸ್ಲಿಂ ಮತಗಳಿಂದಾಗಿ ಮಹಾಘಟಬಂಧನ್ ಮೇಲುಗೈ ಸಾಧಿಸಿಕೊಂಡರೂ, ಎನ್‌ಡಿಎ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ನಿರೀಕ್ಷೆಯನ್ನು ಹೊಂದಿದೆ. ಕಳೆದ ಚುನಾವಣೆಗಳಿಂದ ಎನ್‌ಡಿಎ, 26ರಲ್ಲಿ ಉತ್ತಮವಾಗಿ ಪ್ರದರ್ಶನ ಮಾಡಬಹುದು. ಭೋಜ್‌ಪುರದ ಭಾಗದ 22 ಕ್ಷೇತ್ರಗಳಲ್ಲಿ ಎನ್‌ಡಿಎ ಪ್ರಭಾವ ಹೆಚ್ಚಿರಲಿದೆ. ಇನ್ನು ಬಾಗಲ್ಪುರದಲ್ಲಿ ಎರಡೂ ಕೂಟಗಳು ಸಮಬಲದ ಹೋರಾಟ ನಡೆಸಲಿವೆ. ಇನ್ನು ಈ ಚುನಾವಣೆಯಲ್ಲಿ ಜನ್ ಸೂರಜ್ ಪಕ್ಷ ತನ್ನ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳಲಿದೆ.
ಪ್ರಶಾಂತ್ ಕಿಶೋರ್ ಅವರ ಜನ್ ಸೂರಜ್ ಪಕ್ಷ ಬಿಹಾರ ಚುನಾವಣೆಯಲ್ಲಿ ಹೊಸ ಫ್ಯಾಕ್ಟರ್ ಆಗಿದ್ದು, ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ಜನ್ ಸೂರಜ್ ಸೇರಿದಂತೆ ಇನ್ನುಳಿದ ಪ್ರಾದೇಶಿಕ ಮತ್ತು ಪ್ರಬಲ ಅಭ್ಯರ್ಥಿಗಳನ್ನು ನಿರ್ಲಕ್ಷ್ಯ ಮಾಡಲು ಆಗಲ್ಲ. ಲೋಕಸಭಾ ಚುನಾವಣೆಯ ಮಹಾಘಟಬಂಧನ್ ಮತ್ತೆ ಮುಂದುವರಿದಿದೆ. ಬಿಹಾರ ರಾಜಕೀಯದಲ್ಲಿ ಪ್ರತಿಯೊಂದು ಸ್ಥಾನವೂ ಮುಖ್ಯವಾಗಿದೆ.