ಗಂಡನಿದ್ರೂ ಇಬ್ಬರೊಂದಿಗೆ 4 ಮಕ್ಕಳ ತಾಯಿಯ ರಂಗಿನಾಟ ರಕ್ತಸಿಕ್ತದಲ್ಲಿ ಅಂತ್ಯ! ಕೊಟ್ಟಿದ್ದು ಕೊಡದಿದ್ದಕ್ಕೆ ಮಟಾಷ್!

Published : Oct 26, 2025, 11:36 AM IST

Illicit Relationship: ಉಜ್ಮಾ ಎಂಬ ಮಹಿಳೆ ಬರ್ಬರವಾಗಿ ಕೊಲೆಯಾಗಿದ್ದಾರೆ. ಇಬ್ಬರು ವ್ಯಕ್ತಿಗಳೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದೇ ಈ ಕೊಲೆಗೆ ಕಾರಣವೆಂದು ಶಂಕಿಸಲಾಗಿದ್ದು, ಮಾಜಿ ಪ್ರಿಯಕರನ ಮೇಲೆ ಅನುಮಾನ ವ್ಯಕ್ತವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

PREV
15
ಇಬ್ಬರೊಂದಿಗೆ ಅಕ್ರಮ ಸಂಬಂಧ

ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಕೊ*ಲೆಯಾಗಿರುವ ಘಟನೆ ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ವೆಲ್ಡೂರಿನಲ್ಲಿ ನಡೆದಿದೆ. 34 ವರ್ಷದ ಉಜ್ಮಾ ಕೊ*ಲೆಯಾದ ಮಹಿಳೆ. ವೆಲ್ಡೂರಿನ ವಾರ್ಡ್ 14ರ ನಿವಾಸಿಯ ಉಜ್ಮಾಗೆ 15 ವರ್ಷದ ಹಿಂದೆ ಮದುವೆಯಾಗಿದ್ದು, ನಾಲ್ಕು ಮಕ್ಕಳಿದ್ದಾರೆ. ಉಜ್ಮಾ ಗಂಡ ಕೆಲಸಕ್ಕಾಗಿ ಬೇರೆ ಊರಿನಲ್ಲಿದ್ದನು.

25
ರಾಜಕಾರಣದಲ್ಲಿಯೂ ಗುರುತಿಸಿಕೊಂಡಿದ್ದ ಉಜ್ಮಾ

ಮದುವೆಯಾಗಿ ನಾಲ್ಕು ಮಕ್ಕಳಿದ್ದರೂ ವಡ್ಡಗೇರಿಯ ನಿವಾಸಿಯೋರ್ವನ ಜೊತೆ ಉಜ್ಮಾ ವಿವಾಹೇತರ ಸಂಬಂಧ ಹೊಂದಿದ್ದರು. ಇತ್ತೀಚೆಗೆ ರಾಜಕಾರಣದಲ್ಲಿಯೂ ಸಕ್ರಿಯವಾಗಿದ್ದು ಉಜ್ಮಾ, ಬಿಜೆಪಿ ನಾಯಕರೊಂದಿಗೆ ಹಲವು ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಂಡಿದ್ದರು. ಈ ಸಮಯದಲ್ಲಿ ಕೃಷ್ಣಗಿರಿಯ ವ್ಯಕ್ತಿ ಸಂಪರ್ಕಕ್ಕೆ ಉಜ್ಮಾ ಬಂದಿದ್ದರು. (ಸಾಂದರ್ಭಿಕ ಚಿತ್ರ)

35
ಮಾಜಿ ಗೆಳೆಯನ ವಿರುದ್ಧ ದೂರು

ಮತ್ತೋರ್ವ ವ್ಯಕ್ತಿಯಿಂದೊಂದಿಗೆ ಉಜ್ಮಾ ಸಂಬಂಧ ಬೆಳೆಸಿದ ವಿಷಯ ಮೊದಲ ಗೆಳೆಯನಿಗೆ ಗೊತ್ತಾಗಿದೆ. ಇಷ್ಟು ದಿನ ಮಾಡಿರುವ ನಿನಗಾಗಿ ಮಾಡಿದ ಖರ್ಚು ಹಿಂದಿರುಗಿಸುವಂತೆ ಒತ್ತಡ ಹಾಕಿದ್ದಾನೆ. ಈ ಸಂಬಂಧ ಮಾಜಿ ಗೆಳೆಯನ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿದ ಬಳಿ ಮಾಜಿ ಗೆಳೆಯನ ಕುಟುಂಬಸ್ಥರು ಉಜ್ಮಾ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. (ಸಾಂದರ್ಭಿಕ ಚಿತ್ರ)

ಇದನ್ನೂ ಓದಿ: ಬೆಂಗಳೂರಿನಲ್ಲಿ ಪುತ್ತೂರು ಯುವಕನ ಸಾವಿನ ಪ್ರಕರಣಕ್ಕೆ ಸ್ಪೋಟಕ ತಿರುವು; ಪೋಸ್ಟ್‌ ಮಾರ್ಟ್ಂ ವರದಿಯಲ್ಲೇನಿದೆ?

45
ರಕ್ತದ ಮಡುವಿನಲ್ಲಿ ಉಜ್ಮಾ ಶವ ಪತ್ತೆ

ಬುಧವಾರ ಮಧ್ನಾಹ್ಮ ಉಜ್ಮಾ ಮನೆಗೆ ಬಂದ ಮಾಜಿ ಗೆಳೆಯ ಗಲಾಟೆ ಮಾಡಿದ್ದಾನೆ. ನಂತರ ಇಬ್ಬರ ನಡುವೆ ಏನಾಗಿದೆ ಎಂದು ತಿಳಿದು ಬಂದಿಲ್ಲ. ಸಂಜೆ ಶಾಲೆಯಿಂದ ಮಕ್ಕಳು ಬಂದಾಗ ಒಳಗಿನಿಂದ ಬಾಗಿಲು ತೆಗೆದಿಲ್ಲ. ಅನುಮಾನಗೊಂಡು ಸ್ಥಳೀಯರು ಬಾಗಿಲು ಒಡೆದಾಗ ರಕ್ತದ ಮಡುವಿನಲ್ಲಿ ಉಜ್ಮಾ ಶವ ಪತ್ತೆಯಾಗಿದೆ. ಸ್ಥಳೀಯರು ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. (ಸಾಂದರ್ಭಿಕ ಚಿತ್ರ)

ಇದನ್ನೂ ಓದಿ: ಬೆಂಗಳೂರಲ್ಲಿ ಲವ್ ಜಿಹಾದ್; ಮೋಸ, ಬೆದರಿಕೆ, ಮತಾಂತರ ಒತ್ತಡ; ಇಶಾಕ್ ವಿರುದ್ಧ ದೂರು

55
ತನಿಖೆ ಆರಂಭಿಸಿರುವ ಪೊಲೀಸರು

ಮೃತ ಉಜ್ಮಾ ಗಂಡ ಮಸ್ತಾನ್ ಕೆಲಸಕ್ಕಾಗಿ ತೆಲಂಗಾಣದ ಸಿದ್ದಿಪೇಟೆಯ ಪ್ರಜ್ಞಾಪುರದಲ್ಲಿದ್ದನು. ಮನೆಯ ಹೊರಗೆ ಮತ್ತು ಒಳಗಡೆ ಅಳವಡಿಸಲಾಗಿದ್ದು ಸಿಸಿಟಿವಿ ಕ್ಯಾಮೆರಾದ ಹಾರ್ಡ್ ಡಿಸ್ಕ್ ಮತ್ತು ಉಜ್ಮಾ ಬಳಕೆ ಮಾಡ್ತಿದ್ದ ಮೊಬೈಲ್ ತೆಗೆದುಕೊಂಡು ಹೋಗಿದ್ದಾನೆ. ಮರಣೋತ್ತರ ಶವ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಉಜ್ಮಾ ತಾಯಿ ನೂರ್‌ಜಹಾನ್ ನೀಡಿದ ದೂರಿನಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಸಾಂದರ್ಭಿಕ ಚಿತ್ರ)

ಇದನ್ನೂ ಓದಿ:  Yadagiri, Kodekal: ನಾಪತ್ತೆಯಾದ ವಿದ್ಯಾರ್ಥಿನಿ ಸೌಜನ್ಯ ಕಾಲುವೆಯಲ್ಲಿ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನ

Read more Photos on
click me!

Recommended Stories