ದೀಪಾವಳಿ ಮುಗಿಸಿ ಬೆಂಗಳೂರಿಗೆ ಬರುತ್ತಿದ್ದವರ ದುರಂತ ಅಂತ್ಯಕ್ಕೆ ಕಾರಣವಾಯ್ತಾ ಚಾಲಕರ ಆ ತಪ್ಪು?

Published : Oct 24, 2025, 09:02 AM IST

ಆಂಧ್ರಪ್ರದೇಶದ ಕರ್ನೂಲು ಬಳಿ ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಭೀಕರ ಅಪಘಾತಕ್ಕೀಡಾಗಿದೆ. ಬೈಕ್ ಡಿಕ್ಕಿಯಾದ ಪರಿಣಾಮ ಬಸ್‌ನ ಡೀಸೆಲ್ ಟ್ಯಾಂಕ್‌ಗೆ ಬೆಂಕಿ ಹೊತ್ತಿಕೊಂಡು, 20ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನವಾಗಿದ್ದಾರೆ.

PREV
17
ಕರ್ನೂಲು ಬಸ್‌ ದುರಂತ

ಆಂಧ್ರ ಪ್ರದೇಶದ ಖಾಸಗಿ ಬಸ್ ದುರಂತ ಬೆಳ್ಳಂ ಬೆಳಗ್ಗೆ ಆಘಾತವನ್ನುಂಟು ಮಾಡಿದೆ. ಸುಮಾರು 20ಕ್ಕೂ ಅಧಿಕ ಪ್ರಯಾಣಿಕರು ಸಜೀವ ದಹನವಾಗಿರೋದು ತಿಳಿದು ಬಂದಿದೆ. ಇಂದು ಬೆಳಗಿನ ಜಾವ ಸುಮಾರು 3.30ರ ಆಸುಪಾಸಿನಲ್ಲಿ ದುರಂತ ಸಂಭವಿಸಿದೆ. ವೇಮುರಿ ಕಾವೇರಿ ಟ್ರಾವೆಲ್ಸ್‌ನ DD01N 9490 ಸಂಖ್ಯೆಯ ಬಸ್‌ ಹೈದರಾಬಾದ್‌ನಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿತ್ತು.

27
ಅಪಘಾತ ಆಗಿದ್ದು ಹೇಗೆ?

ಕರ್ನೂಲು ಮಂಡಲದ ಚಿನ್ನಟೆಕೋರಿನ ಬಳಿ ಬಸ್ ಮಾರ್ಗದಲ್ಲಿಯೇ ಬೈಕ್ ಹೋಗುತ್ತಿತ್ತು. ಈ ವೇಳೆ ಮಳೆಯಾಗುತ್ತಿದ್ದರಿಂದ ಬೈಕ್‌ ಸ್ಕಿಡ್ ಆಗುವ ಪರಿಸ್ಥಿತಿ ಇರುತ್ತದೆ. ಮಳೆ ಬರುತ್ತಿದ್ರೂ ಸವಾರ ಶಿವಶಂಕರ್ ಬೈಕ್ ವೇಗವಾಗಿ ಚಲಾಯಿಸುತ್ತಿದ್ದನು. ಈ ವೇಳೆ ನಿಯಂತ್ರಣ ಕಳೆದುಕೊಂಡ ಸವಾರ ಬೈಕ್ ಸಮೇತ ಬಸ್‌ನ ಮುಂಭಾಗದ ಚಕ್ರದಡಿ ಸಿಲುಕಿದ್ದಾನೆ. ಕೆಲವೇ ಕ್ಷಣಗಳಲ್ಲಿ ಬಸ್‌ ಡೀಸೆಲ್ ಟ್ಯಾಂಕ್‌ಗ ಬೈಕ್ ಡಿಕ್ಕಿಯಾಗಿ ಬೆಂಕಿ ಹತ್ತಿಕೊಂಡಿದೆ ಎಂದು ಕರ್ನೂಲ್ ಎಸ್‌ಪಿ ಮಾಹಿತಿ ನೀಡಿದ್ದಾರೆ.

37
ಬಸ್ ಚಾಲಕ ಮಾಡಿದ್ದೇನು?

ಮುಂಭಾಗ ಬೈಕ್ ಡಿಕ್ಕಿಯಾಗುತ್ತಿದ್ದಂತೆ ಚಾಲಕ ಬ್ರೇಕ್ ಹಾಕಿ ಬಸ್‌ನ್ನು ಹೆದ್ದಾರಿ ಪಕ್ಕ ನಿಲ್ಲಿಸಿದ್ದಾನೆ. ನಿದ್ದೆಯಲ್ಲಿದ್ದ ಸಹ ಚಾಲಕನನ್ನು ಎಚ್ಚರಗೊಳಿಸಿದ್ದಾನೆ. ಆರಂಭದಲ್ಲಿ ಸಣ್ಣ ಬೆಂಕಿ ಎಂದು ತಿಳಿದು ತಾವೇ ನಂದಿಸಲು ಪ್ರಯತ್ನಿಸಿದ್ದಾರೆ. ಬೆಂಕಿ ತೀವ್ರತೆ ಹೆಚ್ಚಾಗುತ್ತಿದ್ದಂತೆ ನಿದ್ದೆಯಲ್ಲಿದ್ದ ಪ್ರಯಾಣಿಕರನ್ನು ಎಚ್ಚರಗೊಳಿಸಲು ಪ್ರಯತ್ನಿಸಿದ್ದಾರೆ. ಈ ವೇಳೆಗಾಗಲೇ ಚಾಲಕನ ಸೀಟ್‌ವರೆಗೂ ಬೆಂಕಿ ಆವರಿಸಿಕೊಂಡಿತ್ತು.

47
ಚಾಲಕನ ನಿರ್ಲಕ್ಷ್ಯ?

ತುರ್ತು ಕಿಟಕಿ ಬಳಿಯಲ್ಲಿದ್ದ ಪ್ರಯಾಣಿಕರು ಉಳಿಸಿಕೊಂಡಿದ್ದಾರೆ. ಬಸ್‌ ಹಿಂಭಾಗದ ಸೀಟುಗಳಲ್ಲಿದ್ದ ಪ್ರಯಾಣಿಕರು ಹೊರ ಬರಲಾಗದೇ ಬೆಂಕಿಯ ಕೆನ್ನಾಲಿಗೆಯಲ್ಲಿ ಸಿಲುಕಿ ಕಿರುಚುತ್ತಾ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಬಸ್ ನಿಲ್ಲಿಸುತ್ತಿದ್ದಂತೆ ಚಾಲಕರಿಬ್ಬರು ಎಲ್ಲಾ ಪ್ರಯಾಣಿಕರನ್ನು ಎಚ್ಚರಗೊಳಿಸಿದ್ರೆ ಇಷ್ಟು ದೊಡ್ಡಮಟ್ಟದ ಪ್ರಾಣಹಾನಿ ಸಂಭವಿಸುತ್ತಿರಲಿಲ್ಲ.

ಇದನ್ನೂ ಓದಿ: ಹೊತ್ತಿ ಉರಿದ ಬೆಂಗಳೂರಿಗೆ ಬರುತ್ತಿದ್ದ ಬಸ್; 20ಕ್ಕೂ ಅಧಿಕ ಪ್ರಯಾಣಿಕರು ಸಜೀವ ದಹನ 

57
ಎಸಿ ಬಸ್

ಎಸಿ ಬಸ್ ಆಗಿದ್ದರಿಂದ ಎಲ್ಲಾ ಕಿಟಕಿಗಳು ಕ್ಲೋಸ್ ಆಗಿತ್ತು. ಹಾಗಾಗಿ ಪ್ರಯಾಣಿಕರಿಗೆ ಹೊರ ಬರಲು ಸಾಧ್ಯವಾಗಲಿಲ್ಲ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ವರದಿಯಾಗಿದೆ.

67
ಪ್ರಯಾಣಿಕರ ಮಾಹಿತಿ ಬಿಡುಗಡೆ

ಮೃತರೆಲ್ಲರೂ ಹೈದರಾಬಾದ್ ಮೂಲದವರು ಎಂದು ತಿಳಿದು ಬಂದಿದ್ದು, ವೇಮುರಿ ಕಾವೇರಿ ಟ್ರಾವೆಲ್ಸ್‌ ಎಲ್ಲಾ ಪ್ರಯಾಣಿಕರ ಮಾಹಿತಿಯನ್ನು ಬಿಡುಗಡೆಗೊಳಿಸಿದೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ಪ್ರಯಾಣಿಕರ ಕುಟುಂಬಸ್ಥರಿಗೆ ಅಪಘಾತದ ಮಾಹಿತಿಯನ್ನು ನೀಡಲಾಗಿದೆ. ಮೃತದೇಹಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಗುರುತು ಪತ್ತೆಯಾಗಿಲ್ಲ. ಬೈಕ್ ಸವಾರ ಸಹ ಅಗ್ನಿಕೆನ್ನಾಲಿಗೆ ಸಿಲುಕಿ ಸತ್ತಿದ್ದಾನೆ.

77
ಸುಟ್ಟು ಕರಕಲಾಗಿರುವ ಶವಗಳು

ಮೃತದೇಹಗಳನ್ನು ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದ್ದು, ಡಿಎನ್‌ಎ ಪರೀಕ್ಷೆ ಬಳಿಕ ಶವಗಳನ್ನು ಹಸ್ತಾಂತರಿಸುವ ಸಾಧ್ಯತೆಗಳಿವೆ. ಎಮೆರ್ಜೆನ್ಸಿ ಕಿಟಕಿಯಿಂದ ಹೊರ ಬಂದಿರುವ ಪ್ರಯಾಣಿಕರು ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಚಾಲಕರಿಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ: ಎಲ್ಲರೂ ದೀಪಾವಳಿ ಆಚರಿಸ್ತಿದ್ರೆ, ರಾತ್ರಿ 35ರ ಆಂಟಿ ಜೊತೆ ಕಾಡಿನೊಳಗೆ ಹೋದ 19ರ ಯುವಕ

Read more Photos on
click me!

Recommended Stories