"ಅವನಿಗೆ ಕೂದಲೇ ಇರಲಿಲ್ಲ, ವಿಗ್ ಹಾಕುತ್ತಿದ್ದ"; ಕೇತನ್ ಮರ್ಡರ್ ಕೇಸ್‌ನಲ್ಲಿ ಹೊಸ ಬಾಂಬ್ ಹಾಕಿದ ಸಿಯಾ

Published : Jun 26, 2026, 03:46 PM IST

Ketan Agarwal murder: "ನನಗೆ ಅವನ ವಿಗ್ ಇಷ್ಟವಿರಲಿಲ್ಲ"  ಉದ್ಯಮಿ ಕೇತನ್ ಹತ್ಯೆ ಪ್ರಕರಣದಲ್ಲಿ ಬಂಧಿತಳಾಗಿರುವ ಸಿಯಾ ಗೋಯಲ್ ಈಗ ಪೊಲೀಸರ ಮುಂದೆ ಹೊಸ ರಾಗ ಹಾಡುತ್ತಿದ್ದಾಳೆ. ಸಿಯಾಳ ಈ ಆಘಾತಕಾರಿ ಹೇಳಿಕೆಯ ಹಿಂದಿರುವ ಅಸಲಿ ಸತ್ಯವೇನು? ಇಲ್ಲಿದೆ ಸಂಪೂರ್ಣ ವಿವರ.  

PREV
15
ಸಿಯಾ ನೀಡಿರುವ ಹೊಸ ಹೇಳಿಕೆ

ಸಿಯಾ ನೀಡಿರುವ ಹೊಸ ಹೇಳಿಕೆ
ಲೋಹಗಢ ಕೋಟೆಯಲ್ಲಿ ನಡೆದ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣವು ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ತನ್ನ ಭಾವಿ ಪತಿಯನ್ನೇ ಕೋಟೆಯ ಮೇಲಿಂದ ತಳ್ಳಿ ಕೊಂದ ಆರೋಪ ಎದುರಿಸುತ್ತಿರುವ ಸಿಯಾ ಗೋಯಲ್ ಈಗ ಪೊಲೀಸರ ಮುಂದೆ ವಿಚಿತ್ರ ಹೇಳಿಕೆಗಳನ್ನು ನೀಡಲು ಆರಂಭಿಸಿದ್ದಾಳೆ. ಸಿಯಾ ನೀಡಿರುವ ಹೊಸ ಹೇಳಿಕೆಯು ಈ ಕೊಲೆಗೆ ನಿಜವಾದ ಕಾರಣವೇನು ಎಂಬ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದೆ.

25
ವಿಗ್ ಧರಿಸುವುದು ನನಗೆ ಇಷ್ಟವಿರಲಿಲ್ಲ - ಸಿಯಾ

ವಿಗ್ ಧರಿಸುವುದು ನನಗೆ ಇಷ್ಟವಿರಲಿಲ್ಲ - ಸಿಯಾ
ಪೊಲೀಸ್ ವಿಚಾರಣೆಯ ಸಮಯದಲ್ಲಿ ಸಿಯಾ, "ನನಗೆ ಕೇತನ್‌ನ ಲುಕ್ ಇಷ್ಟವಿರಲಿಲ್ಲ. ಅವನ ತಲೆಯಲ್ಲಿ ಕೂದಲೇ ಇರಲಿಲ್ಲ ಮತ್ತು ಅವನು ಯಾವಾಗಲೂ ವಿಗ್ (Wig) ಧರಿಸುತ್ತಿದ್ದ. ಅವನ ಆ ವಿಗ್ ಧರಿಸುವ ಅಭ್ಯಾಸ ನನಗೆ ಸ್ವಲ್ಪವೂ ಇಷ್ಟವಾಗುತ್ತಿರಲಿಲ್ಲ," ಎಂದು ಹೇಳಿಕೆ ನೀಡಿದ್ದಾಳೆ. ಅಷ್ಟೇ ಅಲ್ಲದೆ, "ತನಗೆ ಈ ಮದುವೆ ಇಷ್ಟವಿಲ್ಲ ಎಂದು ತಾನು ಕೇತನ್‌ಗೆ ಮೊದಲೇ ತಿಳಿಸಿದ್ದೆ. ಆದರೆ ಈಗ ಮದುವೆ ಮಾತುಕತೆ ಬಹಳ ಮುಂದೆ ಹೋಗಿದೆ, ಈಗ ಏನನ್ನೂ ಬದಲಿಸಲು ಸಾಧ್ಯವಿಲ್ಲ" ಎಂದು ಕೇತನ್ ಹೇಳುತ್ತಿದ್ದ ಎಂದು ಸಿಯಾ ಪೊಲೀಸರ ಮುಂದೆ ಹೇಳಿಕೊಂಡಿದ್ದಾಳೆ.

35
ಕೇತನ್ ತಂದೆಯ ಸ್ಪಷ್ಟನೆ

ಕೇತನ್ ತಂದೆಯ ಸ್ಪಷ್ಟನೆ
ಸಿಯಾ ನೀಡಿರುವ ಈ 'ವಿಗ್' ಹೇಳಿಕೆಗೆ ಕೇತನ್ ತಂದೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. "ನನ್ನ ಮಗನಿಗೆ ವೈದ್ಯಕೀಯ ಕಾರಣದಿಂದಾಗಿ ತಲೆಯ ಒಂದು ಭಾಗದಲ್ಲಿ ಸಣ್ಣ ಗ್ಯಾಪ್ ಇತ್ತು. ಮದುವೆ ನಿಶ್ಚಯವಾಗುವ ಮೊದಲೇ ಸಿಯಾ ಕುಟುಂಬದವರಿಗೆ ಈ ವಿಷಯವನ್ನು ನಾವು ಸ್ಪಷ್ಟವಾಗಿ ತಿಳಿಸಿದ್ದೆವು. ಅವರಿಗೇನಾದರೂ ಲುಕ್ ಇಷ್ಟವಿರಲಿಲ್ಲ ಎಂದಿದ್ದರೆ ಮದುವೆ ಸಂಬಂಧವನ್ನೇ ನಿರಾಕರಿಸುವ ಅವಕಾಶ ಅವರಿಗಿತ್ತು. ಈಗ ಕೊಲೆ ಮಾಡಿ ಅದನ್ನು ಮುಚ್ಚಿ ಹಾಕಲು ಇಂತಹ ಕಾರಣಗಳನ್ನು ಕೊಡುತ್ತಿದ್ದಾರೆ," ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

45
ಮೊಬೈಲ್ ಚಾಟ್ಸ್‌ಗಳಲ್ಲಿ ಬೇರೆಯದೇ ಕಥೆ!

ಮೊಬೈಲ್ ಚಾಟ್ಸ್‌ಗಳಲ್ಲಿ ಬೇರೆಯದೇ ಕಥೆ!
ಸಿಯಾಳ ಈ ಹೇಳಿಕೆಗಳನ್ನು ಪೊಲೀಸರು ಅಷ್ಟು ಸುಲಭವಾಗಿ ನಂಬುತ್ತಿಲ್ಲ. ಲೊನಾವಲಾ ಪೊಲೀಸರು ಕೇತನ್ ಮತ್ತು ಸಿಯಾ ಇಬ್ಬರ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದ್ದಾರೆ. ಮೊಬೈಲ್‌ನಲ್ಲಿರುವ ಇಬ್ಬರ ಚಾಟ್‌ಗಳನ್ನು ನೋಡಿದರೆ, ಮದುವೆಗೆ ಮುನ್ನ ಪ್ರೇಮಿಗಳು ಹೇಗೆ ಪ್ರೀತಿಯಿಂದ ಮಾತನಾಡುತ್ತಾರೋ ಅದೇ ರೀತಿ ಸಂಭಾಷಣೆ ನಡೆಸಿದ್ದಾರೆ. ಸಿಯಾ ಎಲ್ಲಿಯೂ ಮದುವೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸುಳಿವು ಸಿಕ್ಕಿಲ್ಲ. ಈ ಕಾರಣದಿಂದಾಗಿ ಸಿಯಾ ಪೊಲೀಸರನ್ನು ದಾರಿ ತಪ್ಪಿಸಲು ಸುಳ್ಳು ಕಥೆಗಳನ್ನು ಹೇಳುತ್ತಿದ್ದಾಳೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

55
ಮಗಳ ಮುಖ ನೋಡಲು ಬಾರದ ಕುಟುಂಬ

ಮಗಳ ಮುಖ ನೋಡಲು ಬಾರದ ಕುಟುಂಬ
ಈ ಪ್ರಕರಣದಲ್ಲಿ ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, ಸಿಯಾಳನ್ನು ಭೇಟಿ ಮಾಡಲು ಅವಳ ಕುಟುಂಬದವರು ಯಾರೂ ಈವರೆಗೆ ಪೊಲೀಸ್ ಠಾಣೆಗೆ ಬಂದಿಲ್ಲ. ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ಕುಟುಂಬದವರು ಭೇಟಿಯಾಗಲು ಬರುತ್ತಾರೆ, ಆದರೆ ಸಿಯಾಳ ಪೋಷಕರು ಮತ್ತು ಸಹೋದರ ಅವಳಿಂದ ಸಂಪೂರ್ಣವಾಗಿ ದೂರವಿದ್ದಾರೆ. ಪೊಲೀಸರು ಸಿಯಾಳ ಸಹೋದರ ಸಾಹಿಲ್‌ನನ್ನು ಕರೆಸಿ ವಿಚಾರಣೆ ನಡೆಸಿದ್ದು, ಸಿಯಾ ಮದುವೆಗೆ ಒಪ್ಪಿರಲಿಲ್ಲವೇ ಅಥವಾ ಮನೆಯಲ್ಲಿ ಏನಾದರೂ ಹೇಳಿದ್ದಳೇ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಕೇತನ್ ಹತ್ಯೆಯ ಹಿಂದೆ ಕೇವಲ ಈ ಸಣ್ಣ ಕಾರಣವಿದೆಯೇ ಅಥವಾ ಈ ಪ್ಲಾನ್‌ನಲ್ಲಿ ಬೇರೆಯವರ ಕೈವಾಡವಿದೆಯೇ ಎಂಬ ಆಯಾಮದಲ್ಲಿ ಎಸ್‌ಐಟಿ (SIT) ತನಿಖೆ ಮುಂದುವರೆದಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories