No Gold Bride: ಸಾಲ ಮಾಡಿ ಮದುವೆಯಾಗೋ ಈ ಕಾಲದಲ್ಲಿ, ಗುಲಗಂಜಿ ಚಿನ್ನವಿಲ್ಲ; ನಿರಾಭರಣಳಾಗಿ ಮಂಟಪಕ್ಕೆ ಬಂದ ವಧು!

Published : Jul 04, 2026, 04:58 PM IST

Rich Bride With No Gold Ornaments: ಮದುವೆ ಮಂಟಪಕ್ಕೆ ಯಾವುದೇ ಆಭರಣ ಹಾಕದೆ ಬಂದ ಇನ್ಫ್ಲುಯೆನ್ಸರ್ ಒಬ್ಬರ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ. ಈಗಿನ ಕಾಲದಲ್ಲಿ ಮದುವೆ ಅಂದ್ರೆ ಅದ್ಧೂರಿತನಕ್ಕೆ ಇನ್ನೊಂದು ಹೆಸರು. ಆದರೆ ಈ ವಧು ಮಾತ್ರ ಆರ್ಟಿಫಿಶಿಯಲ್‌ ಆಭರಣ ಕೂಡ ಹಾಕಿಲ್ಲ.

PREV
14
ಸಾಲ ಮಾಡಿ ಮದುವೆ ಆಗೋ ಕಾಲದಲ್ಲಿ...

ಸೋಷಿಯಲ್ ಮೀಡಿಯಾ ಯುಗದಲ್ಲಿ, ದುಡ್ಡಿಲ್ಲದವರೂ ಸಾಲ ಮಾಡಿಯಾದ್ರೂ ಮದುವೆಗೆ ಹೆಚ್ಚು ಖರ್ಚು ಮಾಡುವ ಒತ್ತಡದಲ್ಲಿ ಸಿಲುಕುತ್ತಾರೆ. ಆದರೆ, ಈ ಎಲ್ಲಾ ಟ್ರೆಂಡ್‌ಗಳಿಗೆ ಸೆಡ್ಡು ಹೊಡೆದು, ಮದುವೆ ದಿನ ಒಂದೇ ಒಂದು ಆಭರಣವನ್ನೂ ಧರಿಸದೆ ಬಂದ ವಧುವೊಬ್ಬರ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರ ಮನಸ್ಸು ಗೆಲ್ಲುತ್ತಿದೆ. 

24
ಆಭರಣವನ್ನೇ ಹಾಕಿಲ್ಲ

ಆ ವಧುವೇ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಹರ್ಷಾ ಪಾತು. ಇತ್ತೀಚೆಗೆ ಇವರ ಮದುವೆ ನಸೀಂ ಮೊಹಮ್ಮದ್ ಅವರೊಂದಿಗೆ ನಡೆಯಿತು. ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿರುವ ಹರ್ಷಾ ಅವರ ಮದುವೆಯ ಫೋಟೋ ಮತ್ತು ವಿಡಿಯೋಗಳು ವೈರಲ್ ಆದಾಗ, ಅವರು ಆಭರಣ ಧರಿಸದಿರುವುದು ಜನರ ಗಮನ ಸೆಳೆಯಿತು. ಇದರ ಬೆನ್ನಲ್ಲೇ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂತು.

34
ಹೆಣ್ಣಿನ ಸೌಂದರ್ಯವೇ ಸಾಕು

"ಈ ವಿಡಿಯೋ ನೋಡಿದ ಮೇಲೆ ಚಿನ್ನದ ಒಡವೆಗಳು ಓವರ್‌ರೇಟೆಡ್ ಅನಿಸುತ್ತಿದೆ" ಎಂದು ಕೆಲವರು ಹೇಳಿದ್ದಾರೆ. ಹರ್ಷಾ ಅವರ ಸರಳತೆಯನ್ನು ಅನೇಕರು ಕೊಂಡಾಡಿದ್ದಾರೆ. "ಇದು ಕೇವಲ ಮದುವೆಯಲ್ಲ, ಇದೊಂದು ಸ್ಫೂರ್ತಿ" ಎಂದು ಒಬ್ಬರು ಹೇಳಿದರೆ, "ಒಡವೆಗಳ ಹೊಳಪಲ್ಲ, ಹೆಣ್ಣಿನ ನಿಜವಾದ ಸೌಂದರ್ಯ ಅವಳ ಆತ್ಮವಿಶ್ವಾಸ ಮತ್ತು ನಗು ಎಂಬುದನ್ನು ಈ ಸುಂದರಿ ಸಾಬೀತುಪಡಿಸಿದ್ದಾರೆ! ಸಮಾಜಕ್ಕೆ ಇದೊಂದು ದೊಡ್ಡ ಮಾದರಿ. ಮನದಾಳದ ಶುಭಾಶಯಗಳು," ಎಂದು ಮತ್ತೊಬ್ಬರು ಹೊಗಳಿದ್ದಾರೆ.

44
ಹರ್ಷಾ ಪಾತು ಯಾರು?

ಮಲಪ್ಪುರಂನ ಮಾರಂಚೇರಿ ನಿವಾಸಿಯಾಗಿರುವ ಹರ್ಷಾ ಪಾತು, ಒಬ್ಬ ಇಲಸ್ಟ್ರೇಟರ್, ಮೇಕಪ್ ಆರ್ಟಿಸ್ಟ್ ಮತ್ತು ಹೆನ್ನಾ ಆರ್ಟಿಸ್ಟ್ ಕೂಡ ಹೌದು. ಇನ್‌ಸ್ಟಾಗ್ರಾಂನಲ್ಲಿ ಇವರಿಗೆ 5 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories