ಕೇರಳದ ಕಾಸರಗೋಡಿನಲ್ಲಿ 16 ವರ್ಷದ ಅಪ್ರಾಪ್ತ ಬಾಲಕನ ಮೇಲೆ 14 ಮಂದಿ ಎರಡು ವರ್ಷಗಳ ಕಾಲ ಲೈಂ*ಗಿಕ ದೌರ್ಜ*ನ್ಯ ಎಸಗಿದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಡೇಟಿಂಗ್ ಆಪ್ ಮೂಲಕ ಬಾಲಕನ ಸಂಪರ್ಕಕ್ಕೆ ಬಂದಿದ್ದ ಆರೋಪಿಗಳಲ್ಲಿ 9 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಕಾಸರಗೋಡು: ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಸಮಾಜವೇ ತಲೆತಗ್ಗಿಸುವಂತಹ ಪ್ರಕರಣ ಬೆಳಕಿಗೆ ಬಂದಿದೆ. 16 ವರ್ಷದ ಅಪ್ರಾಪ್ತ ಬಾಲಕನ ಮೇಲೆ 14 ಜನರು ಎರಡು ವರ್ಷಗಳಿಂದ ಲೈಂಗಿ*ಕ ದೌರ್ಜ*ನ್ಯ ನಡೆಸಿದ್ದಾರೆ.
25
14 ಜನರಿಂದ ನಿರಂತರವಾಗಿ ಬಾಲಕನ ಮೇಲೆ ದೌರ್ಜ*ನ್ಯ
ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, 14 ಜನರಿಂದ ನಿರಂತರವಾಗಿ ಬಾಲಕ ದೌ*ರ್ಜನ್ಯಕ್ಕೊಳಗಾಗಿದ್ದಾನೆ. ಈ ಪ್ರಕರಣ ಸಂಬಂಧ ಪೊಲೀಸರು 9 ಜನರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಓರ್ವ ಶಿಕ್ಷಣ ಇಲಾಖೆಯ ಅಧಿಕಾರಿ, ಓರ್ವ ರೈಲ್ವೆ ಪೊಲೀಸ್ ಸಹ ಸೇರಿದ್ದಾರೆ. ತನ್ನ ಮೇಲೆ ದೌರ್ಜ*ನ್ಯ ನಡೆಯುತ್ತಿದ್ರೂ ಬಾಲಕ ಯಾರ ಮುಂದೆಯೂ ಹೇಳಿಕೊಂಡಿರಲಿಲ್ಲ.
35
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಅಪ್ರಾಪ್ತ ಮಗನ ನಡವಳಿಕೆ ಮೇಲೆ ತಾಯಿಗೆ ಅನುಮಾನ ಬಂದಿದೆ. ಮಗನಲ್ಲಾದ ಬದಲಾವಣೆ ಕಂಡ ತಾಯಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ನೆರವು ಕೇಳಿದ್ದಾರೆ. ನಂತರ ಈ ಪ್ರಕರಣ ಪೊಲೀಸರ ಗಮನಕ್ಕೂ ತರಲಾಗಿದೆ.
LGBTQ ಸಮುದಾಯದಲ್ಲಿ ಜನಪ್ರಿಯವಾಗಿರುವ ಡೇಟಿಂಗ್ ಆಪ್ ಮೂಲಕ ಇದು ಶುರುವಾಗಿದೆ. ಬಾಲಕ ಈ ಆಫ್ ಡೌನ್‌ಲೋಡ್ ಮಾಡಿಕೊಂಡು 14 ಜನರ ಸಂಪರ್ಕಕ್ಕೆ ಬಂದಿದ್ದಾನೆ. ಬೇರೆ ಬೇರೆ ಪ್ರದೇಶದ ಈ 14 ಜನರು ಕಾಸರಗೋಡು, ಕನ್ನೂರು, ಎರ್ನಾಕುಲಂ ಮತ್ತು ಕೊಯಿಕೋಡ್ ಜಿಲ್ಲೆಗಳಲ್ಲಿ ಬಾಲಕನ ಮೇಲೆ ಲೈಂ*ಗಿಕ ದೌರ್ಜ*ನ್ಯ ಎಸಗಿದ್ದಾರೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕಾಸರಗೋಡಿನ ಪೊಲೀಸರು ತನಿಖೆಯ ವೇಗವನ್ನು ಹೆಚ್ಚಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು 9 ಆರೋಪಿಗಳನ್ನು ಬಂಧಿಸಿದ್ದಾರೆ. ಇಂಡಿಯನ್ ಯುನಿಯನ್ ಮುಸ್ಲಿಂ ಲೀಗ್ ಕಾರ್ಯಕರ್ತನು ಸೇರಿದ್ದಾನೆ ಎಂದು ವರದಿಯಾಗಿದೆ.