ಫೋರ್ಬ್ಸ್ ಅಡ್ವೈಸರ್ ಇಂಡಿಯಾ ವರದಿಯ ಪ್ರಕಾರ, ಭಾರತದ ಸರಾಸರಿ ಮಾಸಿಕ ವೇತನ ₹28,000 ಆಗಿದೆ. ದೆಹಲಿ ₹35,000 ದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ₹33,000 ದೊಂದಿಗೆ ಎರಡನೇ ಸ್ಥಾನದಲ್ಲಿದೆ. ಬಿಹಾರ, ಅರುಣಾಚಲ ಪ್ರದೇಶದಂತಹ ರಾಜ್ಯಗಳು ಅತಿ ಕಡಿಮೆ ವೇತನ ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿವೆ.
ಫೋರ್ಬ್ಸ್ ಅಡ್ವೈಸರ್ ಇಂಡಿಯಾ ನೀಡಿರುವ ವರದಿಯಲ್ಲಿ ಇಡೀ ದೇಶದ ಜನರ ಸರಾಸರಿ ಮಾಸಿಕ ವೇತನ 28 ಸಾವಿರ ರೂಪಾಯಿ ಆಗಿದೆ. ಲಡಾಕ್, ದಾದ್ರಾ ಹಾಗೂ ಲಕ್ಷದ್ವೀಪದ ಜನರ ಮಾಸಿಕ ಆದಾಯದ ಸಮೀಕ್ಷೆಯನ್ನು ಮಾಡಲಾಗಿಲ್ಲ.
26
ದೇಶದಲ್ಲಿ ಗರಿಷ್ಠ ಮಾಸಿಕ ಸರಾಸರಿ ವೇತನ ಹೊಂದಿರುವ ರಾಜ್ಯಗಳ ಪೈಕಿ ದೆಹಲಿ ಅಗ್ರಸ್ಥಾನದಲ್ಲಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಮಾಸಿಕ ಸರಾಸರಿ ವೇತನ 35 ಸಾವಿರ ರೂಪಾಯಿ ಆಗಿದೆ.
36
2ನೇ ಸ್ಥಾನದಲ್ಲಿ ದಕ್ಷಿಣದ ಕರ್ನಾಟಕವಿದ್ದು, ಕರ್ನಾಟಕದಲ್ಲಿ ಮಾಸಿಕ ಸರಾಸರಿ ವೇತನ 33 ಸಾವಿರ ರೂಪಾಯಿ ಆಗಿದೆ.
ದೇಶದಲ್ಲಿಯೇ ಅತ್ಯಂತ ಶ್ರೀಮಂತ ರಾಜ್ಯವೆನಿಸಿರುವ ಮಹಾರಾಷ್ಟ್ರದ ಜನರ ಮಾಸಿಕ ಸರಾಸರಿ ವೇತನ 32 ಸಾವಿರ ರೂಪಾಯಿ ಆಗಿದ್ದು ಮೂರನೇ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ತೆಲಂಗಾಣ (31 ಸಾವಿರ), ಹರಿಯಾಣ (30 ಸಾವಿರ) ರಾಜ್ಯಗಳಿದ್ದು ಟಾಪ್-5 ಸಂಪೂರ್ಣವಾಗಿದೆ.
56
ನಂತರದ ಐದು ಸ್ಥಾನಗಳಲ್ಲಿ ತಮಿಳುನಾಡು (29 ಸಾವಿರ), ಗುಜರಾತ್ (28 ಸಾವಿರ), ಉತ್ತರ ಪ್ರದೇಶ (27 ಸಾವಿರ), ಪಂಜಾಬ್ (25 ಸಾವಿರ) ಹಾಗೂ ಕೇರಳ (24,500) ರಾಜ್ಯಗಳಿವೆ.
66
ಬಿಹಾರ (13,500), ಅರುಣಾಚಲ ಪ್ರದೇಶ (16 ಸಾವಿರ), ಜಮ್ಮು ಮತ್ತು ಕಾಶ್ಮೀರ (18 ಸಾವಿರ) ಜಾರ್ಖಂಡ್(19,500) ಹಾಗೂ ಛತ್ತೀಸ್‌ಗಢ (20 ಸಾವಿರ) ದೊಡ್ಡ ರಾಜ್ಯಗಳ ಪೈಕಿ ಅತೀ ಕಡಿಮೆ ಮಾಸಿಕ ಸರಾಸರಿ ವೇತನ ಹೊಂದಿರುವ ರಾಜ್ಯಗಳೆನಿಸಿವೆ.