Loco Pilot: ಭಾರತದ ಅತಿದೊಡ್ಡ ಜಾಲ ಎಂದರೆ ಅದು ರೈಲ್ವೆ. ಪ್ರತಿದಿನ ಕೋಟ್ಯಂತರ ಪ್ರಯಾಣಿಕರು ರೈಲು ಸೇವೆಯನ್ನು ಬಳಸುತ್ತಾರೆ. ರೈಲುಗಳನ್ನು ಅವುಗಳ ಗಮ್ಯಸ್ಥಾನಕ್ಕೆ ಕೊಂಡೊಯ್ಯುವಲ್ಲಿ ಲೋಕೋ ಪೈಲಟ್‌ಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಪ್ರಯಾಣಿಕರ ಸುರಕ್ಷತೆ ಇವರ ಜವಾಬ್ದಾರಿ.
ಲೋಕೋ ಪೈಲಟ್ ಸಂಬಳವು ಅವರ ಹುದ್ದೆಯ ಮಟ್ಟ, ಅನುಭವ ಮತ್ತು ಕೆಲಸ ಮಾಡುವ ವಿಭಾಗವನ್ನು ಅವಲಂಬಿಸಿರುತ್ತದೆ. ಸಹಾಯಕ ಲೋಕೋ ಪೈಲಟ್ (ALP) ಆಗಿ ಸೇರಿದಾಗ, 7ನೇ ವೇತನ ಆಯೋಗದ ಪ್ರಕಾರ ಆರಂಭಿಕ ಮೂಲ ವೇತನ ಸುಮಾರು ₹19,900 ಇರುತ್ತದೆ. ಇದರ ಜೊತೆಗೆ ತುಟ್ಟಿಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA) ಮತ್ತು ಸಾರಿಗೆ ಭತ್ಯೆಗಳು ಸೇರಿರುತ್ತವೆ.
25
ಭತ್ಯೆಗಳೆಲ್ಲಾ ಸೇರಿ ₹55,000 ತನಕ ಸಂಬಳ
ಈ ಎಲ್ಲಾ ಭತ್ಯೆಗಳನ್ನು ಸೇರಿಸಿದರೆ, ಒಬ್ಬ ಸಹಾಯಕ ಲೋಕೋ ಪೈಲಟ್ ತಿಂಗಳಿಗೆ ಸುಮಾರು ₹35,000 ದಿಂದ ₹55,000 ಗಳಿಸಬಹುದು. ಅನುಭವ ಹೆಚ್ಚಾದಂತೆ ಬಡ್ತಿ ಸಿಗುತ್ತದೆ. ನಂತರ ಸೀನಿಯರ್ ಅಸಿಸ್ಟೆಂಟ್ ಲೋಕೋ ಪೈಲಟ್, ಲೋಕೋ ಪೈಲಟ್ ಮತ್ತು ಸೀನಿಯರ್ ಲೋಕೋ ಪೈಲಟ್‌ನಂತಹ ಉನ್ನತ ಹುದ್ದೆಗಳನ್ನು ತಲುಪಬಹುದು.
35
ಹೆಚ್ಚುವರಿ ಡ್ಯೂಟಿ, ನೈಟ್ ಶಿಫ್ಟ್, ಓವರ್‌ಟೈಮ್
ಪೂರ್ಣ ಪ್ರಮಾಣದ ಲೋಕೋ ಪೈಲಟ್‌ಗಳು ತಿಂಗಳಿಗೆ ₹60,000 ದಿಂದ ₹1 ಲಕ್ಷಕ್ಕೂ ಹೆಚ್ಚು ಸಂಬಳ ಪಡೆಯಬಹುದು. ವಿಶೇಷ ಮಾರ್ಗಗಳು, ಹೆಚ್ಚುವರಿ ಕರ್ತವ್ಯ, ರಾತ್ರಿ ಪಾಳಿ ಮತ್ತು ಓವರ್‌ಟೈಮ್ ಕೆಲಸಗಳಿಂದ ಆದಾಯ ಮತ್ತಷ್ಟು ಹೆಚ್ಚಾಗುತ್ತದೆ. ಅನುಭವಿ ಸೀನಿಯರ್ ಲೋಕೋ ಪೈಲಟ್‌ಗಳ ಸಂಬಳವು ಕೆಲವು ಸಂದರ್ಭಗಳಲ್ಲಿ ಲಕ್ಷ ರೂಪಾಯಿ ದಾಟುತ್ತದೆ.
ಲೋಕೋ ಪೈಲಟ್ ಆಗಲು ಪಿಯುಸಿ ನಂತರ ಸಂಬಂಧಿತ ಟೆಕ್ನಿಕಲ್ ಕೋರ್ಸ್‌ಗಳು ಅಥವಾ ಐಟಿಐ, ಡಿಪ್ಲೊಮಾ ಅರ್ಹತೆ ಇರಬೇಕು. ನಂತರ ರೈಲ್ವೆ ನೇಮಕಾತಿ ಮಂಡಳಿ (RRB) ನಡೆಸುವ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು. ಲಿಖಿತ ಪರೀಕ್ಷೆ, ಸೈಕೋಮೆಟ್ರಿಕ್ ಟೆಸ್ಟ್ ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ಅರ್ಹತೆ ಪಡೆದ ನಂತರವೇ ಆಯ್ಕೆ ಮಾಡಲಾಗುತ್ತದೆ.
55
ಜವಾಬ್ದಾರಿಯುತವಾದ ಹುದ್ದೆ
ಈ ಕೆಲಸದಲ್ಲಿ ಸಂಬಳ ಹೆಚ್ಚಿದ್ದರೂ, ಇದು ಅತ್ಯಂತ ಜವಾಬ್ದಾರಿಯುತ ಹುದ್ದೆಯಾಗಿದೆ. ಗಂಟೆಗಟ್ಟಲೆ ಕ್ಯಾಬಿನ್‌ನಲ್ಲಿ ಪ್ರಯಾಣಿಸಬೇಕು. ಎಲ್ಲಾ ರೀತಿಯ ಹವಾಮಾನ ಪರಿಸ್ಥಿತಿಗಳನ್ನು ಎದುರಿಸಬೇಕು. ನಿಗದಿತ ಸಮಯ ಪಾಲನೆ ಮಾಡಬೇಕು. ಆದರೂ, ಉತ್ತಮ ಸಂಬಳ, ಸರ್ಕಾರಿ ಉದ್ಯೋಗದ ಭದ್ರತೆ ಮತ್ತು ಬಡ್ತಿ ಅವಕಾಶಗಳಿಂದಾಗಿ ಲೋಕೋ ಪೈಲಟ್ ಹುದ್ದೆಗೆ ಯುವಕರಲ್ಲಿ ಹೆಚ್ಚಿನ ಬೇಡಿಕೆಯಿದೆ. ಹೀಗಾಗಿ ರೈಲ್ವೆಯಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವವರಿಗೆ ಇದೊಂದು ಪ್ರತಿಷ್ಠಿತ ಅವಕಾಶವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ