ನನಗೆ ಈ ಮದುವೆ ಬೇಡ ಎನ್ನಲಿಲ್ಲ, ಆಕೆ ತರುತ್ತಿದ್ದ ದುಬಾರಿ ಗಿಫ್ಟ್ ನಿರಾಕರಿಸಲಿಲ್ಲ. ಪಾರ್ಟಿ, ಬರ್ತ್‌ಡೆ ಸರ್ಪ್ರೈಸ್‌ನಲ್ಲಿ ಉತ್ತಮವಾಗಿ ನಟಿಸಿದ ಹುಡುಗಿ, ಸತತ 2 ಪ್ರಯತ್ನದ ಬಳಿಕ ಮೂರನೇ ಪ್ರಯತ್ನದಲ್ಲಿ ಹುಡುಗನ ಕೊಂದೇ ಬಿಟ್ಟಳು.
ಪುಣೆ ಉದ್ಯಮಿ ವಿಶಾಲ್ ಅಗರ್ವಾಲ್ ಪುತ್ರ ಕೇತನ್ ಅಗರ್ವಾಲ್ ಸಾವಿನ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಕೇತನ್ ಅಗರ್ವಾಲ್ ಎಂಗೇಜ್‌ಮೆಂಟ್ ಸಿಯಾ ಗೊಯೆಲ್ ಜೊತೆ ನಡೆದಿತ್ತು. ನವೆಂಬರ್ 2026ರಲ್ಲಿ ಮಜುವೆ ನಿಗದಿಯಾಗಿತ್ತು. ಅಮಾಯಕ ಹುಡುಗ ತನ್ನ ಸಂಗಾತಿ ಕುರಿತು ಹಲವು ಕನಸು ಕಂಡಿದ್ದ. ಆದರೆ ಒಂದು ಸಣ್ಣ ಅನುಮಾನವೂ ಇರದೆ ಪ್ರೀತಿಸಿದ್ದ. ಆದರೆ ಹುಡುಗಿ ಹಾಗಲ್ಲ. ಆಕೆಗೆ ಮೊದಲೇ ಚೇತನ್ ಅನ್ನೋ ಯುವಕನ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದಳು. ಒಂದೇ ಮಾತಿನಲ್ಲಿ ಮದುವೆ ಬೇಡ ಎಂದು ಹೇಳಬಹುದಿತ್ತು. ಇದರ ಬದಲಾಗಿ ನಿಶ್ಚಯಿಸಿದ ಹುಡುಗನ ಕೊಲ್ಲಲು ಪ್ಲಾನ್ ಮಾಡಿ ಯಶಸ್ವಿಯಾಗಿದ್ದಾಳೆ.
26
ಕೇತನ್ ಹತ್ಯೆಗೆ ಚೇತನ್ ಜೊತೆ ಸಂಚು ರೂಪಿಸಿದ ಸಿಯಾ
ಕೇತನ್ ಹತ್ಯೆಗೆ ಸಿಯಾ ಗೊಯೆಲ್ ತನ್ನ ಗೆಳೆಯ ಚೇತನ್ ಜೊತೆ ಸಂಚು ರೂಪಿಸಿದ್ದಾಳೆ. ಆರಂಭಿಕ ಎರಡು ಪ್ರಯತ್ನಗಳು ವಿಫಲಗೊಂಡಿತ್ತು. ಆದರೆ ಮೂರನೇ ಪ್ರಯತ್ನದಲ್ಲಿ ಸಿಯಾ ಗೊಯೆಲ್ ಕಾರ್ಯಸಾಧಿಸಿದ್ದಳು. ಇದನ್ನು ಪೊಲೀಸರ ತನಿಖೆ ದಾರಿ ತಪ್ಪಿಸಲು ಎಲ್ಲಾ ಪ್ರಯತ್ನ ಮಾಡಿದ್ದಳು. ಆದರೆ ಕೊನೆಗೂ ಸತ್ಯ ಬಯಲಾಗಿದೆ.
36
ಹಾವು ಪ್ಲಾನ್ ವಿಫಲ, ಕೇತನ್‌ಗೆ ಸಿಗಲಿಲ್ಲ ಸುಳಿವು
ಕೇತನ್ ಅಗರ್ವಾಲ್ ಸಾವು ಲೋಹಘಡ ಬೆಟ್ಟದಲ್ಲಿ ನಡೆದಿದೆ. ಲೋಹಘಡ ಬೆಟ್ಟದಿಂದ ತಳ್ಳಿ ಹಾಕಿ ಕೇತನ್ ಹತ್ಯೆ ಮಾಡಲಾಗಿದೆ. ಆದರೆ ಲೋಹಘಡಕ್ಕೆ ಟ್ರಕ್ಕಿಂಗ್ ಹೋಗಿದ್ದು ಇದೇ ಮೊದಲಲ್ಲ. ಇದಕ್ಕೂ ಮೊದಲು ಸಿಯಾ ಹಾಗೂ ಚೇತನ್ ಇಬ್ಬರು ಪ್ಲಾನ್ ಮಾಡಿ ಲೋಹಘಡ ಟ್ರಕ್ಕಿಂಗ್ ಯೋಜಿಸಿದ್ದರು. ಕೇತನ್ ಕರೆದುಕೊಂಡು ಬಂದ ಸಿಯಾ ಪ್ರಪಾತದ ಅಂಚಿನಲ್ಲಿ ಫೋಟೋ ತೆಗೆಯಲು ನಿಲ್ಲಿಸಿದ್ದಳು. ಈ ವೇಳೆ ಸಿಯಾ ಗೆಳೆಯ ಹಾವು ಹಾವು ಎಂದು ಬೆಚ್ಚಿಬೀಳಿಸುವ ಪ್ರಯತ್ನ ಮಾಡಿದ್ದರು. ಆದರೆ ಕೇತನ್ ಹೆಚ್ಚು ಬ್ಯಾಲೆನ್ಸ್ ಆಗಿದ್ದ ಕಾರಣ ಪ್ರಪಾತಕ್ಕೆ ಬೀಳಲಿಲ್ಲ. ಜೊತೆಗೆ ಇತರ ಪ್ರವಾಸಿಗರು ಹತ್ತಿರ ಬಂದ ಕಾರಣ ತಳ್ಳಿ ಹಾಕಲು ಸಾಧ್ಯವಾಗಲಿಲ್ಲ. ಹೀಗಾಗಿ ಮೊದಲ ಪ್ರಯತ್ನ ವಿಫಲವಾಗಿತ್ತು.
ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ಗಾಗಿ ಕೇತನ್ ಬಾಲಿ ಲೊಕೇಶನ್ ಫಿಕ್ಸ್ ಮಾಡಿದ್ದರು. ಪೋಷಕರು ಸೇರಿ ಎಲ್ಲರು ವಿಮಾನ ನಿಲ್ದಾಣಕ್ಕೆ ತೆರಳಿದಾಗ ಕೇತನ್ ಪಾಸ್‌ಫೋರ್ಟ್‌ನ್ನು ಸಿಯಾ ಬಚ್ಚಿಟ್ಟಳು. ವಿಮಾನ ನಿಲ್ದಾಣದಲ್ಲಿ ಹೋಗಿ ನೋಡಿದಾಗ ಕೇತನ್ ಪಾಸ್‌ಪೋರ್ಟ್ ನಾಪತ್ತೆಯಾಗಿತ್ತು. ಹೀಗಾಗಿ ಅನಿವಾರ್ಯವಾಗಿ ಪ್ರವಾಸ ರದ್ದ ಮಾಡಿ ಮರಳಿದ್ದರು. ಇದರ ಹಿಂದೆಯೂ ಹತ್ಯೆಯ ಸಂಚಿತ್ತು ಅನ್ನೋದು ಯಾರಿಗೂ ಗೊತ್ತಾಗಲೇ ಇಲ್ಲ.
56
ಜಗಳವಾಡಿ ಕೊಟೆಗೆ ಕರೆತಂದಿದ್ದ ವಧು
ಸಿಯಾ ಗೊಯೆಲ್ ಬಾಲಿ ಪ್ರವಾಸ ರದ್ದಾದ ಕಾರಣ ಅಸಮಾಧಾನಗೊಂಡಂತೆ ನಟಿಸಿದ್ದಳು. ಹೀಗಾಗಿ ಜೂನ್ 18 ರಂದು ಲೋಹಘಡ ಟ್ರಕ್ಕಿಂಗ್ ಪ್ರವಾಸ ಬರಲೇಬೇಕೆಂದು ಹಠ ಹಿಡಿದಳು. ಇತ್ತ ಸಿಯಾ ಗೆಳೆಯ ಚೇತನ್ ಅಲ್ಲೆ ಹೊಂಚು ಹಾಕಿ ಕುಳಿತಿದ್ದ. ಮತ್ತೆ ಕಂದಕ ಬಳಿ ಫೋಟೋಗೆ ನಿಲ್ಲಿಸಿದ ಬೆನ್ನಲ್ಲೇ ಚೇತನ್ ಹಾಗೂ ಆತನ ಗೆಳೆಯರು ಆಗಮಿಸಿ ಕೇತನ್ ಅಗರ್ವಾಲ್ ತಳ್ಳಿ ಹಾಕಿದ್ದಾರೆ.
66
17 ಕೋಟಿ ರೂಗೆ ಹಾಲ್ ಬುಕ್
ಫೆಬ್ರವರಿಯಲ್ಲಿ ಕೇತನ್ ಅಗರ್ವಾಲ್ ಸಿಯಾ ಗೋಯೆಲ್ ನಿಶ್ಚಿತಾರ್ಥವಾಗಿತ್ತು. ನವೆಂಬರ್ ತಿಂಗಳಲ್ಲಿ ಮದುವೆ ನಿಗದಿಯಾಗಿತ್ತು. ಮದುವೆಗೆ ಜೈಪುರದ ಅರಮನೆಯನ್ನು ಬರೋಬ್ಬರಿ 17 ಕೋಟಿ ರೂಪಾಯಿ ನೀಡಿ ಬುಕ್ ಮಾಡಿದ್ದರು. 20ಕೋಟಿಗೂ ಅದಿಕ ವೆಚ್ಚದಲ್ಲಿ ಮದುವೆ ತಯಾರಿ ನಡೆಯುತ್ತಿತ್ತು. ಅತಿಥಿಗಳಿಗೆ ಉದಯಪುರಕ್ಕೆ ತೆರಳಲು ಎರಡು ವಿಮಾನ ಬುಕ್ ಮಾಡಲಾಗಿತ್ತು. ಆದರೆ ತನ್ನ ಮಗನ ಸಾವು ಕಂಡ ಪೋಷಕರು ಕಂಗಾಲಾಗಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ