ವ್ಯಾಟ್ಸಾಪ್, ಗೂಗಲ್ ಸೇರಿ 9 ಪ್ರತಿಷ್ಠಿತ ಗ್ಲೋಬಲ್ ಕಂಪನಿಗಳ ಮುಖ್ಯಸ್ಥರು ಭಾರತೀಯರು, ಇಲ್ಲಿದೆ ಲಿಸ್ಟ್

Published : Jun 23, 2026, 08:33 PM IST

ಕುನಾಲ್ ಶಾ ವ್ಯಾಟ್ಸಾಪ್ ಗ್ಲೋಬಲ್ ಸಿಇಒ ಆಗಿ ನೇಮಕಗೊಂಡ ಬೆನ್ನಲ್ಲೇ ಜಾಗತಿಕ ಕಂಪನಿಗಳನ್ನು ಮುನ್ನಡೆಸುತ್ತಿರುವ ಇತರ ಭಾರತೀಯ ಮೂಲದ ಸಾಧಕರ ಕುರಿತು ಭಾರಿ ಚರ್ಚೆಯಾಗುತ್ತಿದೆ. ವಿಶ್ವದೆಲ್ಲೆಡೆ ಪ್ರಮುಖ ಕಂಪನಿಗಳು ಇದೀಗ ಭಾರತೀಯರ ಕೈಯಲ್ಲಿದೆ. 

PREV
16
ಕುನಾಲ್ ಶಾ ಸೇರಿ 9 ಕಂಪನಿಗಳ ಮುಖ್ಯಸ್ಥರು

ಕ್ರೆಡ್ ಸಂಸ್ಥಾಪಕ ಕುನಾಲ್ ಶಾ ಇದೀಗ ಮೆಟಾ ಮಾಲೀಕತ್ವದ ವ್ಯಾಟ್ಸಾಪ್ ಗ್ಲೋಬಲ್ ಸಿಇಒ ಆಗಿ ನೇಮಕಗೊಂಡಿದ್ದಾರೆ. ಜಾಗತಿಕ ಕಂಪನಿಯ ಮುಖ್ಯಸ್ಥನಾಗಿ ಕುನಾಲ್ ಶಾ ನೇಮಕಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ವಿಶೇಷ ಅಂದರೆ ಈ ರೀತಿ ಪ್ರತಿಷ್ಠಿತ ಗ್ಲೋಬಲ್ ಕಂಪನಿಗಳ ಮುಖ್ಯಸ್ಥರಾಗಿ 9 ಭಾರತೀಯ ಮೂಲದವರು ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

26
ಗೂಗಲ್ ಮುಖ್ಯಸ್ಥರಾಗಿ ಸುಂದರ್ ಪೈಚೆ

ಆಲ್ಭಾಬೆಟ್ ಕಂಪನಿ ಸಿಇಒ ಭಾರತೀಯ ಮೂಲದ ಸುಂದರ್ ಪಿಚೈ. 2004ರಲ್ಲಿ ಗೂಗಲ್ ಸೇರಿದ ಸುಂದರ್ ಪಿಚೈ, 2015ರಲ್ಲಿ ಗೂಗಲ್ ಸಿಇಒ ಆಗಿ ನೇಮಕಗೊಂಡಿದ್ದರು. ಸದ್ಯ ಗೂಗಲ್ ಮಹತ್ತರ ಬೆಳವಣಿಗೆಯಲ್ಲಿ ಸುಂದರ್ ಪಿಚೈ ಕೊಡುಗೆ ನೀಡಿದ್ದಾರೆ. ಚೆನ್ನೈ ಮೂಲದ ಸುಂದರ್ ಪಿಚೈ ಅಮೆರಿಕದಲ್ಲಿ ನೆಲೆಸಿದ್ದಾರೆ.

36
ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲ

ಟೆಕ್ ದಿಗ್ಗಜ ಕಂಪನಿ ಮೈಕ್ರೋಸಾಫ್ಟ್ ಮುಖ್ಯಸ್ಥ ಭಾರತೀಯ ಮೂಲದ ಸತ್ಯ ನಾಡೆಲ್ಲ. 2014ರಲ್ಲಿ ಸತ್ಯ ನಾಡೆಲ್ಲಾ ಮೈಕ್ರೋಸಾಫ್ಟ್ ಸಿಇಒ ಆಗಿ ನೇಮಕಗೊಂಡಿದ್ದರು. ಹೈದರಾಬಾದ್ ಮೂಲಕ ಸತ್ಯ ನಾಡೆಲ್ಲ ಸದ್ಯ ಅಮೆರಿಕದ ವಾಶಿಂಗ್ಟನ್‌ನಲ್ಲಿ ನೆಲೆಸಿದ್ದಾರೆ. ವಿಶೇಷ ಅಂದರೆ ಮಂಗಳೂರು ಯುನಿವರ್ಸಿಟಿಯಿಂದ ಎಲೆಕ್ಟ್ರಿಕ್ ಎಂಜಿನೀಯರಿಂಗ್ ಪದವಿ ಪಡೆದಿದ್ದಾರೆ.

46
ಐಬಿಎಂ ಮುಖ್ಯಸ್ಥ ಅರವಿಂದ್ ಕೃಷ್ಣ

ಐಬಿಎಂ ಕಂಪನಿಯ ಸಿಇಒ ಅರವಿಂದ್ ಕೃಷ್ಣ ಕಾನ್ಪುರ ಐಐಟಿಯಿಂದ ಪದವಿ ಪಡೆದಿದ್ದಾರೆ. 1990ರಲ್ಲಿ ಐಬಿಎಂ ಸೇರಿಕೊಂಡ ಅರವಿಂದ್ ಕೃಷ್ಣ ಇದೀಗ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಫೆಡೆಕ್ಸ್ ಕಾರ್ಪೋರೇಶನ್ ಮುಖ್ಯಸ್ಥರಾಗಿ ರಾಜ್ ಸುಬ್ರಮಣಿಯಂ ಕಾರ್ಯನಿರ್ವಹಿಸುತ್ತಿದ್ದಾರೆ. 2022ರಲ್ಲಿ ಸುಬ್ರಮಣಿಯಂ ಅಧಿಕಾರ ವಹಿಸಿಕೊಂಡಿದ್ದಾರೆ.

56
ನೆಟ್ ಆ್ಯಪ್, ಬಾರ್ಕ್ಲೆ ಮುಖ್ಯಸ್ಥರು ಭಾರತೀಯರು

ಪ್ರತಿಷ್ಠಿತ ನೆಟ್ ಆ್ಯಪ್ ಕಂಪನಿಗೆ 2011ರಲ್ಲಿ ಸೇರಿಕೊಂಡ ಭಾರತೀಯ ಮೂಲಕ ಜಾರ್ಜ್ ಕುರಿಯನ್ 2015ರಲ್ಲಿ ಸಿಇಒ ಆಗಿ ನೇಮಕಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಬಾರ್ಕ್ಲೆ ಕಂಪನಿಯ ಸಿಇಒ ಆಗಿ ಸಿಎಸ್ ವೆಂಕಟಕೃಷ್ಣನ್ ಕಾರ್ಯನಿರ್ವಹಿಸುತ್ತಿದ್ದಾರೆ.

66
ಯೂಟ್ಯೂಬ್, ಹನಿವೆಲ್ ಸೇರಿ ಹಲವು ಕಂಪನಿಗಳಿಗೆ ಭಾರತೀಯರೇ ಬಾಸ್

ಯೂಟ್ಯೂಬ್ ಅತೀ ದೊಡ್ಡ ವಿಡಿಯೋ ಪ್ಲಾಟ್‌ಫಾರ್ಮ್ ಈ ಸಂಸ್ಥೆ ಮುನ್ನಡೆಸುತ್ತಿರುವುದು ಭಾರತದ ನೀಲ್ ಮೋಹನ್. ಇನ್ನು ಪ್ರೊಟೆಕ್ಟರ್ ಆ್ಯಂಡ್ ಗ್ಯಾಂಬಲ್ ಸಂಸ್ಥೆಯ ಸಿಇಒ ಆಗಿ ಭಾರತದ ಶೈಲೇಶ್ ಜೆಜುರಿಕರ್ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಹನಿವೆಲ್ ಸಂಸ್ಥೆಯ ಸಿಇಒ ಆಗಿ ವಿಮಲ್ ಕಪೂರ್ ಸೇವೆ ಸಲ್ಲಿಸುತ್ತಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories