ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ #ILoveMuhammad ಟ್ಯಾಗ್‌ನ ಮೂಲ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆಯಾಗಿದೆ. ಕೆಲವೊಂದು ಫೋಟೋ ಮತ್ತು ವಿಡಿಯೋಗಳನ್ನು ಸ್ಟೇಟಸ್ ಹಾಕಿಕೊಳ್ಳುತ್ತಿದ್ದಾರೆ.
ಕಳೆದ 10-12 ದಿನಗಳಿಂದ ವಾಟ್ಸಪ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ #ILoveMuhammad ಎಂಬ ಟ್ಯಾಗ್ ವೈರಲ್ ಆಗುತ್ತಿವೆ. ಈ ಟ್ಯಾಗ್ ಜೊತೆಯಲ್ಲಿ ಮುಸ್ಲಿಮರು ಕೆಲವೊಂದು ಫೋಟೋ ಮತ್ತು ವಿಡಿಯೋಗಳನ್ನು ಸ್ಟೇಟಸ್ ಹಾಕಿಕೊಳ್ಳುತ್ತಿದ್ದಾರೆ. ಈ ಟ್ರೆಂಡ್ ಶುರುವಾಗಿದ್ಯಾಕೆ? ಈ ಟ್ಯಾಗ್ ಬಳಸುತ್ತಿರೋದು ಯಾಕೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ ಬನ್ನಿ.
27
ಈದ್ ಮಿಲಾದ್
ಸೆಪ್ಟೆಂಬರ್ 4ರಂದು ಉತ್ತರ ಪ್ರದೇಶದ ಕಾನ್ಪುರದ ರಾವತ್‌ಪುರದಲ್ಲಿ ಈದ್ ಮಿಲಾದ್ ಹಿನ್ನೆಲೆ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಈ ಮೆರವಣಿಗೆಯಲ್ಲಿ ಕೆಲವರು "ಐ ಲವ್ ಮುಹಮ್ಮದ್" ಪದವುಳ್ಳ ಬ್ಯಾನರ್ ಹಾಕಿದ್ದರು. ಮತ್ತೊಂದಿಷ್ಟು ಜನರು "ಐ ಲವ್ ಮುಹಮ್ಮದ್" ಎಂಬ ಫಲಕಗಳನ್ನು ಹಿಡಿದುಕೊಂಡಿದ್ದರು. ಈ ನಡೆಯನ್ನು ಖಂಡಿಸಿದ್ದ ಹಿಂದೂ ಸಂಘಟನೆಗಳು, ಈ ಮೂಲಕ ಹೊಸ ಸಂಪ್ರದಾಯಕ್ಕೆ ಮುನ್ನಡಿ ಹಾಕ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.
37
"ಐ ಲವ್ ಮುಹಮ್ಮದ್" ಬ್ಯಾನರ್ ಹಿಡಿದು ಪ್ರತಿಭಟನೆ
ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರು ಯಾವುದೇ ಎಫ್‌ಐಆರ್ ದಾಖಲಾಗದಿದ್ದರೂ ಬ್ಯಾನರ್‌ಗಳನ್ನು ತೆರವುಗೊಳಿಸಿದ್ದರು. ಈ ಸಂಬಂಧ ಅಶಾಂತಿಗೆ ಕಾರಣರಾದ 24 ಜನರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಕಾನ್ಪುರ ಘಟನೆಗಳ ಬಳಿಕ ಉನ್ನಾವೋದಲ್ಲಿಯೂ ಯುವಕರು "ಐ ಲವ್ ಮುಹಮ್ಮದ್" ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಿದರು. ಈ ವೇಳೆ ಕೆಲವು ಸ್ಥಳದಲ್ಲಿ ಕಲ್ಲು ತೂರಾಟವೂ ನಡೆಯಿತು. ಈ ಸಂಬಂಧ ಐವರ ಬಂಧನ ಆಗಿತ್ತು.
ಮಹಾರಾಜಗಂಜ್‌ನಲ್ಲಿಯೂ ಪೊಲೀಸರು ಮುಸ್ಲಿಮರ ಮೆರವಣಿಗೆಯನ್ನು ತಡೆದು 64 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಹಾಗೆಯೇ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಕೆಲ ಯುವಕರು ಉಗ್ರಗಾಮಿ ಘೋಷಣೆಗಳನ್ನು ಕೂಗಿರುವ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಕೌಶಾಂಬಿಯಲ್ಲಿ ಉದ್ವಿಘ್ನತೆ ಹೆಚ್ಚಾಗಿತ್ತು. ಈ ಘಟನೆ ಸಂಬಂಧವೂ ಪೊಲೀಸರು ಡಜನ್‌ಗಟ್ಟಲೇ ಜನರನ್ನು ಬಂಧಿಸಿದ್ದರು.
57
ನಮ್ಮ ಸಾಂವಿಧಾನಿಕ ಹಕ್ಕು
ಈ ಎಲ್ಲಾ ಘಟನೆಗಳನ್ನು ಖಂಡಿಸಿ ಲಕ್ನೋದಲ್ಲಿ ಮಹಿಳೆಯರು ವಿಧಾನಸಭೆಗೆ ಹೊರಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಿ "ಐ ಲವ್ ಮುಹಮ್ಮದ್" ಘೋಷಣೆ ಕೂಗಿದ್ದರು. ಈ ಕುರಿತು ಪ್ರತಿಕ್ರಿಯಿಸಿದ್ದ ಸಾಮಾಜಿಕ ಕಾರ್ಯಕರ್ತೆ ಸುಮಯಾ ರಾಣಾ, ಐ ಲವ್ ಮುಹಮ್ಮದ್ ಎಂದು ಹೇಳುವುದು ನಮ್ಮ ಸಾಂವಿಧಾನಿಕ ಹಕ್ಕು. ಈ ರೀತಿಯಾಗಿ ಪ್ರಕರಣಗಳನ್ನು ದಾಖಲಿಸೋದು ತಪ್ಪು ಎಂದು ಹೇಳಿದ್ದರು.
ಈ ಘಟನೆಗಳ ಬಳಿಕ ಹೈದರಾಬಾದ್ ಮತ್ತು ನಾಗ್ಪುರದಲ್ಲಿಯೂ ಪ್ರತಿಭಟನೆಗಳು ನಡೆದಿವೆ. ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ನೇತೃತ್ವದಲ್ಲಿ ಧಾರ್ಮಿಕ ಗುಂಪುಗಳು ಮತ್ತು ರಾಜಕೀಯ ನಾಯಕರು ದೇಶದ ಹಲವು ಪ್ರದೇಶಗಳಲ್ಲಿ ಪ್ರತಿಭಟನೆ ನಡೆದಿವೆ. ಉತ್ತರಾಖಂಡದ ಕಾಶಿಪುರದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಸಂಘರ್ಷ ಉಂಟಾಗಿದ್ದರಿಂದ ಕಲ್ಲು ತೂರಾಟ ನಡೆದಿದ್ದರಿಂದ ಹಲವು ವಾಹನಗಳು ಜಖಂಗೊಂಡಿದ್ದವು.
77
ಯಾರು ಏನು ಹೇಳಿದರು?
ಸಮಾಜವಾದಿ ಪಕ್ಷ: ನಾನು ರಾಮನನ್ನು ಪ್ರೀತಿಸುತ್ತೇನೋ ಅಂತ ಹೇಳಿವುದು ನನ್ನ ಸ್ವಾತಂತ್ರ್ಯವೋ, ಅವರು ಮಹಮ್ಮದ್‌ನನ್ನು ಪ್ರೀತಿಸೋದಾಗಿ ಹೇಳಿದ್ದಾರೆ. ಇದು ನಮ್ಮ ಸ್ವಾತಂತ್ರ್ಯವಾಗಿದೆ.
ಬಿಜೆಪಿ: ಕಾನೂನು ಉಲ್ಲಂಘನೆಯಾದ್ರೆ ಖಂಡಿತವಾಗಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಧಾರ್ಮಿಕ ಮುಖಂಡರು: ಜಮಾತ್ ರಝಾ-ಎ-ಮುಸ್ತಫಾ, ವಿಶ್ವ ಸೂಫಿ ವೇದಿಕೆ ಹಿಂಸಾಚಾರವನ್ನು ಖಂಡಿಸುತ್ತವೆ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಲು ಕರೆ ನೀಡುತ್ತವೆ ಎಂದು ಪ್ರತಿಕ್ರಿಯೆ ನೀಡುತ್ತೇವೆ.
ಅಸಾದುದ್ದೀನ್ ಓವೈಸಿ: ನಾನು ಮುಹಮ್ಮದ್ ಅವರನ್ನು ಪ್ರೀತಿಸುತ್ತೇನೆ ಎಂದು ಹೇಳುವುದು ಅಪರಾಧವಲ್ಲ. ಇದು ಧಾರ್ಮಿಕ ಸ್ವಾತಂತ್ರ್ಯ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡು ಕಾನ್ಪುರ ಪೊಲೀಸರ ಖಾತೆಗೆ ಟ್ಯಾಗ್ ಮಾಡಿದ್ದಾರೆ.