ಸರ್ಕಾರಿ ನೌಕರಿ ಸಿಗ್ತಿದ್ದಂತೆ ನಿನ್ನ ಅಗತ್ಯವಿಲ್ಲ; ಪತ್ನಿ ಕಿರುಕುಳಕ್ಕೆ ಪ್ರಾಣ ಕಳೆದುಕೊಂಡ ಗಂಡ

Published : Mar 24, 2026, 01:53 PM IST

ಪತ್ನಿಯ ಶಿಕ್ಷಣಕ್ಕೆ ಬೆಂಬಲ ನೀಡಿ ಆಕೆಗೆ ಸರ್ಕಾರಿ ನೌಕರಿ ಸಿಕ್ಕ ನಂತರ, ಆಕೆ ತನ್ನಿಂದ ದೂರವಾಗಿದ್ದರಿಂದ ಮನನೊಂದ ಪತಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ಮತ್ತು ಆಕೆಯ ಸಂಬಂಧಿಕರ ಕಿರುಕುಳವೇ ತನ್ನ ಸಾವಿಗೆ ಕಾರಣ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

PREV
15
ಪತಿ ಆತ್ಮ*ಹತ್ಯೆ

ಮದುವೆ ಬಳಿಕ ಗಂಡ ಓದಿಸಿದ್ದರಿಂದ ಸರ್ಕಾರಿ ನೌಕರಿ ಪಡೆದ ಹೆಂಡತಿ ತನ್ನಿಂದ ದೂರವಾಗಿದ್ದರಿಂದ ಮನನೊಂದ ಪತಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಆಂಧ್ರ ಪ್ರದೇಶದ ಮಂಚೇರಿಯಲ್ ಜಿಲ್ಲೆಯ (Mancherial district) ರಾಮಕೃಷ್ಣಪುರದಲ್ಲಿ ಮಾರ್ಚ್ 10ರಂದು ಘಟನೆ ನಡೆದಿದೆ. 41 ವರ್ಷದ ನಾಗೆಲ್ಲಿ ಶ್ರೀನಿವಾಸ್ ಪ್ರಾಣ ಕಳೆದುಕೊಂಡ ವ್ಯಕ್ತಿ. ಮೃತ ಶ್ರೀನಿವಾಸ್ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದು, ಲಕ್ಷ್ಮಿ ನಗರದಲ್ಲಿ ವಾಸವಾಗಿದ್ದರು.

25
ಸಿಕ್ತು ಸರ್ಕಾರಿ ಉದ್ಯೋಗ

ಈ ಸಂಬಂಧ ಶ್ರೀನಿವಾಸ್ ಅವರ ಸೋದರ ಶಿವಕೃಷ್ಣ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಪ್ರಕಾರ, 2012ರಲ್ಲಿ ಸತ್ಲಪಲ್ಲಿ ಜ್ಯೋತಿ ಅವರೊಂದಿಗೆ ಶ್ರೀನಿವಾಸ್ ಮದುವೆಯಾಗಿತ್ತು. ದಂಪತಿಗೆ ಓರ್ವ ಮಗನಿದ್ದಾನೆ. ಮದುವೆ ಬಳಿಕ ಜ್ಯೋತಿ ತಮ್ಮ ಶಿಕ್ಷಣ ಮುಂದುವರಿಸಿದ್ದರು. ನಂತರ ಜ್ಯೋತಿ ಅವರಿಗೆ ಗ್ರೂಪ್-II ಸರ್ಕಾರಿ ಉದ್ಯೋಗ (Excise Circle Inspector) ದೊರೆಕಿದೆ.

35
ಗಂಡನಿಂದ ಅಂತರ ಕಾಯ್ದುಕೊಂಡ ಆರೋಪ

ಸರ್ಕಾರಿ ಉದ್ಯೋಗದ ಬಳಿಕ ಉನ್ನತ ಶಿಕ್ಷಣಕ್ಕೆ ಬೆಂಬಲ ನೀಡಿದ್ದ ಗಂಡನಿಂದ ಜ್ಯೋತಿ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದರು ಎಂಬ ಆರೋಪ ಮಾಡಲಾಗಿದೆ. ಇನ್ಮುಂದೆ ನನಗೆ ನಿಮ್ಮ ಅಗತ್ಯವಿಲ್ಲ ಎಂದು ಜ್ಯೋತಿ ಹೇಳಿ ಗಂಡನಿಗೆ ಮಾನಸಿಕವಾಗಿ ಕಿರುಕುಳ ದೂರವಾಗಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಎಲ್ಲಾ ಘಟನೆ ಬಳಿಕ ಶ್ರೀನಿವಾಸ್ ಮತ್ತು ಜ್ಯೋತಿ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದರು. ಮಗ ಹುಟ್ಟಿದ ಬಳಿಕ ಮತ್ತೆ ಗಂಡ-ಹೆಂಡ್ತಿ ಜೊತೆಯಾಗಿರಲು ಆರಂಭಿಸಿದ್ದರು. ಮುಂದೆ ಲಕ್ಷ್ಮಿ ನಗರದಲ್ಲಿ ಮನೆ ಖರೀದಿಸುವಂತೆ ಗಂಡನ ಮೇಲೆ ಜ್ಯೋತಿ ಒತ್ತಡ ಹಾಕಲಾರಂಭಿಸಿದ್ದರಂತೆ. ಹೊಸಮನೆ ಖರೀದಿಗಾಗಿ ಶ್ರೀನಿವಾಸ್ 50 ಲಕ್ಷ ರೂಪಾಯಿ ಖರ್ಚು ಮಾಡಿದ್ದರಂತೆ.

45
ವರದಕ್ಷಿಣೆ ಕಿರುಕುಳ ಆರೋಪ

ಮನೆ ಖರೀದಿ ಬಳಿಕ ಶ್ರೀನಿವಾಸ್ ಕುಟುಂಬಸ್ಥರಿಗೆ ಆಹ್ವಾನ ನೀಡದೇ ಜ್ಯೋತಿ ಗೃಹಪ್ರವೇಶ ನೆರವೇರಿಸಿದ್ದರು. ಕೇವಲ ತಮ್ಮ ಕುಟುಂಬಸ್ಥರೊಂದಿಗೆ ಜ್ಯೋತಿ ಹೊಸಮನೆಯ ಗೃಹಪ್ರವೇಶ ಕಾರ್ಯಕ್ರಮ ಮುಗಿಸಿದ್ದರು. ಇದು ಸಹ ಗಂಡ-ಹೆಂಡ್ತಿ ನಡುವಿನ ಮನಸ್ತಾಪಕ್ಕೆ ಕಾರಣವಾಗಿತ್ತು. ನಂತರ ಗಂಡನ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಮಾಡಿ ದೂರು ದಾಖಲಿಸಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ನಡುವೆ ಮಾರ್ಚ್ 10ರಂದು ಶ್ರೀನಿವಾಸ್ ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ಪತ್ನಿ ಕಿರುಕುಳಕ್ಕೆ ಗಂಡನ ದುರಂತ ಅಂತ್ಯ ಪ್ರಕರಣ, ಅನೈತಿಕ ಸಂಬಂಧ ಆರೋಪದಲ್ಲೂ ಟ್ವಿಸ್ಟ್

55
ಪೊಲೀಸರಿಂದ ತನಿಖೆ ಆರಂಭ

ಮನೆಯ ಮಾಲೀಕತ್ವದ ಬಗ್ಗೆ ಶ್ರೀನಿವಾಸ್ ಸಿವಿಲ್ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಮನೆಯಲ್ಲಿ ಡೆತ್‌ನೋಟ್ ಲಭ್ಯವಾಗಿದ್ದು, ಪತ್ನಿಯ ಕಿರುಕುಳದ ಬಗ್ಗೆ ಉಲ್ಲೇಖಿಸಿದ್ದಾರೆ. ಪತ್ನಿ ಮತ್ತು ಆಕೆಯ ಸಂಬಂಧಿಕರ ಕಿರುಕುಳ ಮತ್ತು ಬೆದರಿಕೆಗಳಿಂದಾಗಿ ಈ ಕಠಿಣ ಹೆಜ್ಜೆ ಇಡುತ್ತಿದ್ದೇನೆ ಎಂದು ಶ್ರೀನಿವಾಸ್ ಪತ್ರದಲ್ಲಿ ಬರೆದಿದ್ದಾರೆ. ಪೊಲೀಸರು ಡೆತ್ ನೋಟ್ ವಶಕ್ಕೆ ಪಡೆದುಕೊಂಡಿದ್ದು, ಸೋದರ ಶಿವಕೃಷ್ಣ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಮದುವೆ ಎಂಬುದು ಮಕ್ಕಳಾಟವಲ್ಲ, ಸಹಕಾರ ಬೇಕು: ವಿಚ್ಛೇದನ ಕೋರಿದ್ದ ಪತಿಗೆ ಹೈಕೋರ್ಟ್ ಹೇಳಿದ್ದೇನು?

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories