ಆಧಾರ್ ಕಾರ್ಡ್ ಕಳೆದುಹೋದರೆ ಮತ್ತು ಅದರ ಸಂಖ್ಯೆ ನೆನಪಿಲ್ಲದಿದ್ದರೆ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಬಳಸಿ ಯುಐಡಿಎಐ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅಥವಾ ಮೊಬೈಲ್ ಲಿಂಕ್ ಇಲ್ಲದಿದ್ದಲ್ಲಿ ಆಧಾರ್ ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡಬಹುದು. ಫುಲ್ ಡಿಟೇಲ್ಸ್ ಇಲ್ಲಿದೆ.
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನೀಡಿದ 12-ಅಂಕಿಯ ವಿಶಿಷ್ಟ ಐಡಿ, ಭಾರತದ ನಿವಾಸಿಗಳಿಗೆ ಅತ್ಯಂತ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಇದು ಗುರುತಿನ ಪುರಾವೆಯಾಗಿ ಕಾರ್ಯನಿರ್ವಹಿಸುವುದಲ್ಲದೆ, ಸರ್ಕಾರಿ ಯೋಜನೆಗಳು, ಸಬ್ಸಿಡಿಗಳು ಮತ್ತು ಇತರ ಅಧಿಕೃತ ಸೇವೆಗಳಿಗೆ ಅಗತ್ಯವಾಗಿದೆ.
26
ಕಾರ್ಡ್ ಕಳೆದಿರುವಿರಾ?
ಬಹುತೇಕ ಯಾರಿಗೂ ಆಧಾರ್ ಕಾರ್ಡ್ನ ಈ 12 ಸಂಖ್ಯೆ ನೆನಪಿರುವುದು ಕಷ್ಟವೇ. ಕೆಲವರಿಗೆ ಮಾತ್ರ ಈ ಸಂಖ್ಯೆ ತಿಳಿದಿರಬಹುದು. ಇದೇ ಕಾರಣಕ್ಕೆ ಆಧಾರ್ ಕಾರ್ಡ್ನ ಫೋಟೋ ತೆಗೆದು ಮೊಬೈಲ್ನಲ್ಲಿ ಸೇವ್ ಮಾಡಿ ಇಟ್ಟುಕೊಳ್ಳುವುದು ಒಳಿತು. ಇಲ್ಲವೇ ಸಂಖ್ಯೆಯನ್ನಾದರೂ ಒಂದು ಕಡೆ ಬರೆದಿಟ್ಟುಕೊಂಡರೆ ಕಾರ್ಡ್ ಅನ್ನು ಸುಲಭದಲ್ಲಿ ಪಡೆಯಬಹುದು.
36
ಕಳೆದರೆ ಏನು ಮಾಡಬೇಕು?
ಒಂದು ವೇಳೆ ಕಾರ್ಡ್ ಕಳೆದುಹೋಗಿದ್ದರೆ ಹಾಗೂ ನಿಮ್ಮ ಬಳಿ ಅದರ ಫೋಟೋ ಅಥವಾ ನಂಬರ್ ಇಲ್ಲದೇ ಹೋದರೆ ಭಯಪಡುವ ಅಗತ್ಯವಿಲ್ಲ. ಯುಐಡಿಎಐ ವೆಬ್‌ಸೈಟ್‌ನಲ್ಲಿರುವ 'ಯುಐಡಿ/ಇಐಡಿಯನ್ನು ಹಿಂಪಡೆಯಿರಿ' ಆಯ್ಕೆಯನ್ನು ಬಳಸಿಕೊಂಡು ನೀವು ನಿಮ್ಮ ಆಧಾರ್ ವಿವರಗಳನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಹಿಂಪಡೆಯಬಹುದು. ಪರಿಶೀಲನೆಗಾಗಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಅನ್ನು ನಮೂದಿಸಿ.
- ಯುಐಡಿಎಐ ವೆಬ್‌ಸೈಟ್‌ಗೆ ಭೇಟಿ ಕೊಟ್ಟು ಅಲ್ಲಿ ನಿಮ್ಮ ಪೂರ್ಣ ಹೆಸರು, ನೀವು ಲಿಂಕ್ ಮಾಡಿರುವ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಮತ್ತು ಕ್ಯಾಪ್ಚಾವನ್ನು ಭರ್ತಿ ಮಾಡಿ. ನಿಮ್ಮ OTP ಬರುತ್ತದೆ.
- ಮೊಬೈಲ್ OTP ನಮೂದಿಸಿ ಓಕೆ ಕ್ಲಿಕ್ ಮಾಡಿ. ಇಷ್ಟಾದರೆ ಸಾಕು, ನಿಮ್ಮ ಆಧಾರ್ ಸಂಖ್ಯೆ/EID ಅನ್ನು ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ SMS ಬರುತ್ತದೆ.
56
ಮೊಬೈಲ್ ಲಿಂಕ್ ಆಗಿಲ್ವಾ?
ಕೆಲವರು ಇದುವರೆಗೂ ಆಧಾರ್ ಕಾರ್ಡ್ಗೆ ಮೊಬೈಲ್ ಫೋನ್ ನಂಬರ್ ಲಿಂಕ್ ಮಾಡಿಕೊಂಡಿಲ್ಲ. ಆ ಸಂದರ್ಭದಲ್ಲಿಯೂ ಚಿಂತಿಸಬೇಕಾದ ಅಗತ್ಯವಿಲ್ಲ. ಆಗ ನೀವು ಮಾಡಬೇಕಿರುವುದು ಇಷ್ಟು:
- ಆಧಾರ್ ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡಿ: ನೀವು "ಪ್ರಿಂಟ್ ಆಧಾರ್" ಸೇವೆಯನ್ನು ವಿನಂತಿಸಬಹುದು, ಅಲ್ಲಿ ಅಧಿಕಾರಿಗಳು ನಿಮ್ಮ ಸಂಖ್ಯೆಯನ್ನು ಹಿಂಪಡೆಯಲು ಸಹಾಯ ಮಾಡುತ್ತಾರೆ.
-UIDAI ಸಹಾಯವಾಣಿಗೆ ಕರೆ ಮಾಡಿ: ನಿಮ್ಮ ಆಧಾರ್ ಸಂಖ್ಯೆಯನ್ನು ಮರುಪಡೆಯುವಲ್ಲಿ ಸಹಾಯ ಪಡೆಯಲು 1947 ಅನ್ನು ಡಯಲ್ ಮಾಡಿ.
66
ಈ ವೆಬ್‌ಸೈಟ್‌ಗೆ ಭೇಟಿ ನೀಡಿ
ಕೆಲವು ನಕಲಿ ವೆಬ್ಸೈಟ್ಗಳು ಇದ್ದು, ಅವುಗಳ ಬಗ್ಗೆ ಎಚ್ಚರಿಕೆಯಿಂದ ಇರಿ. ಅಧಿಕೃತ ವೆಬ್‌ಸೈಟ್ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ವಿವರವಾದ ಸೂಚನೆಗಳು ಮತ್ತು ನವೀಕರಣಗಳಿಗಾಗಿ ನಿವಾಸಿಗಳು ಅಧಿಕೃತ UIDAI ಪೋರ್ಟಲ್ https://uidai.gov.in/ ಅನ್ನು ಪರಿಶೀಲಿಸಬಹುದು.