ಕ್ಯಾಬ್ ಡ್ರೈವರ್ ಡೇಟಿಂಗ್ ಪ್ರೊಫೈಲ್‌ಗೆ ಸಿಇಒ ಶಾಕ್, ಡ್ರೈವರ್ ಬಳಸುತ್ತಿದ್ದ ಡೇಟಿಂಗ್ ಆ್ಯಪ್‌ನಲ್ಲಿ ಆತನ ಪ್ರೊಫೈಲ್‌ಗೆ 23 ಯುವತಿಯರ ಪ್ರೊಫೈಲ್ ಮ್ಯಾಚ್ ಆಗಿದೆ. ಇದರಲ್ಲಿ ಹೈಲಿ ಎಜುಕೇಟೆಡ್ ಮಹಿಳೆಯರು ಇದ್ದರು.
ಸೋಶಿಯಲ್ ಮೀಡಿಯಾ, ಎಐ ಜಮಾನದಲ್ಲಿ ಯಾವುದನ್ನು ನಾವು ಊಹಿಸಲು ಸಾಧ್ಯವಿಲ್ಲ. ಎಲ್ಲವೂ ಡಿಜಿಟಲ್ ಆಲ್ಗೋರಿದಂ ನಿರ್ಧರಿಸುತ್ತೆ. ವಿಶೇಷವಾಗಿ ಡೇಟಿಂಗ್ ಆ್ಯಪ್ ಈಗ ಭಾರಿ ಟ್ರೆಂಡ್‌ನಲ್ಲಿದೆ. ಡೇಟಿಂಗ್ ಆ್ಯಪ್ ಮೂಲಕ ಹಲವರು ರಿಲೇಶನ್‌ಶಿಪ್ ಬೆಳೆಸಿಕೊಂಡಿದ್ದಾರೆ. ಇದೀಗ ಇದೇ ಡೇಟಿಂಗ್ ಆ್ಯಪ್‌ಗಳ ಅಲ್ಗೋರಿದಂ ನೋಡಿ ಕಂಪನಿ ಸಿಇಒ ಶಾಕ್ ಆಗಿದ್ದಾರೆ. ಕಾರಣ ಪ್ರಯಾಣದ ವೇಳೆ ತಮ್ಮ ಕ್ಯಾಬ್ ಡ್ರೈವರ್ ಡೇಟಿಂಗ್ ಆ್ಯಪ್ ಬಳಸುತ್ತಿರುವುದು ಗಮನಿಸಿದ್ದಾರೆ. ಕುತೂಹಲಕ್ಕಾಗಿ ಆತನ ಪ್ರೊಫೈಲ್ ಚೆಕ್ ಮಾಡಿದಾಗ ಸಿಇಒ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ. ಕಾರಣ ಆತನ ಫ್ರೊಫೈಲ್‌ಗೆ 23 ಯುವತಿಯರ ಪ್ರೊಫೈಲ್ ಮ್ಯಾಚ್ ಆಗಿದೆ. ಈ ಪೈಕಿ ಮಾಸ್ಟರ್ ಡಿಗ್ರಿ, ಪಿಹೆಚ್‌ಡಿ ಸ್ಕಾಲರ್ ಮಹಿಳೆಯು ಕೂಡ ಇದ್ದಾರೆ.
26
ಆ್ಯಪ್, ಸೋಶಿಯಲ್ ಮೀಡಿಯಾದಲ್ಲಿ ಏನೂ ಲೆಕ್ಕಕ್ಕಿಲ್ಲ
ಗುರುಗ್ರಾಂನಲ್ಲಿ ಮುಖ್ಯ ಕಚೇರಿ ಹೊಂದಿರುವ ನಾಟ್ ಡೇಟಿಂಗ್ ಆ್ಯಪ್‌ನ ಸಹ ಸಂಸ್ಥಾಪಕ ಹಾಗೂ ಸಿಇಒ ಜಸ್ವೀರ್ ಸಿಂಗ್ ತಮ್ಮ ಪ್ರಯಾಣದ ವೇಳೆ ನಡೆದ ಘಟೆಯನ್ನು ಹೇಳಿಕೊಂಡಿದ್ದಾರೆ. ಇದು ತನೆಗೆ ಅಚ್ಚರಿಸೃಷ್ಟಿಸಿತ್ತು ಎಂದಿದ್ದಾರೆ. ಕಾರಣ ಈ ಆಸ್ತಿ, ಅಂತಸ್ತು, ವ್ಯಕ್ತಿತ್ವ, ಕೆಲಸ ಇದ್ಯಾವುದು ಸೋಶಿಯಲ್ ಮೀಡಿಯಾ, ಡೇಟಿಂಗ್ ಆ್ಯಪ್‌ಗಳಲ್ಲಿ ಗಣನೆಗೆ ಬರುವುದಿಲ್ಲ ಎಂದು ಸಿಇಒ ಹೇಳಿದ್ದಾರೆ.
36
ಇದು ಹೇಗೆ ಸಾಧ್ಯ
ಕ್ಯಾಬ್ ಚಾಲಕ ಹಿಂಜ್ ಡೇಟಿಂಗ್ ಆ್ಯಪ್ ಬಳಕೆ ಮಾಡುತ್ತಿದ್ದ. ಇದನ್ನು ಗಮನಿಸಿ ಕ್ಯಾಬ್ ಚಾಲಕನಲ್ಲಿ ಡೇಟಿಂಗ್ ಆ್ಯಪ್‌ನಲ್ಲಿ ಸಕ್ರಿಯವಾಗಿರುವ ಕುರಿತು ಪ್ರಶ್ನಿಸಿದ್ದಾರೆ. ಹೌದು, ತಾನು ಡೇಟಿಂಗ್ ಆ್ಯಪ್‌ನಲ್ಲಿ ಫ್ರೊಫೈಲ್ ಕ್ರಿಯೇಟ್ ಮಾಡಿ ಸಕ್ರಿಯವಾಗಿದ್ದೇನೆ ಎಂದಿದ್ದಾನೆ. ಮಾತುಕತೆ ನಡುವೆ ಕ್ಯಾಬ್ ಚಾಲಕನ ಡೇಟಿಂಗ್ ಆ್ಯಪ್ ಪ್ರೊಫೈಲ್ ನೋಡಿದಾಗ 23 ಮ್ಯಾಚ್. ಈತನ ಜೊತೆ ಮ್ಯಾಚ್ ಆಗಿರುವ ಮಹಿಳೆಯು ಪ್ರೊಫೈಲ್ ಉನ್ನತ ವ್ಯಾಸಾಂಗ ಮಾಡಿರುವ ಮಂದಿ, ಪ್ರತಿಷ್ಠಿತ ಕಂಪನಿಗಳಲ್ಲಿ ಉತ್ತಮ ಕೆಲಸದಲ್ಲಿರುವ ಮಹಿಳೆಯರ ಪ್ರೊಫೈಲ್ ಮ್ಯಾಚ್ ಆಗಿತ್ತು ಎಂದಿದ್ದಾರೆ.
ಆ್ಯಪ್ ಹಾಗೂ ಸೋಶಿಯಲ್ ಮೀಡಿಯಾ ಈ ರೀತಿಯ ಮ್ಯಾಚ್ ಮಾಡುವುದು ಹೇಗೆ? ಅಲ್ಗೊರಿದಂ ಈ ರೀತಿ ಬಳಕೆಯಾದರೆ ಅರ್ಥವೇನು ಎಂದು ಸಿಇಒ ಪ್ರಶ್ನಿಸಿದ್ದಾರೆ. ಇತ್ತ ಈ ಪೋಸ್ಟ್ ಬೆನ್ನಲ್ಲೇ ಹಲವವು ಪ್ರತಿಕ್ರಿಯಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೇವಲ ಅವರ ಪ್ರೊಫೈಲ್ ಅವರು ಹೇಳಿದ ಮಾಹಿತಿಗಳಷ್ಟೇ ಇರುತ್ತೆ. ಇದು ಸರಿಯೋ ತಪ್ಪೋ ಎಂದು ಕ್ರಾಸ್ ವೆರಿಫೈ ಸೋಶಿಯಲ್ ಮೀಡಿಯಾ ಅಥವಾ ಆ್ಯಪ್ ಮಾಡುವುದಿಲ್ಲ. ಇದನ್ನೇ ನೋಡಿ ಇಷ್ಟಪಡುತ್ತಾರೆ ಎಂದರೆ ಅವರಿಗೆ ಬಿಟ್ಟಿದ್ದು ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
56
ವ್ಯಕ್ತಿತ್ವ ಮುಖ್ಯ
ಡೇಟಿಂಗ್ ಆ್ಯಪ್‌ಗಳಲ್ಲಿ ನಿಮ್ಮ ಕೆಲಸ, ಆಸ್ತಿ, ಹಣ ಮುಖ್ಯವಾಗುವುದಿಲ್ಲ. ವ್ಯಕ್ತಿತ್ವ ಹಾಗೂ ಆಕರ್ಷಣೆ ಇದೇ ಮುಖ್ಯ. ಜೊತೆಗೆ ನಿಮ್ಮ ಪ್ರೊಫೈಲ್ ಎಷ್ಟು ಆಕರ್ಷಣೆಯಾಗಿ ಕ್ರಿಯೇಟ್ ಮಾಡಿದ್ದೀರಿ, ಫೋಟೋ ಈ ರೀತಿ ವಿಚಾರಗಳು ತುಂಬಾ ಮುಖ್ಯವಾಗುತ್ತದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
66
ಆತ ಫ್ರೊಪೈಲ್‌ನಲ್ಲಿ ಏನು ಹಾಕಿದ್ದಾನೆ
ಹಲವರು ಘಟನೆಗೆ ಕ್ಯಾಬ್ ಡ್ರೈವರ್ ತನ್ನ ಪ್ರೊಫೈಲ್‌ನಲ್ಲಿ ಏನು ಬರೆದುಕೊಂಡಿದ್ದಾನೆ ಎಂದು ಪ್ರಶ್ನಿಸಿದ್ದಾರೆ. ಈತನೂ ಉತ್ತಮ ವಿದ್ಯಾಭ್ಯಾಸ ಹೊಂದಿದವನಾಗಿರುತ್ತಾನೆ. ಜೊತೆಗೆ ಕ್ಯಾಬ ಚಾಲಕನಾಗಿ ಉತ್ತಮ ವೇತವನ್ನು ಪಡೆಯುತ್ತಿರುತ್ತಾನೆ. ಇದನ್ನು ರಸವತ್ತಾಗಿ ಪ್ರೊಫೈಲ್‌ನಲ್ಲಿ ಉಲ್ಲೇಖಿಸಿರುವ ಸಾಧ್ಯತೆ ಇದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆತ ಫ್ರೊಪೈಲ್‌ನಲ್ಲಿ ಏನು ಹಾಕಿದ್ದಾನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ