ಎಂಬಿಎ ವಿದ್ಯಾರ್ಥಿನಿಯನ್ನು ಆಕೆಯ ಗೆಳೆಯ ಪಿಯೂಷ್ ಧಮ್ನೋಡಿಯಾ ಅಪಹರಿಸಿ, ಕೊಲೆ ಮಾಡಿದ್ದಾನೆ. ಲೈಂ*ಗಿಕ ದೌರ್ಜನ್ಯಕ್ಕೆ ವಿರೋಧಿಸಿದ್ದಕ್ಕೆ ಕತ್ತು ಹಿಸುಕಿ ಕೊಂದ ನಂತರ, ಶವದ ಮೇಲೆ ಅತ್ಯಾ*ಚಾರ ಎಸಗಿ, ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.
ಇಂದೋರ್‌ನ ಎಂಬಿಎ ವಿದ್ಯಾರ್ಥಿನಿ ಪ್ರಕರಣದಲ್ಲಿ ಆಕೆಯ ಗೆಳೆಯ ಪಿಯೂಷ್ ಧಮ್ನೋಡಿಯಾ ಎಂಬಾತನನ್ನು ಬಂಧಿಸಿದ್ದಾರೆ. ಕೊಲೆ ಬಳಿಕ ಮುಂಬೈ ಮಾರ್ಗವಾಗಿ ಗೋವಾಗೆ ಹೋಗಲು ಪಿಯೂಷ್ ಪ್ಲಾನ್ ಮಾಡಿಕೊಂಡಿದ್ದನು. ಮುಂಬೈನ ಅಂಧೇರಿ ರೈಲ್ವೆ ನಿಲ್ದಾಣದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿ ಇಂದೋರ್ ಕರೆದುಕೊಂಡು ಬಂದಿದ್ದಾರೆ.
25
ಲೈಂಗಿಕ ದೌರ್ಜನ್ಯ
ಫೆಬ್ರವರಿ 10ರಂದು ಗೆಳತಿಯನ್ನು ಅಪಹರಿಸಿದ ಪಿಯೂಷ್ ಆಕೆಯನ್ನು ತನ್ನ ಕೋಣೆಗೆ ಕರೆದುಕೊಂಡು ಬಂದಿದ್ದಾನೆ. ಕೋಣೆಯಲ್ಲಿ ಲೈಂಗಿಕ ದೌರ್ಜನ್ಯ ನಡೆಸಲು ಮುಂದಾಗಿದ್ದಾನೆ. ಯುವತಿ ವಿರೋಧ ವ್ಯಕ್ತಪಡಿಸಿದಾಗ ಆಕೆಯ ಕೈ ಮತ್ತು ಕಾಲುಗಳನ್ನು ಕಟ್ಟಿ ಕತ್ತು ಹಿಸುಕಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಪಿಯೂಷ್ ಕೋಣೆಯಿಂದ ಹೊರ ಬಂದು ಬಿಯರ್ ಖರೀದಿಸಿದ್ದಾನೆ. ಗೆಳತಿ ಶವದ ಪಕ್ಕವೇ ಕುಳಿತು ಬಿಯರ್ ಕುಡಿದಿದ್ದಾನೆ.
35
ಪಿಯೂಷ್ ಕ್ರೌರ್ಯ
ಪಿಯೂಷ್ ಕ್ರೌರ್ಯ ಇಲ್ಲಿಗೆ ನಿಂತಿಲ್ಲ. ಮುಂದೆ ಆತನ ಮಾತುಗಳನ್ನು ಕೇಳಿದ ಪೊಲೀಸರು ದಿಗ್ಭ್ರಮೆಗೊಂಡಿದ್ದರು. ಕೊ*ಲೆಗೂ ಮುನ್ನ ಲೈಂಗಿಕಾಸಕ್ತಿ ಹೆಚ್ಚಿಸುವ ಔಷಧಿ ಖರೀದಿಸಿದ್ದನು. ಯುವತಿ ಪ್ರಾಣ ಹೋದ ನಂತರ ವಯಾಗ್ರ ಸೇವಿಸಿ, ಶವದ ಮೇಲೆ ಅತ್ಯಾ*ಚಾರ ನಡೆಸಿರೋದಾಗಿ ಪಿಯೂಷ್ ಒಪ್ಪಿಕೊಂಡಿದ್ದಾನೆ. ಆತ್ಮದ ಜೊತೆ ಹೇಗೆ ಸಂವಹನ ನಡೆಸಬೇಕು ಎಂದು ಗೂಗಲ್‌ನಲ್ಲಿ ಸರ್ಚ್ ಮಾಡಿದ್ದಾನೆ.
ಶವದ ಮೇಲೆ ಅತ್ಯಾ*ಚಾರ ನಡೆದಿದೆಯಾ ಎಂಬುದರ ಕುರಿತು ವೈದ್ಯರಿಂದ ಅಧಿಕೃತ ಹೇಳಿಕೆ ಬಂದಿಲ್ಲ. ನಗ್ನ ಶವ ಮತ್ತು ಖಾಸಗಿ ಭಾಗದ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾನೆ. ತನ್ನ ಮುಖದ ಮೇಲೆ ಎಮೋಜಿ ಇರಿಸಿ ಎಡಿಟ್ ಮಾಡಿದ್ದಾನೆ. ಈ ಪಿಯೂಷ್ ಸತ್ತ ಗೆಳತಿಯನ್ನು ಅವಮಾನಿಸುವ ಉದ್ದೇಶ ಹೊಂದಿದ್ದನು ಎಂದು ಪೊಲೀಸರು ಹೇಳಿದ್ದಾರೆ.
55
ಪಶ್ಚತ್ತಾಪ ನೋವು
ಪೊಲೀಸರ ಮುಂದೆ ಹೇಳಿಕೆ ಮತ್ತು ಮಾಧ್ಯಮಗಳ ಮುಂದೆ ಮಾತನಾಡುವ ವೇಳೆ ಪಿಯೂಷ್ ಮುಖದ ಮೇಲೆ ಯಾವುದೇ ಪಶ್ಚತ್ತಾಪ ನೋವು ಇರಲಿಲ್ಲ ಎಂದು ವರದಿಯಾಗಿದೆ. ಪಿಯೂಷ್ ಬಗ್ಗೆ ಯುವತಿ ಕುಟುಂಬಕ್ಕೂ ತಿಳಿದಿತ್ತು. ಆಕೆಯ ಮದುವೆಗೆ ಪೋಷಕರು ಸಿದ್ಧತೆ ಮಾಡಿಕೊಳ್ಳುತ್ತಿದ್ದರು ಎಂದು ವರದಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ