ಡಿಜಿಟಲ್ ಇಂಡಿಯಾಗೆ 10 ವರ್ಷದ ಸಂಭ್ರಮ. ಇದರ ಅಂಗವಾಗಿ ಕೇಂದ್ರ ಸರ್ಕಾರ ಇದೀಗ ಹೊಸ ರೀಲ್ಸ್ ಸ್ಪರ್ಧೆ ಆಯೋಜಿಸಿದೆ. ಈ ರೀಲ್ಸ್ ಕಂಟೆಸ್ಟ್‌ನಲ್ಲಿ ಪಾಲ್ಗೊಂಡು ಬರೋಬ್ಬರಿ 15,000 ರೂಪಾಯಿ ಬಹುಮಾನ ಗೆಲ್ಲುವ ಅವಕಾಶವಿದೆ. ಜುಲೈ 1 ರಿಂದ ಆಗಸ್ಟ್ 1 ರವರೆಗೆ ಸ್ಪರ್ಧೆ ನಡೆಯಲಿದೆ. ನಿಮ್ಮ ಡಿಜಿಟಲ್ ಅನುಭವಗಳನ್ನ ವೀಡಿಯೋ ಮಾಡಿ ಹಂಚಿಕೊಳ್ಳಿ, ಬಹುಮಾನ ಗೆಲ್ಲಿ.
25
ರೀಲ್ ಕಾಂಟೆಸ್ಟ್‌ನಲ್ಲಿ ಭಾಗವಹಿಸುವುದು ಹೇಗೆ?
ಒಂದು ನಿಮಿಷದ ರೀಲ್ ಮಾಡಿ https://innovateindia.mygov.in ಅಲ್ಲಿ ಅಪ್ಲೋಡ್ ಮಾಡಿ. MP4, ಪೋರ್ಟ್ರೇಟ್ ಮೋಡ್‌ನಲ್ಲಿರಬೇಕು. ಹೊಸದಾಗಿ ಮಾಡಿದ ರೀಲ್ ಆಗಿರಬೇಕು. ಕೆಲ ಮಾರ್ಗಸೂಚಿಗಳನ್ನು ಪಾಲಿಸಬೇಕು. ರೀಲ್ಸ್ ಮಾಡಿ ಮೇಲೆ ತಿಳಿಸಿದ ವೆಬ್‌ಸೈಟ್‌ನಲ್ಲಿ ರೀಲ್ ವಿಡಿಯೋ ಅಪ್ಲೋಡ್ ಮಾಡಬೇಕು.
35
ಯಾವ ವಿಷಯಗಳ ಮೇಲೆ ರೀಲ್ ಮಾಡಬೇಕು?
ಡಿಜಿಟಲ್ ಇಂಡಿಯಾ ನಿಮ್ಮ ಮೇಲೆ ಯಾವ ರೀತಿ ಪ್ರಭಾವ ಬೀರಿದೆ, BHIM UPI, UMANG, DigiLocker, eHospital ಬಳಕೆ ಹೇಗೆ ಮಾಡಿದ್ರಿ ಅಂತ ರೀಲ್ ಮಾಡಿ. ವಿಷಯ ಹಾಗೂ ಅದಕ್ಕೆ ತಕ್ಕ ರೀಲ್ಸ್ ಆಗಿರಬೇಕು. ಇದರಲ್ಲಿ ಉತ್ತಮ ರೀಲ್ಸ್‌ಗೆ ಬಹುಮಾನ ಘೋಷಿಸಲಾಗುತ್ತೆದೆ.
45
ಬಹುಮಾನ ಎಷ್ಟು?
ರೀಲ್ಸ್ ಸ್ಪರ್ಧೆಯಲ್ಲಿ ಸರ್ಕಾರ ಭರ್ಜರಿ ಬಹುಮಾನ ಘೋಷಿಸಿದೆ. ಮೊದಲ ಬಹುಮಾನ 15,000 ರೂಪಾಯಿ ಅಂದರ ಒಬ್ಬರಿಗಲ್ಲ, ಟಾಪ್ 10 ಜನಕ್ಕೆ 15,000 ರೂ., ಮುಂದಿನ 25 ಜನಕ್ಕೆ 10,000 ರೂ., 50 ಜನಕ್ಕೆ 5,000 ರೂ. ಬಹುಮಾನ ನೀಡಲಾಗುತ್ತೆ.
55
ಕೊನೆಯ ದಿನಾಂಕ ಯಾವಾಗ?
ಆಗಸ್ಟ್ 1, 2025 ಕೊನೆಯ ದಿನಾಂಕ. ಬೇಗ ರೀಲ್ ಮಾಡಿ ಅಪ್ಲೋಡ್ ಮಾಡಿ.ಗ್ರಾಮೀಣ ಶುಚಿತ್ವದ ಬಗ್ಗೆ ರೀಲ್ ಮಾಡಿ https://www.mygov.in/ ಅಲ್ಲಿ ಅಪ್ಲೋಡ್ ಮಾಡಿ. ಜುಲೈ 31, 2025 ಕೊನೆಯ ದಿನಾಂಕ. 5,000 ರೂ. ಬಹುಮಾನ.