ವಂದೇ ಭಾರತ್ ಪ್ರಯಾಣಿಕರಿಗೆ ಗುಡ್ ನ್ಯೂಸ್, ಟಿಕೆಟ್ ಬುಕಿಂಗ್‌ನಲ್ಲಿ ಮಹತ್ವದ ಬದಲಾವಣೆ

Published : Jul 20, 2025, 07:54 PM IST

ಕೊನೆಯ ನಿಮಿಷದಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಇದೀಗ ರೈಲ್ವೇ ಇಲಾಖೆ ಗುಡ್ ನ್ಯೂಸ್ ನೀಡಿದೆ. ಇದೀಗ ವಂದೇ ಭಾರತ್ ರೈಲು ಟಿಕೆಟ್ ಬುಕಿಂಗ್‌ನಲ್ಲಿ ಮಹತ್ವದ ಬದಲಾವಣೆ ಮಾಡಲಗಿದೆ. 

PREV
16

ವಂದೇ ಭಾರತ್ ರೈಲು ಪ್ರಯಾಣಿಕರಿಗೆ ಒಳ್ಳೆಯ ಸುದ್ದಿ.  ಅದರಲ್ಲೂ ಪ್ರಮುಖವಾಗಿ ಕೊನೆಯ ನಿಮಿಷದಲ್ಲಿ ಪ್ರಯಾಣ ಮಾಡುವ ಅಥವಾ ಕೊನೆ ನಿಮಿಷದಲ್ಲಿ ರೈಲು ಹತ್ತುವ ಪ್ರಯಾಣಿಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಟಿಕೆಟ್ ಬುಕಿಂಗ್ ಬಗ್ಗೆ ಭಾರತೀಯ ರೈಲ್ವೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 

26

ಭಾರತೀಯ ರೈಲ್ವೇ ಮಹತ್ವದ ನಿರ್ಧಾರದಲ್ಲಿ ಇದೀಗ ವಂದೇ ಭಾರತ್ ರೈಲು ಪ್ರಯಾಣಿಕರು, ರೈಲು ಹೊರಡುವ 15 ನಿಮಿಷ ಮೊದಲು ಟಿಕೆಟ್ ಬುಕಿಂಗ್ ಮಾಡಲು ಅವಕಾಶ ನೀಡಲಾಗಿದೆ. ಇದರಿಂದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸುತ್ತದೆ.

36

ಪ್ರಯಾಣಿಕರ ಅನುಕೂಲಕ್ಕಾಗಿ, ರೈಲ್ವೆ ಅಧಿಕಾರಿಗಳು ವಂದೇ ಭಾರತ್ ರೈಲಿನಲ್ಲಿ ಪ್ರಸ್ತುತ 15 ನಿಮಿಷ ಬುಕಿಂಗ್ ವ್ಯವಸ್ಥೆಯನ್ನು ಪರಿಚಯಿಸಿದ್ದಾರೆ.  ಆರಂಭದಲ್ಲಿ, ರೈಲ್ವೆಯ ಅಡಿಯಲ್ಲಿ 8 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಈ ಸೌಲಭ್ಯ ಲಭ್ಯವಿದೆ. ನಂತರ, ಈ ವ್ಯವಸ್ಥೆಯನ್ನು ದೇಶಾದ್ಯಂತ ವಿಸ್ತರಿಸಲಾಗುವುದು.

46

ಇಲ್ಲಿಯವರೆಗೆ, ರೈಲು ಮೊದಲ ನಿಲ್ದಾಣದಿಂದ ಹೊರಟ ನಂತರ, ಮಾರ್ಗಮಧ್ಯದಲ್ಲಿರುವ ಯಾವುದೇ ನಿಲ್ದಾಣದಲ್ಲಿ ಟಿಕೆಟ್ ಬುಕಿಂಗ್ ಮಾಡಲು ಸಾಧ್ಯವಿಲ್ಲ ಎಂಬ ನಿಯಮವಿತ್ತು. ಇದರಿಂದಾಗಿ ರೈಲಿನಲ್ಲಿ ಹಲವು ಸೀಟುಗಳು ಖಾಲಿ ಉಳಿಯುತ್ತಿದ್ದವು. ಈ ಹೊಸ ವ್ಯವಸ್ಥೆಯಲ್ಲಿ, ರೈಲು ಯಾವುದೇ ಮಧ್ಯಂತರ ನಿಲ್ದಾಣಕ್ಕೆ ತಲುಪುವ 15 ನಿಮಿಷಗಳ ಮೊದಲು ಪ್ರಯಾಣಿಕರು ಆನ್‌ಲೈನ್ ಅಥವಾ ನಿಲ್ದಾಣದ ಟಿಕೆಟ್ ಕೌಂಟರ್‌ನಿಂದ ಟಿಕೆಟ್ ಬುಕ್ ಮಾಡಬಹುದು.

56

ಉದಾಹರಣೆಗೆ, ವಂದೇ ಭಾರತ್ ರೈಲು ಹೌರಾದಿಂದ ಹೊರಟು ಬೆಳಿಗ್ಗೆ 9 ಗಂಟೆಗೆ ಖರಗ್‌ಪುರ ನಿಲ್ದಾಣವನ್ನು ತಲುಪಿದರೆ, ಖರಗ್‌ಪುರದ ಪ್ರಯಾಣಿಕರು ಬೆಳಿಗ್ಗೆ 8:45 ರವರೆಗೆ ಟಿಕೆಟ್ ಬುಕ್ ಮಾಡಬಹುದು.ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗುವುದಲ್ಲದೆ, ರೈಲ್ವೆಯ ಆದಾಯವೂ ಹೆಚ್ಚಾಗುತ್ತದೆ ಎಂದು ಭಾರತೀಯ ರೈಲ್ವೆ ಭಾವಿಸಿದೆ. ರೈಲಿನ ಖಾಲಿ ಸೀಟುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ.

66

ಈ ಹೊಸ ವ್ಯವಸ್ಥೆಯಿಂದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ವಿಶೇಷವಾಗಿ ಹಠಾತ್ ಪ್ರಯಾಣ ಯೋಜನೆ ಹೊಂದಿರುವವರಿಗೆ ಈ ವ್ಯವಸ್ಥೆ ತುಂಬಾ ಉಪಯುಕ್ತವಾಗಿದೆ. ಪ್ರಸ್ತುತ, ಈ ವ್ಯವಸ್ಥೆಯು ದಕ್ಷಿಣ ಭಾರತಕ್ಕೆ ಮಾತ್ರ ಅನ್ವಯಿಸುತ್ತದೆ. ಎಲ್ಲವೂ ಸರಿಯಾಗಿದ್ದರೆ, ಈ ವ್ಯವಸ್ಥೆಯನ್ನು ದೇಶಾದ್ಯಂತ ಜಾರಿಗೊಳಿಸಲಾಗುವುದು.

Read more Photos on
click me!

Recommended Stories