300 ರೂ. ಟಿಕೆಟ್ ಇಲ್ಲದೆಯೇ ಕ್ವಿಕ್ ಆಗಿ ಸಿಗಲಿದೆ ತಿರುಪತಿ ತಿಮ್ಮಪ್ಪನ ದರ್ಶನ; TTDಯಿಂದ ಹೊಸ ಆಯ್ಕೆ

Published : Jul 20, 2025, 09:36 AM IST

ತಿರುಮಲ ಶ್ರೀನಿವಾಸನ ದರ್ಶನಕ್ಕೆ ದೇಶ ವಿದೇಶಗಳಿಂದ ಭಕ್ತರು ಬರುತ್ತಾರೆ ಬಹಳಷ್ಟು ಜನ ₹300 ಟಿಕೆಟ್ ಬುಕ್ ಮಾಡಿ ಟೂರ್ ಪ್ಲಾನ್ ಮಾಡ್ತಾರೆ. ಆದ್ರೆ ಈ ಟಿಕೆಟ್ ಇಲ್ಲದೇಯೂ ಕಡಿಮೆ ಸಮಯದಲ್ಲಿ ಶ್ರೀನಿವಾಸನ ದರ್ಶನ ಪಡೆದುಕೊಳ್ಳಬಹುದು. 

PREV
15
₹300 ಟಿಕೆಟ್

ಆಗಸ್ಟ್‌ನಲ್ಲಿ ಕುಟುಂಬ ಸಮೇತ ತಿರುಪತಿಗೆ ಹೋಗಬೇಕು ಅಂತಿದ್ದೀರಾ? ₹300 ಟಿಕೆಟ್ ಇಲ್ಲ ಅಂತ ಟ್ರಿಪ್ ಮುಂದೂಡ್ತಿದ್ದೀರಾ? ಇನ್ನೂ ಮುಂದೂಡ್ಬೇಡಿ. ಸ್ವಾಮಿ ದರ್ಶನ ಬೇಗ ಮಾಡ್ಕೊಳ್ಳೋದಕ್ಕೆ, ಹೋಮ ಮಾಡ್ಕೊಳ್ಳೋದಕ್ಕೆ ಟಿಟಿಡಿ ಹೊಸ ವ್ಯವಸ್ಥೆ ಮಾಡಿದೆ. ಏನು ಈ ಸೇವೆ? ಟಿಕೆಟ್ ಹೇಗೆ ಪಡೆಯೋದು? ಈಗ ತಿಳ್ಕೊಳ್ಳೋಣ.

25
₹1600 ಟಿಕೆಟ್‌ನಿಂದ ವಿಶೇಷ ದರ್ಶನ

ಆಗಸ್ಟ್‌ನಲ್ಲಿ ದರ್ಶನಕ್ಕೆ ಇನ್ನೊಂದು ಆಯ್ಕೆ ಕೊಡ್ತಿದೆ ಟಿಟಿಡಿ. ಜುಲೈ 25ರಂದು ಬೆಳಗ್ಗೆ 10 ಗಂಟೆಗೆ ‘ಶ್ರೀ ಶ್ರೀನಿವಾಸ ದಿವ್ಯಾನುಗ್ರಹ ಹೋಮ’ದ ವಿಶೇಷ ದರ್ಶನ ಟಿಕೆಟ್ ಸಿಗುತ್ತೆ. ಒಂದು ಟಿಕೆಟ್ ಬೆಲೆ ₹1600 ಆಗಿದೆ. ಈ ಒಂದು ಟಿಕೆಟ್‌ನಲ್ಲಿ ಇಬ್ಬರು ಭಕ್ತರು ಹೋಗಬಹುದು. ಟಿಕೆಟ್ ಬುಕ್ ಮಾಡಿದವರು ಅಲಿಪಿರಿಯ ಸಪ್ತಗೃಹದಲ್ಲಿ ಹಾಜರ್ ಆಗಬೇಕು.

35
ಹೋಮದ ನಂತರ ಸ್ವಾಮಿ ದರ್ಶನ

ಆ ದಿನ ಬೆಳಗ್ಗೆ 9 ಗಂಟೆ ಒಳಗೆ ಹಾಜರ್ ಆಗಬೇಕು. ಹೋಮ 11 ಗಂಟೆ ಒಳಗೆ ಮುಗಿಯುತ್ತೆ. ಅದೇ ದಿನ ಮಧ್ಯಾಹ್ನ 3 ಗಂಟೆಗೆ ₹300 ವಿಶೇಷ ದರ್ಶನದ ಕ್ಯೂನಲ್ಲಿ ಸ್ವಾಮಿ ದರ್ಶನ ಮಾಡಬಹುದು.

45
ಪುಷ್ಕರಿಣಿ ತಾತ್ಕಾಲಿಕವಾಗಿ ಬಂದ್

ತಿರುಮಲದ ಶ್ರೀವಾರಿ ಪುಷ್ಕರಿಣಿ ಜುಲೈ 20 ರಿಂದ ಆಗಸ್ಟ್ 19 ರವರೆಗೆ ಬಂದ್ ಆಗುತ್ತೆ ಅಂತ ಟಿಟಿಡಿ ಹೇಳಿದೆ. ಪ್ರತಿ ವರ್ಷ ಬ್ರಹ್ಮೋತ್ಸವದ ಮುಂಚೆ ಪುಷ್ಕರಿಣಿ ಶುದ್ಧಿ ಮಾಡೋದು ವಾಡಿಕೆ. ಈ ವರ್ಷ ಬ್ರಹ್ಮೋತ್ಸವ ಸೆಪ್ಟೆಂಬರ್ 24 ರಿಂದ ಶುರುವಾಗೋದ್ರಿಂದ ಮೊದಲೇ ಕೆಲಸ ಶುರು ಮಾಡ್ತಿದ್ದಾರೆ. ಈ ಸಮಯದಲ್ಲಿ ಪುಷ್ಕರಿಣಿ ಆರತಿ ಇರಲ್ಲ, ಭಕ್ತರಿಗೆ ಪ್ರವೇಶ ಇರಲ್ಲ.

55
ಭಕ್ತರಿಗೆ ಟಿಟಿಡಿ ಸೂಚನೆ

ಈ ಸಮಯದಲ್ಲಿ ಭಕ್ತರು ಪುಷ್ಕರಿಣಿಗೆ ಹೋಗಬಾರದು. ಆರತಿ ನೋಡ್ಬೇಕು ಅಂದ್ರೆ ರಿಪೇರಿ ಆದ್ಮೇಲೆ ಬನ್ನಿ. ಟಿಕೆಟ್ ಸಿಗ್ಲಿಲ್ಲ ಅಂತ ಬೇಜಾರ್ ಮಾಡ್ಕೊಳ್ಳ್ಬೇಡಿ, ದಿವ್ಯಾನುಗ್ರಹ ಹೋಮದ ಮೂಲಕ ದರ್ಶನ ಮಾಡಿ ಅಂತ ಟಿಟಿಡಿ ಹೇಳಿದೆ.

Read more Photos on
click me!

Recommended Stories