ವಿಶ್ವದ ಅತಿ ವೇಗದ ಮೊಬೈಲ್ ಇಂಟರ್ನೆಟ್ ಸೇವೆ ನೀಡುವ ಟಾಪ್ 8 ದೇಶಗಳ ಪಟ್ಟಿ ಇಲ್ಲಿದೆ. ಅಚ್ಚರಿ ಅಂದ್ರೆ, ಅಮೆರಿಕ, ಇರಾನ್, ಇಸ್ರೇಲ್, ರಷ್ಯಾ, ಚೀನಾ, ಭಾರತದಂತಹ ದೊಡ್ಡ ದೇಶಗಳು ಈ ಲಿಸ್ಟ್‌ನ ಟಾಪ್ ಸ್ಪಾಟ್‌ಗಳಲ್ಲಿಲ್ಲ.
ಯುಎಇ ವಿಶ್ವದಲ್ಲೇ ಅತಿ ವೇಗದ ಮೊಬೈಲ್ ಇಂಟರ್ನೆಟ್ ಹೊಂದಿದೆ. ಇಲ್ಲಿ ಸರಾಸರಿ 686.12 Mbps ವೇಗ ಲಭ್ಯವಿದೆ. ಅರೇಬಿಯನ್ ಪೆನಿನ್ಸುಲಾದ ಆಗ್ನೇಯ ಭಾಗದಲ್ಲಿರುವ ಈ ದೇಶವು ತನ್ನ ಆಧುನಿಕ ಗಗನಚುಂಬಿ ಕಟ್ಟಡಗಳಿಗೆ ಹೆಸರುವಾಸಿಯಾಗಿದೆ.
26
2. ಕತಾರ್
ಸೌದಿ ಅರೇಬಿಯಾದೊಂದಿಗೆ ಗಡಿ ಹಂಚಿಕೊಂಡಿರುವ ಕತಾರ್, ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇಲ್ಲಿ ಸರಾಸರಿ 593.34 Mbps ಇಂಟರ್ನೆಟ್ ವೇಗವಿದೆ. ದೋಹಾದ ಆಧುನಿಕ ಸ್ಕೈಲೈನ್‌ಗಳಿಗೆ ಈ ದೇಶ ಪ್ರಸಿದ್ಧವಾಗಿದೆ.
36
3. ಕುವೈತ್
ಸೌದಿ ಅರೇಬಿಯಾ ಮತ್ತು ಇರಾಕ್‌ನೊಂದಿಗೆ ಗಡಿ ಹಂಚಿಕೊಂಡಿರುವ ಕುವೈತ್, ವಿಶ್ವದ ಅತಿ ವೇಗದ ಮೊಬೈಲ್ ಇಂಟರ್ನೆಟ್ ದೇಶಗಳಲ್ಲಿ ಒಂದಾಗಿದೆ. ಇಲ್ಲಿ ಸರಾಸರಿ 399.83 Mbps ವೇಗ ದಾಖಲಾಗಿದೆ.
ಪರ್ಷಿಯನ್ ಗಲ್ಫ್‌ನಲ್ಲಿರುವ ದ್ವೀಪ ರಾಷ್ಟ್ರ ಬಹ್ರೇನ್, ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇಲ್ಲಿ ಸರಾಸರಿ 332.04 Mbps ಇಂಟರ್ನೆಟ್ ವೇಗವಿದ್ದು, ಉತ್ತಮ ಕನೆಕ್ಟಿವಿಟಿ ಹೊಂದಿದೆ.
56
5. ಬಲ್ಗೇರಿಯಾ
ಯುರೋಪಿಯನ್ ದೇಶವಾದ ಬಲ್ಗೇರಿಯಾದಲ್ಲಿ ಸರಾಸರಿ ಮೊಬೈಲ್ ಇಂಟರ್ನೆಟ್ ವೇಗ 277.97 Mbps ಆಗಿದೆ. Ookla ವರದಿ ಪ್ರಕಾರ, ಬ್ರೆಜಿಲ್ 6ನೇ, ದಕ್ಷಿಣ ಕೊರಿಯಾ 7ನೇ ಮತ್ತು ಬ್ರೂನಿ 8ನೇ ಸ್ಥಾನದಲ್ಲಿವೆ.
66
ಭಾರತದ ಸ್ಥಾನ?
Ookla ವರದಿ ಪ್ರಕಾರ, ಭಾರತವು 133.51 Mbps ಸರಾಸರಿ ಮೊಬೈಲ್ ಡೌನ್‌ಲೋಡ್ ವೇಗದೊಂದಿಗೆ ಜಾಗತಿಕವಾಗಿ 26ನೇ ಸ್ಥಾನದಲ್ಲಿದೆ. ಭಾರತ ತನ್ನ ಹಿಂದಿನ ಶ್ರೇಯಾಂಕದಿಂದ ಮೂರು ಸ್ಥಾನಗಳಷ್ಟು ಸುಧಾರಣೆ ಕಂಡಿದೆ. ಅಮೆರಿಕ 165.57 Mbps ವೇಗದೊಂದಿಗೆ 14ನೇ ಸ್ಥಾನದಲ್ಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ