IMD Heatwave Alert 2026: ಈ ಬಾರಿ ಹೋಳಿ ಹಬ್ಬಕ್ಕೂ ಮುನ್ನವೇ ಉತ್ತರ ಮತ್ತು ಮಧ್ಯ ಭಾರತದಲ್ಲಿ ಬೇಸಿಗೆಯ ತಾಪ ತೀವ್ರಗೊಂಡಿದೆ. ಆದರೆ, ಹಬ್ಬದ ಸಂಭ್ರಮದ ನಡುವೆಯೇ ಉತ್ತರ ಮತ್ತು ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆಯೂ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಬಾರಿ ಉತ್ತರ ಭಾರತದಲ್ಲಿ ಹೋಳಿ ಹಬ್ಬಕ್ಕೂ ಮುನ್ನವೇ ಬೇಸಿಗೆಯು ಭರ್ಜರಿಯಾಗಿ ಎಂಟ್ರಿ ಕೊಟ್ಟಿದೆ. ಹವಾಮಾನ ಇಲಾಖೆಯ (IMD) ವರದಿಯ ಪ್ರಕಾರ, ವಾಯುವ್ಯ ಮತ್ತು ಮಧ್ಯ ಭಾರತದ ಹಲವು ರಾಜ್ಯಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ 4 ರಿಂದ 7 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗಿದೆ. ಏಪ್ರಿಲ್‌ನಲ್ಲಿ ಇರಬೇಕಾದ ಬಿಸಿಲು ಮಾರ್ಚ್ ಆರಂಭದಲ್ಲೇ ಜನರ ಬೆವರಿಳಿಸುತ್ತಿದೆ.
25
ಮಳೆ ಮತ್ತು ಬಿರುಗಾಳಿಯ ಎಚ್ಚರಿಕೆ
ಹೋಳಿ ಹಬ್ಬಕ್ಕೆ 24 ಗಂಟೆಗಳ ಮೊದಲು ಹವಾಮಾನ ಇಲಾಖೆಯು ಸಿಹಿ ಸುದ್ದಿಯೊಂದನ್ನು ನೀಡಿದೆ. ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಮಾರ್ಚ್ 3 ರಂದು ಹಗುರ ಮಳೆಯಾಗುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೆ, ಅಸ್ಸಾಂ, ಮೇಘಾಲಯದಂತಹ ಈಶಾನ್ಯ ರಾಜ್ಯಗಳಲ್ಲಿ ಗುಡುಗು ಸಹಿತ ಮಳೆಯಾಗಬಹುದು. ವಿಶೇಷವೆಂದರೆ, ದಕ್ಷಿಣ ಭಾರತದ ಕೆಲವು ಭಾಗಗಳಲ್ಲೂ ಸ್ಥಳೀಯ ಹವಾಮಾನ ಬದಲಾವಣೆಯಿಂದಾಗಿ ಮಳೆಯ ಮುನ್ಸೂಚನೆ ಇದೆ.
35
ಪ್ರಮುಖ ನಗರಗಳಲ್ಲಿ ಹವಾಮಾನ ಹೇಗಿರಲಿದೆ?
ದೆಹಲಿ: ಹೋಳಿ ದಿನದಂದು (ಮಾರ್ಚ್ 4) ಆಕಾಶ ಸ್ವಚ್ಛವಾಗಿದ್ದು, ಮಧ್ಯಾಹ್ನ ತಾಪಮಾನ 31 ಡಿಗ್ರಿ ದಾಟಬಹುದು. ಉತ್ತರ ಪ್ರದೇಶ: ಲಕ್ನೋದಲ್ಲಿ ಸೆಖೆ ಹೆಚ್ಚಿರಲಿದ್ದು, ಗೋರಖ್‌ಪುರ, ಅಜಂಗಢ ಮತ್ತು ಮಿರ್ಜಾಪುರ ಜಿಲ್ಲೆಗಳಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ. ರಾಜಸ್ಥಾನ ಮತ್ತು ಮಧ್ಯಪ್ರದೇಶ: ಇಲ್ಲಿ ಮಳೆಯ ಸಾಧ್ಯತೆ ತೀರಾ ಕಡಿಮೆ. ಜೈಪುರ ಮತ್ತು ಭೋಪಾಲ್‌ನಲ್ಲಿ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ತಲುಪಲಿದ್ದು, ಬಿಸಿಲು ತೀವ್ರವಾಗಿರಲಿದೆ.
ಮುಂದಿನ 5 ದಿನಗಳಲ್ಲಿ ಬಯಲು ಪ್ರದೇಶಗಳಲ್ಲಿ ತಾಪಮಾನ ಇನ್ನೂ 2 ರಿಂದ 4 ಡಿಗ್ರಿ ಏರಿಕೆಯಾಗಲಿದೆ. ಮಾರ್ಚ್ 20 ರಿಂದ ಉತ್ತರ ಭಾರತದಲ್ಲಿ ಬಿಸಿಗಾಳಿ (Heatwave) ಬೀಸುವ ಸಾಧ್ಯತೆ ಇರುವುದರಿಂದ, ಜನರು ಹೆಚ್ಚಿನ ನೀರು ಕುಡಿಯಲು ಮತ್ತು ಅನಗತ್ಯವಾಗಿ ಬಿಸಿಲಿಗೆ ಹೋಗದಂತೆ ಜಾಗರೂಕರಾಗಿರಲು ಹವಾಮಾನ ಇಲಾಖೆ ಸಲಹೆ ನೀಡಿದೆ.
55
ಹಗುರವಾದ ತುಂತುರು ಮಳೆಯಾಗುವ ಸಾಧ್ಯತೆ
ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ (ಬೆಂಗಳೂರು, ಮೈಸೂರು, ಕೊಡಗು ಮತ್ತು ಹಾಸನ ಭಾಗಗಳಲ್ಲಿ) ಸ್ಥಳೀಯ ತೇವಾಂಶ ಮತ್ತು ಹವಾಮಾನ ಬದಲಾವಣೆಯಿಂದಾಗಿ ಸಂಜೆ ಅಥವಾ ರಾತ್ರಿಯ ವೇಳೆ ಹಗುರವಾದ ತುಂತುರು ಮಳೆಯಾಗುವ ಸಾಧ್ಯತೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ