ಕೇಂದ್ರ ಸರ್ಕಾರವು ಸ್ಪೀಡ್ ಪೋಸ್ಟ್ ಸೇವೆಯನ್ನು 24 ರಿಂದ 48 ಗಂಟೆಗಳ ಒಳಗೆ ತಲುಪಿಸುವಂತೆ ಸುಧಾರಿಸಲು ಮುಂದಾಗಿದೆ. ಇದೇ ವೇಳೆ, ಭಾರತೀಯ ರಿಸರ್ವ್ ಬ್ಯಾಂಕ್‌ನ ಚಿನ್ನದ ಸಂಗ್ರಹವು ಮೊದಲ ಬಾರಿಗೆ ₹88 ಲಕ್ಷ ಕೋಟಿ ಮೌಲ್ಯವನ್ನು ದಾಟಿದೆ.
ನವದೆಹಲಿ: ಭಾರತೀಯ ಅಂಚೆ ಇಲಾಖೆಯಲ್ಲಿ ಒದಗಿಸಲಾಗುತ್ತಿರುವ ಸ್ಪೀಡ್ ಪೋಸ್ಟ್ ಸೇವೆಗೆ ವೇಗದ ಸ್ಪರ್ಶ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಮುಂದಿನ ಜನವರಿಯಿಂದ 24 ಗಂಟೆ ಮತ್ತು 48 ಗಂಟೆಯೊಳಗೆ ಸ್ಪೀಡ್ ಪೋಸ್ಟ್ ತಲುಪುವಂತೆ ಸೇವೆಯನ್ನು ರೂಪಿಸಲಾಗುತ್ತದೆ ಎಂದು ಕೇಂದ್ರ ಸಂಪರ್ಕ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ.
25
ಟ್ರ್ಯಾಕಿಂಗ್ ವ್ಯವಸ್ಥೆಗೆ ಚಾಲನೆ
ಈ ಬಗ್ಗೆ ಮಾತನಾಡಿದ ಅವರು, ‘ಈಗಾಗಲೇ ಪ್ರಾಯೋಗಿಕವಾಗಿ ಈ ಸೇವೆ ಜಾರಿಯಲ್ಲಿದೆ. ಮೆಟ್ರೋ ನಗರಗಳಲ್ಲಿ 2 ದಿನಗಳಲ್ಲಿ ಸ್ಪೀಡ್ ಪೋಸ್ಟ್ ಡೆಲಿವರಿಯಾಗುತ್ತಿದ್ದು, ಜನವರಿಯಿಂದ ಎಲ್ಲಾ ಕಡೆ 1-2 ದಿನಗಳಲ್ಲಿ ಗ್ಯಾರಂಟಿ ಡೆಲಿವರಿ ಮಾಡಲಾಗುತ್ತದೆ’ ಎಂದು ತಿಳಿಸಿದರು. ಇದರ ಜೊತೆಗೆ ಅಂತಾರಾಷ್ಟ್ರೀಯ ಪೋಸ್ಟ್‌ಗಳಿಗೆ ಸುಧಾರಿತ ಟ್ರ್ಯಾಕಿಂಗ್ ವ್ಯವಸ್ಥೆಗೆ ಚಾಲನೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು
35
₹88 ಲಕ್ಷ ಕೋಟಿ ದಾಟಿದ ಆರ್‌ಬಿಐ ಚಿನ್ನದ ಸಂಗ್ರಹ
ಭಾರತದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಚಿನ್ನದ ಸಂಗ್ರಹವು ಮಹತ್ವದ ಮೈಲುಗಲ್ಲು ತಲುಪಿದ್ದು, ಇದೇ ಮೊದಲ ಬಾರಿ 100 ಶತಕೋಟಿ ಡಾಲರ್ (ಸುಮಾರು 88 ಲಕ್ಷ ಕೋಟಿ ರು.) ಮೌಲ್ಯ ತಲುಪಿದೆ ಎಂದು ಆರ್‌ಬಿಐ ದತ್ತಾಂಶಗಳು ತಿಳಿಸಿವೆ.
ಅ.10ಕ್ಕೆ ಕೊನೆಗೊಂಡ ವಾರದಲ್ಲಿ ಆರ್‌ಬಿಐ ಸಂಗ್ರಹದಲ್ಲಿರುವ ಚಿನ್ನದ ಮೌಲ್ಯ 31650 ಕೋಟಿ ರು.ನಷ್ಟು ಹೆಚ್ಚಾಗಿ 9 ಲಕ್ಷ ಕೋಟಿ ರು.ಗೆ ತಲುಪಿದೆ. ಇದರೊಂದಿಗೆ ಭಾರತದ ಒಟ್ಟು ಮೀಸಲು ಸಂಗ್ರಹದಲ್ಲಿ ಚಿನ್ನದ ಪಾಲು ಶೇ.14.7ಕ್ಕೆ ಏರಿದೆ. ಇದೇ ಅವಧಿಯಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹ 64 ಲಕ್ಷ ಕೋಟಿ ರು.ನಷ್ಟು ಇತ್ತು. 2024ರಲ್ಲಿ ಆರ್‌ಬಿಐ ಒಟ್ಟಾರೆ 50 ಟನ್ ಚಿನ್ನ ಖರೀದಿ ಮಾಡಿತ್ತು.
ಈ ವರ್ಷದ ಜನವರಿಯಿಂದ ಸೆಪ್ಟೆಂಬರ್ ಅವಧಿಯಲ್ಲಿ ಕೇವಲ 4 ಟನ್ ಚಿನ್ನ ಖರೀದಿ ಮಾಡಿದೆ. ಆದರೆ ಕಳೆದ ವಾರದಲ್ಲಿ ಚಿನ್ನದ ಬೆಲೆ ಭಾರೀ ಏರಿಕೆ ಕಂಡು ಒಟ್ಟಾರೆ ಚಿನ್ನದ ಮೌಲ್ಯ 31650 ಕೋಟಿ ರು.ನಷ್ಟು ಏರಿಕೆಯಾಗಿ 9 ಲಕ್ಷ ಕೋಟಿ ರು. ಗಡಿ ತಲುಪಿದೆ. ಜೊತೆಗೆ ವರ್ಷ ಚಿನ್ನದ ಬೆಲೆಯಲ್ಲಿ ಶೇ.65ರಷ್ಟು ಏರಿಕೆಯಾಗಿರುವುದರಿಂದ ಆರ್‌ಬಿಐನ ಚಿನ್ನದ ಮೌಲ್ಯದಲ್ಲಿ ಏರಿಕೆಯಾಗಿದೆ.