ಕುಂಭಮೇಳದ ವೈರಲ್ ಹುಡುಗಿ ಮೋನಾಲಿಸಾ, ಮುಸ್ಲಿಂ ನಟ ಫರ್ಮಾನ್ ಖಾನ್ ಅವರನ್ನು ಕೇರಳದ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದಾರೆ. ಶೂಟಿಂಗ್ ಸೆಟ್‌ನಲ್ಲಿ ಭೇಟಿಯಾದ ಇವರ ಪ್ರೇಮಕಥೆಯಲ್ಲಿ, ಮೋನಾಲಿಸಾ ಅವರೇ ಮೊದಲು ಪ್ರಪೋಸ್ ಮಾಡಿ ಮದುವೆಗೆ ಒತ್ತಾಯಿಸಿದ್ದರು ಎಂದು ಅವರ ಪತಿ ಬಹಿರಂಗಪಡಿಸಿದ್ದಾರೆ.
ಅದಕ್ಕೆ ಕಾರಣ, ಮುಸ್ಲಿಂ ಯುವಕನನ್ನು ಮದುವೆಯಾಗಿದ್ದು, ಜೊತೆಗೆ ಅದರಲ್ಲಿಯೂ ಕೇರಳದಲ್ಲಿ ಆಗಿದ್ದು. ಇದೀಗ ಕೇರಳ ಸ್ಟೋರಿ, ಲವ್ ಜಿಹಾದ್ ಎಂದೆಲ್ಲಾ ಸಕತ್ ಸದ್ದು ಮಾಡುತ್ತಿರುವ ಹಿನ್ನೆಲೆಯಲ್ಲಿ, ಈ ಮದುವೆಯನ್ನೂ ಅದಕ್ಕೆ ಲಿಂಕ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿರುವವರೇ ಹೆಚ್ಚು.
36
ಶೂಟಿಂಗ್ ಸೆಟ್‌ನಲ್ಲಿ ಲವ್
ಆದರೆ, ಅಸಲಿಗೆ ಆಗಿದ್ದೇನು? ಇವರ ಲವ್ಸ್ಟೋರಿ ಫೇಸ್ಬುಕ್ನಲ್ಲಿ ಶುರುವಾಗಿದ್ದು ಎನ್ನಲಾಗಿತ್ತು. ಆದರೆ ಅಸಲಿಗೆ ಲವ್ ಶುರುವಾಗಿದ್ದು ಎಲ್ಲಿ? ಯಾರು ಮೊದಲು ಪ್ರಪೋಸ್ ಮಾಡಿದ್ದು ಎಂಬ ಬಗ್ಗೆ ಮದುವೆಯಾದ ಮೇಲೆ ಮೋನಾಲಿಸಾ ಅವರ ಪತಿ ಫರ್ಮಾನ್ ಖಾನ್ (Farman Khan) ಮಾಧ್ಯಮದವರ ಮುಂದೆ ರಿವೀಲ್ ಮಾಡಿದ್ದಾರೆ.
ನಾವಿಬ್ಬರೂ ಒಂದು ಶೂಟಿಂಗ್ ಸೆಟ್‌ನಲ್ಲಿ ಭೇಟಿಯಾಗಿದ್ವಿ. ನಾನೂ ಕೂಡ ಒಬ್ಬ ನಟ. ಇಬ್ಬರೂ ಒಂದೇ ಪ್ರಾಜೆಕ್ಟ್ನಲ್ಲಿ ಕೆಲಸ ಮಾಡುತ್ತಿದ್ವಿ. ಹಾಗೇ ಪರಿಚಯವಾಯ್ತು ಎಂದು ತಮ್ಮ ಮೊದಲ ಭೇಟಿಯ ಬಗ್ಗೆ ಫರ್ಮಾನ್ ಖಾನ್ ತಿಳಿಸಿದ್ದಾರೆ.
56
ಮೊದಲ ಪ್ರಪೋಸ್
ಇವಳಿಗೆ ನಾನು ಇಷ್ಟವಾದೆ. ಲವ್ ಮಾಡಿದ್ವಿ. ಅವಳೇ ಪ್ರಪೋಸ್ ಮಾಡಿದ್ಲು. ನನಗೂ ಅವಳು ಇಷ್ಟ ಆಗಿದ್ದಳು. ಆದರೆ ಇಬ್ಬರದ್ದೂ ಬೇರೆ ಧರ್ಮ ಆಗಿದ್ದ ಕಾರಣ ನಾನು ಮದುವೆಯಾಗುವುದು ಬೇಡ ಎಂದೆ. ಆದರೆ ಅವಳು ಏನೂ ಆಗಲ್ಲ, ಮದುವೆಯಾಗೋಣ ಎಂದಳು. ಅವಳು ಒತ್ತಾಯ ಮಾಡಿದ್ದಕ್ಕೆ ನಾನು ಒಪ್ಪಿಕೊಂಡೆ ಎಂದಿದ್ದಾರೆ ಫರ್ಮಾನ್ ಖಾನ್.
66
ಕೇರಳದಲ್ಲಿ ಮದ್ವೆ ಯಾಕೆ?
ಕೇರಳ ತುಂಬಾ ಸುಂದರವಾಗಿದೆ, ಇಲ್ಲಿಯ ಜನರು ತುಂಬಾ ಒಳ್ಳೆಯವರು. ಅದಕ್ಕಾಗಿ ಇಲ್ಲಿಯೇ ದೇವಸ್ಥಾನದಲ್ಲಿ ಮದುವೆಯಾದೆವು. ಇವಳ ಮನೆಯವರ ವಿರೋಧ ಇದ್ದರಿಂದ ಪೊಲೀಸ್ ರಕ್ಷಣೆ ಪಡೆದೆವು. ಕೇರಳದ ಜನರು ತುಂಬಾ ಸಪೋರ್ಟ್ ಮಾಡಿದ್ರು ಎಂದಿದ್ದಾರೆ ಫರ್ಮಾನ್. ಮುಂದೆ ಏನಾಗುತ್ತೋ ನೋಡೋಣ. ಸದ್ಯ ಅಂತೂ ಕೇರಳದಲ್ಲಿಯೇ ಇರುವ ಮನಸ್ಸು ಮಾಡಿದ್ದೇವೆ. ಮದುವೆ ರಿಜಿಸ್ಟ್ರೇಷನ್ ಕೂಡ ಆಗಿದೆ ಎಂದು ಮೊಬೈಲ್ನಲ್ಲಿ ಸರ್ಟಿಫಿಕೇಟ್ ತೋರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ