ಗ್ಯಾಸ್ ಕೊರತೆಯಿಂದ ಉದ್ಭವಿಸಿದ ಲಾಕ್‌ಡೌನ್ ರೀತಿ ಪರಿಸ್ಥಿತಿ, ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಯುದ್ಧ ತೀವ್ರಗೊಳ್ಳುತ್ತಿದೆ, ಎರಡು ಹಡಗಿನ ಮೇಲೆ ದಾಳಿ ನಡುವೆ ಭಾರತಕ್ಕೆ ಇರಾನ್‌ನಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಆದರೂ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದೆ.
ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧದದಲ್ಲಿ ಹಲವು ದೇಶಗಳು ಬಡವಾಗಿದೆ.ಒಂದು ಲೀಟರ್ ತೈಲ ಹೊರಗಡೆ ಬಿಡಲ್ಲ ಎಂದಿರುವ ಇರಾನ್, ತೈಲ ಟ್ಯಾಂಕರ್ ಗುರಿಯಾಗಿಸಿ ದಾಳಿ ನಡೆಸುತ್ತಿದೆ. ಹೀಗೆ ಹೊರ್ಮುಜ್ ಜಲಸಂಧಿಯಿಂದ ಸಾಗುತ್ತಿದ್ದ 2 ತೈಲ ಟ್ಯಾಂಕರ್ ಹಡಗಿನ ಮೇಲೆ ಇರಾನ್ ದಾಳಿ ನಡೆಸಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸಿಬ್ಬಂದಿ ಮೃತಪಟ್ಟಿದ್ದಾನೆ. ಈ ಎಲ್ಲಾ ಬೆಳವಣಿಗೆ ನಡುವೆ ಭಾರತದಲ್ಲಿ ಗ್ಯಾಸ್ ಕೊರತೆ ತೀವ್ರಗೊಳ್ಳುತ್ತಿದೆ. ಹೊಟೆಲ್ ಮುಚ್ಚುತ್ತಿದೆ. ಇದರ ಬೆನ್ನಲ್ಲೇ ಸಮಸ್ಯೆ ತೀವ್ರಗೊಳ್ಳುತ್ತಿದೆ. ಇದೀಗ ಕೋವಿಡ್‌ಗಿಂತಲೂ ಭೀಕರ ಪರಿಸ್ಥಿತಿ ಎದುರಾಗುವ ಆತಂಕ ಶುರುವಾಗಿದೆ.
26
ಲಾಕ್‌ಡೌನ್ ಪರಿಸ್ಥಿತಿ ನಿರ್ಮಾಣ
ಎಲ್‌ಪಿಜಿ ಗ್ಯಾಸ್ ಸಮಸ್ಯೆ ತೀವ್ರಗೊಳ್ಳುತ್ತಿದೆ. ಬೆಂಗಳೂರು ಸೇರಿದಂತೆ ಹಲವು ನಗರಗಳು, ಪಟ್ಟಣಗಳಲ್ಲಿ ಹೊಟೆಲ್ ಸೇರಿದಂತೆ ಆಹಾರ ಉತ್ಪನ್ನ ಉದ್ಯಮಗಳು ಮುಚ್ಚುತ್ತಿದೆ. ಕೋವಿಡ್ ಲಾಕ್‌ಡೌನ್ ವೇಳೆ ಅಗತ್ಯ ವಸ್ತುಗಳಿಗೆ ಯಾವುದೇ ಕೊರತೆ ಇರಲಿಲ್ಲ. ಕೇವಲ ಆರೋಗ್ಯ ಹಾಗೂ ಸಾವು ನೋವಿನ ಭೀತಿ ಎದುರಾಗಿತ್ತು. ಇದೀಗ ಆಹಾರ ಸೇರಿದಂತೆ ಮೂಲಭೂತ ವಸ್ತುಗಳ ಕೊರತೆ ಎದುರಾಗುತ್ತಿದೆ. ಕೋವಿಡ್ ಲಾಕ್‌ಡೌನ್ ರೀತಿಯ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
36
ಉದ್ಯೋಗ ಕಳೆದುಕೊಳ್ಳುವ ಭೀತಿ
ಎಲ್‌ಪಿಜಿ ಗ್ಯಾಸ್ ಕೊರತೆಯಿಂದ ಹಲವರು ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಆನ್‌ಲೈನ್ ಮೂಲಕ ಆಹಾರ ವಿತರಣೆ ಮಾಡುವ ಡೆಲಿವರಿ ಎಜೆಂಟ್, ಬೀದಿ ಬದಿಯಲ್ಲಿ ಆಹಾರ, ಖಾದ್ಯಗಳ ತಯಾರಿಸಿ ಮಾರಾಟ ಮಾಡುತ್ತಾ ಬದುಕು ಸಾಗಿಸುತ್ತಿರುವ ಮಂದಿಗೆಯ ಉದ್ಯೋಗಕ್ಕೆ ಅಪಾಯ ಎದುರಾಗಿದೆ. ಗ್ಯಾಸ್ ಕೊರತೆಯಿಂದ ಆಹಾರ ಉತ್ಪನ್ನಗಳು ತಯಾರಾಗುತ್ತಿಲ್ಲ. ವಿತರಣೆಯಾಗುತ್ತಿಲ್ಲ. ಬೀದಿ ಬದಿಯಲ್ಲಿನ ಆಹಾರ ತಯಾರಿಸು ವ್ಯಾಪಾರಿಗಳ ಗ್ಯಾಸ್ ಇಲ್ಲದೆ ಪರದಾಡುತ್ತಿದ್ದಾರೆ.
ಎಲ್‌ಪಿಜಿ ಗ್ಯಾಸ್ ಕೊರತೆಯಿಂದ ಫುಡ್ ಬ್ಯೂಸಿನೆಸ್ ಮೇಲೆ ತೀವ್ರ ಹೊಡೆತ ಬಿದ್ದಿದೆ. ಸಣ್ಣ, ಮಧ್ಯಮ ಹಾಗೂ ದೊಡ್ಡ ಮಟ್ಟದ ಫುಡ್ ಬ್ಯೂಸಿನೆಸ್ ಮುಚ್ಚುವ ಭೀತಿಯಲ್ಲಿದೆ. ಇತ್ತ ಯುದ್ಧದ ಪರಿಸ್ಥಿತಿ ಸದ್ಯಕ್ಕೆ ತಿಳಿಗೊಳ್ಳುವ ಸಾಧ್ಯಗಳು ಕಾಣಿಸುತ್ತಿಲ್ಲ. ಪರಿಸ್ಥಿತಿ ಸುಧಾರಿಸಲು ಭಾರತ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದರೂ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತಿದೆ.
56
ಶೇಕಡಾ 50 ರಿಂ 60 ಕುಸಿದ ಡೆಲಿವರಿ ಕೆಲಸ
ಆನ್‌ಲೈನ್ ಮೂಲಕ ಫುಡ್ ಆರ್ಡರ್ ಹಾಗೂ ವಿತರಣೆಯಲ್ಲಿ ಭಾರಿ ಕುಸಿತ ಕಂಡಿದೆ. ಹಲವು ಆಹಾರ ಉತ್ಪನ್ನಗಳು ಲಭ್ಯವಿಲ್ಲ. ಹಲವು ಹೊಟೆಲ್‌ಗಳು ಮುಚ್ಚಿದೆ. ಹೀಗಾಗಿ ಜನರಿಗೆ ಆರ್ಡರ್ ಮಾಡಲು ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮ ಡೆಲಿವರಿ ಎಜೆಂಟ್‌ಗಳು ಕೆಲಸ ಶೇಕಡಾ 50 ರಿಂದ 60ಕ್ಕೆ ಕುಸಿತ ಕಂಡಿದೆ.
66
ಆದಾಯ ಕಳೆದುಕೊಂಡಿದ್ದೇವೆ
ಹಲವು ಬೀದಿ ಬದಿ ವ್ಯಾಪಾರಿಗಳು ಕೋವಿಡ್ ಲಾಕ್‌ಡೌನ್ ಪರಿಸ್ಥಿತಿ ಎದುರಾಗುತ್ತಿದೆ. ಅಂದು ಇದೇ ರೀತಿ ಆರ್ಥಿಕ ಸಂಕಷ್ಟ ಅನುಭವಿಸಿದ್ದೆವು. ಸಾಮಾಜಿಕ ಅಂತರ, ಲಾಕ್‌ಡೌನ್ ಸೇರಿದಂತೆ ಹಲವು ಕಾರಣಗಳಿಂದ ಉದ್ಯೋಗ, ಆದಾಯ ಕಳೆದುಕೊಂಡಿದ್ದೆವು. ಇದೀಗ ಗ್ಯಾಸ್ ಕೊರತೆಯಿಂದ ಅದೇ ಸಮಸ್ಯೆ ಎದುರಿಸುತ್ತಿದ್ದೇವೆ. ಕಾಳಸಂತೆಯಿಂದ ದುಬಾರಿ ಬೆಲೆಗೆ ಗ್ಯಾಸ್ ಖರೀದಿಸಿ ನಾವು ಆದಾಯ ಪಡೆಯಲು ಸಾಧ್ಯವಿಲ್ಲ ಎಂದು ದೆಹಲಿಯ ಬೀದಿ ಬದಿ ವ್ಯಾಪಾರಿಗಳು ಹೇಳಿದ್ದಾರೆ.
ಆದಾಯ ಕಳೆದುಕೊಂಡಿದ್ದೇವೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ