ಭಾರತ ಡ್ರಗ್ಸ್ ರೂಲ್ಸ್‌ನಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಇನ್ನು ಮುಂದೆ ನೀವು ನೇರವಾಗಿ ಮೆಡಿಕಲ್‌ಗೆ ಹೋಗಿ ಶೀತ ಕೆಮ್ಮು ಸಿರಪ್ ಖರೀದಿಸಲು ಸಾಧ್ಯವಿಲ್ಲ. ಹೊಸ ನಿಯಮದಲ್ಲಿ ಏನಿದೆ? ಔಷಧಿ ಖರೀದಿಸುವ ವಿಧಾನ ಹೇಗೆ?
ಕೋವಿಡ್ ಬಳಿಕ ಭಾರತದ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗಿದೆ. ಹಲವು ನಿಯಮಗಳನ್ನು ಬಿಗಿಗೊಳಿಸಲಾಗಿದೆ. ಇದೀಗ ಭಾರತದ ಡ್ರಗ್ ನಿಯಮದಲ್ಲಿ ಮತ್ತೊಂದು ಮಹತ್ತರ ಬದಲಾವಣೆ ಮಾಡಲಾಗಿದೆ. ಹೊಸ ನಿಯಮದ ಪ್ರಕಾರ, ರೋಗಿಗಳು ಅಥವಾ ಇನ್ಯಾರೇ ನೇರವಾಗಿ ಮೆಡಿಕಲ್‌ನಿಂದ ಶೀತ, ಕೆಮ್ಮು, ಜ್ವರದ ಸಿರಪ್ ಖರೀದಿಸಲು ಸಾಧ್ಯವಿಲ್ಲ. ಇದಕ್ಕೆ ಹೊಸ ನಿಯಮ ತರಲಾಗಿದೆ.
26
ಔಷಧಿ ಖರೀದಿ ಹೇಗೆ?
1945ರ ಡ್ರಗ್ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಇದೀಗ ವೈದ್ಯರ ಪ್ರಿಸ್ಕ್ರಿಪ್ಶನ್ ಇಲ್ಲದೆ ಶೀತ ಕೆಮ್ಮು ಸಿರಪ್ ಮೆಡಿಕಲ್‌ನಿಂದ ಖರೀದಿಸಲು ಸಾಧ್ಯವಿಲ್ಲ. ವೈದ್ಯರ ಪ್ರಿಸ್ಕ್ರಿಪ್ಶನ್ ಇಲ್ಲದೆ ಯಾರಿಗಾದರೂ ಶೀತ, ಕೆಮ್ಮು, ಜ್ವರ ಔಷಧಿ ನೀಡಿದರೆ ಮೆಡಿಕಲ್ ಮಾಲೀಕನು ನಿಯಮ ಉಲ್ಲಂಘಿಸಿದಂತೆ. ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.
36
ವೈದ್ಯರ ಪ್ರಿಸ್ಕ್ರಿಪ್ಶನ್ ಇದ್ದರೆ ಮಾತ್ರ
ಶೀತ, ಕೆಮ್ಮು ಆಗಿದೆ. ಸಣ್ಣ ಪ್ರಮಾಣದಲ್ಲಿದೆ. ಪ್ರತಿ ಸಲ ಶೀತ ಕೆಮ್ಮು ಆದಾಗಾ ಮೆಡಿಕಲ್ ಶಾಪ್‌ಗೆ ತೆರಳಿ ಸಿರಪ್ ಖರೀದಿಸಿ ಸೇವಿಸಿದರೆ ಸಾಕು ಎಂದು ಹಲವರು ವೈದ್ಯರ ಬಳಿ ಹೋಗುವುದಿಲ್ಲ. ಹಲವರು ಸಿರಪ್ ಪಡೆದು ಬೇಗನೆ ಗುಣಮುಖರಾದ ಉದಾಹರಣೆಗಳೂ ಇದೆ. ಇನ್ನು ಸಾಧ್ಯವಿಲ್ಲ. ಶೀತ, ಕೆಮ್ಮು ಸಿರಪ್ ಖರೀದಿಗೆ ವೈದ್ಯರ ಪ್ರಿಸ್ಕ್ರಿಪ್ಶನ್ ನೀಡಿದರೆ ಮಾತ್ರ ಖರೀದಿಸಲು ಸಾಧ್ಯ.
ಮಧ್ಯ ಪ್ರದೇಶ ಹಾಗೂ ರಾಜಸ್ತಾನದಲ್ಲಿ ಸಿರಪ್ ಸೇವಿಸಿ ಹಲವು ಮಕ್ಕಳು ಮೃತಪಟ್ಟ ಘಟನೆ ಭಾರಿ ಕೋಲಾಹಲ ಸೃಷ್ಟಿಯಾಗಿತ್ತು. ಸಿರಪ್ ಹಲವು ಮಕ್ಕಳನ್ನು ಬಲಿಪಡೆದ ಪ್ರಕರಣದಿಂದ ಅಲರ್ಟ್ ಆದ ಕೇಂದ್ರ ಸರ್ಕಾರ ಇದೀಗ ಡ್ರಗ್ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ.
56
ಸಿರಪ್ ಉತ್ಪಾದನೆ ನಿಯಮ ಕಠಿಣ
ಇತ್ತ ಸಿರಪ್ ಸೇರಿದಂತೆ ಔಷಧಿ ಉತ್ಪಾದಿಸುವ ಕಂಪನಿಗಳು, ಸಂಸ್ಥೆಗಳ ನಿಯಮ ಕಠಿಣ ಮಾಡಲಾಗಿದೆ. ಯಾವುದೇ ಸಿರಪ್ ಉತ್ಪಾದನೆ ಮಾಡಬೇಕಿದ್ದರೂ, ಹೊಸ ನಿಯಮದಂತೆ ಆಗಬೇಕು. ಈ ಮೂಲಕ ಕಂಪನಿಗಳಿಗೂ ಕಠಿಣ ನಿಯಮ ಜಾರಿಗೊಶಿಸಿ ಹದ್ದಿನ ಕಣ್ಣಿನಡಲು ಮುಂದಾಗಿದೆ.
66
ಭಾರತದ ಜನಪ್ರಿಯ ಕಾಫ್ ಸಿರಪ್
ಭಾರತದಲ್ಲಿ ಹಲವು ಕಾಫ್ ಸಿರಪ್ ಅತ್ಯಂತ ಜನಪ್ರಿಯವಾಗಿದೆ. ಅದರಲ್ಲೂ ಬೆನೆಡ್ರಿಲ್, ಗ್ಲೈಕೋಡಿನ್, ಝೆಡೆಕ್ಸ್ , ಕಾಫ್ಸಿಲ್, ಹಿಮಾಲಯ ಕಾಫ್ಲೆಟ್, ಡಾಬೂರ್ ಹೊನಿಟಸ್ ಸೇರಿದಂತೆ ಹಲವು ಕಾಫ್ ಸಿರಪ್ ಅತ್ಯಂತ ಜನಪ್ರಿಯವಾಗಿದೆ. ಇದೀಗ ಯಾವುದೇ ಕಾಫ್ ಸಿರಪ್ ಖರೀದಿಗೆ ವೈದ್ಯರ ಪ್ರಿಸ್ಕ್ರಿಪ್ಶನ್ ಅಗತ್ಯವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ