ತಿರುಪತಿ ತಿಮ್ಮಪ್ಪನಿಗೆ ₹160 ಕೋಟಿ ಮೌಲ್ಯದ 121 ಕೆಜಿ ಚಿನ್ನ ದೇಣಿಗೆ! ಇತಿಹಾಸದಲ್ಲೇ ಭಕ್ತರೊಬ್ಬರು ನೀಡಿದ ಅತಿದೊಡ್ಡ ಕಾಣಿಕೆ!

Ravi Janekal   | ANI
Published : Nov 22, 2026, 06:41 AM IST

ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿಗೆ ಭಕ್ತರೊಬ್ಬರು ನ.26ರಂದು 150 ರಿಂದ 160 ಕೋಟಿ ರು. ಮೌಲ್ಯದ 121 ಕೆಜಿ ಚಿನ್ನಾಭರಣಗಳನ್ನು ಕಾಣಿಕೆಯಾಗಿ ಅರ್ಪಿಸಲಿದ್ದಾರೆ. ತಿರುಮಲ ದೇಗುಲದ ಇತಿಹಾಸದಲ್ಲೇ ವೈಯಕ್ತಿಕ ಭಕ್ತರೊಬ್ಬರು ನೀಡುತ್ತಿರುವ ಅತಿದೊಡ್ಡ ಕಾಣಿಕೆ ಇದಾಗಲಿದೆ.

PREV
14
ತಿರುಪತಿ ತಿಮ್ಮಪ್ಪನಿಗೆ 121 ಕೆಜಿ ಚಿನ್ನ ದೇಣಿಗೆ

ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿಗೆ ಭಕ್ತರೊಬ್ಬರು ನ.26ರಂದು 150 ರಿಂದ 160 ಕೋಟಿ ರು. ಮೌಲ್ಯದ 121 ಕೆಜಿ ಚಿನ್ನಾಭರಣಗಳನ್ನು ಕಾಣಿಕೆಯಾಗಿ ಅರ್ಪಿಸಲಿದ್ದಾರೆ. ತಿರುಮಲ ದೇಗುಲದ ಇತಿಹಾಸದಲ್ಲೇ ವೈಯಕ್ತಿಕ ಭಕ್ತರೊಬ್ಬರು ನೀಡುತ್ತಿರುವ ಅತಿದೊಡ್ಡ ಕಾಣಿಕೆ ಇದಾಗಲಿದೆ.

24
ತಿರುಪತಿ ತಿಮ್ಮಪ್ಪನಿಗೆ 121 ಕೆಜಿ ತೂಕದ ಚಿನ್ನದ ಕಾಣಿಕೆ!

ಒಟ್ಟು 121 ಕೆಜಿ ತೂಕದ ಚಿನ್ನವನ್ನು 9 ಸೆಟ್‌ಗಳಲ್ಲಿ 45 ವಿವಿಧ ಆಭರಣಗಳ ರೂಪದಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ಚಿನ್ನಾಭರಣಗಳ ಒಟ್ಟು ಮೌಲ್ಯ ಸುಮಾರು ₹150 ಕೋಟಿಯಿಂದ ₹160 ಕೋಟಿ ಎಂದು ಅಂದಾಜಿಸಲಾಗಿದೆ.

34
ಯಾವಾಗ ಚಿನ್ನದ ಕಾಣಿಕೆ ದಾನ?

ದಾನಿಯು ಈಗಾಗಲೇ ಟಿಟಿಡಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಎಲ್ಲಾ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ್ದು, ನ;26 ರಂದು ದೇವಸ್ಥಾನದಲ್ಲಿ ಅಧಿಕೃತವಾಗಿ ಈ ಆಭರಣಗಳನ್ನು ಹಸ್ತಾಂತರಿಸಲಿದ್ದಾರೆ ಎಂದು ದೇಗುಲದ ಅಧಿಕಾರಿಗಳು ಹೇಳಿದ್ದಾರೆ.

44
ತಿರುಪತಿ ತಿಮ್ಮಪ್ಪನಿಗೆ ಕೆಜಿಗಟ್ಟಲೇ ಬಂಗಾರದ ಕಾಣಿಕೆ!

ಈ ಹಿಂದೆ 2025ರ ಆಗಸ್ಟ್‌ನಲ್ಲಿ ಉದ್ಯಮಿಯೊಬ್ಬರು ತಮ್ಮ ಕಂಪನಿಯ ಷೇರು ಮಾರಾಟದ ಯಶಸ್ಸಿನ ಹಿನ್ನೆಲೆಯಲ್ಲಿ ತಿಮ್ಮಪ್ಪನಿಗೆ 121 ಕೆಜಿ ಚಿನ್ನ ನೀಡುವುದಾಗಿ ಹರಕೆ ಹೊತ್ತಿದ್ದರು. ಆ ಆಭರಣಗಳ ತಯಾರಿಕೆ ಪೂರ್ಣಗೊಂಡಿದ್ದು, ಈಗ ಅಧಿಕೃತವಾಗಿ ಸಮರ್ಪಣೆಯಾಗುತ್ತಿದೆ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories