ಕರ್ನಾಟಕದ ದಾನಿಯಿಂದ ಅಯೋಧ್ಯೆಗೆ 30 ಕೋಟಿ ರೂ. ವಜ್ರಖಚಿತ ರಾಮನ ವಿಗ್ರಹ: ಯಾರಿವರು? ಏನಿದರ ವಿಶೇಷತೆ?

Published : Dec 24, 2025, 01:22 PM IST

ಅಯೋಧ್ಯೆಯ ರಾಮ ಮಂದಿರಕ್ಕೆ ಕರ್ನಾಟಕದಿಂದ ಮತ್ತೊಂದು ಭವ್ಯ ಕೊಡುಗೆ ಬಂದಿದೆ. ಅನಾಮಧೇಯ ಭಕ್ತರೊಬ್ಬರು ದಾನ ಮಾಡಿದ 10 ಅಡಿ ಎತ್ತರದ, ಚಿನ್ನದ ವರ್ಣದ, ರತ್ನಖಚಿತ ಶ್ರೀರಾಮನ ವಿಗ್ರಹವು ದೇವಾಲಯದ ಆವರಣದಲ್ಲಿ ಶೀಘ್ರದಲ್ಲೇ ಪ್ರತಿಷ್ಠಾಪನೆಯಾಗಲಿದೆ.

PREV
16
500 ವರ್ಷಗಳ ಇತಿಹಾಸ

ಸುಮಾರು 500 ವರ್ಷಗಳ ಬಳಿಕ ಅಯೋಧ್ಯೆಯಲ್ಲಿ ರಾಮಲಲ್ಲಾ ಭವ್ಯ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಿದ್ದಾನೆ. ರಾಮಲಲ್ಲಾ ದರ್ಶನ ಮಾಡಿ ಇದಾಗಲೇ ಕೋಟ್ಯಂತರ ಮಂದಿ ಧನ್ಯರಾಗಿದ್ದಾರೆ. ಈಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಧರ್ಮಧ್ವಜದ ಸ್ಥಾಪನೆಯನ್ನೂ ನೆರವೇರಿಸಿದ್ದಾರೆ. ಅಯೋಧ್ಯೆಯ ರಾಮನಾಗಿ ಮೈಸೂರಿನ ಶಿಲ್ಪಿ ಅರುಣ್​ ಯೋಗಿರಾಜ್​ ಅವರಿಂದ ಕೆತ್ತಲ್ಪಟ್ಟ ಮೂರ್ತಿ ವಿರಾಜಮಾನವಾಗಿರುವ ಬೆನ್ನಲ್ಲೇ ಇದೀಗ ಕರ್ನಾಟಕದ ಇನ್ನೊಂದು ಶ್ರೀರಾಮಚಂದ್ರನ ಮೂರ್ತಿ ಅಯೋಧ್ಯೆಯಲ್ಲಿ ವಿರಾಜಮಾನವಾಗಲಿದ್ದಾನೆ.

26
10 ಅಡಿಯ ವಿಗ್ರಹ

ಹೌದು. ರಾಮಲಲ್ಲಾ ದೇವಾಲಯ ಆವರಣದಲ್ಲಿ ಭವ್ಯವಾದ ಚಿನ್ನದ ವರ್ಣದ ಪ್ರತಿಮೆಯ ಸ್ಥಾಪನೆಗೆ ಅಯೋಧ್ಯೆ ಸಾಕ್ಷಿಯಾಗಲಿದೆ. ವಜ್ರಗಳು, ಪಚ್ಚೆಗಳು ಮತ್ತು ಇತರ ಅಮೂಲ್ಯ ರತ್ನಗಳಿಂದ ಕೂಡಿದ 10 ಅಡಿ ಎತ್ತರ, 8 ಅಡಿ ಅಗಲದ ಪ್ರತಿಮೆಯನ್ನು ಕರ್ನಾಟಕದ ಭಕ್ತರೊಬ್ಬರು ದಾನ ಮಾಡಿದ್ದು, ಇದು ನಿನ್ನೆ (ಡಿ.23) ಅಯೋಧ್ಯೆಯನ್ನು ತಲುಪಿದೆ.

36
ಯಾರಿವರು?

ದಕ್ಷಿಣ ಭಾರತದ ಸಾಂಪ್ರದಾಯಿಕ ಶಿಲ್ಪಕಲೆ ತಂತ್ರಗಳನ್ನು ಬಳಸಿ ರಚಿಸಲಾದ ಈ ಪ್ರತಿಮೆಯ ಮೌಲ್ಯ ಅಂದಾಜು ₹25–30 ಕೋಟಿ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ ಡಾ. ಅನಿಲ್ ಮಿಶ್ರಾ, ದಾನಿಯ ಗುರುತು ಇನ್ನೂ ತಿಳಿದಿಲ್ಲ ಎಂದು ಹೇಳಿದ್ದಾರೆ. ಇದರ ಅರ್ಥ ಇದನ್ನು ನೀಡಿರುವವರು ಯಾರು ಎನ್ನುವುದು ಇದುವರೆಗೆ ತಿಳಿದುಬಂದಿಲ್ಲ! "ಪ್ರತಿಮೆಯ ತೂಕವನ್ನು ಅಳೆಯಲಾಗುತ್ತಿದೆ, ಆದರೂ ಪ್ರಾಥಮಿಕ ಅಂದಾಜಿನ ಪ್ರಕಾರ ಅದು ಸುಮಾರು ಐದು ಕ್ವಿಂಟಾಲ್‌ಗಳಷ್ಟಿದೆ. ಸಂಪೂರ್ಣ ವಿವರಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು" ಎಂದಿದ್ದಾರೆ ಡಾ. ಅನಿಲ್ ಮಿಶ್ರಾ.

46
ಎಲ್ಲಿ ಸ್ಥಾಪನೆ?

ಸಂತ ತುಳಸಿದಾಸ ದೇವಾಲಯದ ಬಳಿಯ ಅಂಗದ್ ಟೀಲಾದಲ್ಲಿ ಪ್ರತಿಮೆಯನ್ನು ಸ್ಥಾಪಿಸುವ ಸಾಧ್ಯತೆಯಿದೆ. ಇದನ್ನು ಮೊದಲು ಅನಾವರಣಗೊಳಿಸಲಾಗುವುದು, ನಂತರ ದೇಶಾದ್ಯಂತದ ಸಂತರು ಮತ್ತು ಮಹಾಂತರು ಭಾಗವಹಿಸುವ ಪವಿತ್ರೀಕರಣ ಸಮಾರಂಭ ನಡೆಯಲಿದೆ.

56
ತಂಜಾವೂರು ಸ್ಟೈಲ್​

ಅಮೂಲ್ಯ ಕಲ್ಲುಗಳಿಂದ ಕೂಡಿದ ತಂಜಾವೂರು ಕುಶಲಕರ್ಮಿಗಳಿಂದ ಇದನ್ನು ರಚಿಸಲಾಗಿದೆ. ವಿಗ್ರಹವನ್ನು ಕರ್ನಾಟಕದ ಭಕ್ತರು ಜಂಟಿಯಾಗಿ ನಿಯೋಜಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ತಂಜಾವೂರಿನ ನುರಿತ ಕುಶಲಕರ್ಮಿಗಳು ಇದರ ಸೃಷ್ಟಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ, ಇದು ಕಲಾತ್ಮಕ ಮತ್ತು ಭವ್ಯವಾದ ನೋಟವನ್ನು ನೀಡುತ್ತದೆ. ವಜ್ರಗಳು, ಪಚ್ಚೆಗಳು, ನೀಲಮಣಿಗಳು ಮತ್ತು ಚಿನ್ನದಿಂದ ಹೊದಿಸಲ್ಪಟ್ಟಿದ್ದು, ಬಳಸಿದ ನಿಖರವಾದ ಲೋಹವನ್ನು ತಜ್ಞರು ಗುರುತಿಸಿದ್ದಾರೆ.

66
ಡಿಸೆಂಬರ್ 29ರಿಂದ ಪ್ರಾಣ ಪ್ರತಿಷ್ಠೆ

ಇದೇ ಡಿಸೆಂಬರ್ 29 ರಿಂದ ಬರುವ ಜನವರಿ 2 ರವರೆಗೆ ಆಚರಿಸಲಾಗುವ ರಾಮ ಲಲ್ಲಾ ಪ್ರಾಣ ಪ್ರತಿಷ್ಠೆಯ ಎರಡನೇ ವಾರ್ಷಿಕೋತ್ಸವವನ್ನು ಗುರುತಿಸುವ ಪ್ರತಿಷ್ಠಾ ದ್ವಾದಶಿಗೆ ಸಿದ್ಧತೆಗಳು ಪ್ರಾರಂಭವಾಗಿವೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬೆಳಿಗ್ಗೆ 9:30 ರಿಂದ ಮಧ್ಯಾಹ್ನ ಆರತಿಯವರೆಗೆ ಗರ್ಭಗುಡಿಯಲ್ಲಿ ಶ್ರೀ ರಾಮ ಅಭಿಷೇಕ, ಶೃಂಗಾರ್, ಭೋಗ್ ಮತ್ತು ಪ್ರಕತ್ಯ ಆರತಿ ಸೇರಿವೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories