ಜನವರಿ 1ರಿಂದ ಬೆಂಗಳೂರು ಕಲಬುರಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ವೇಳಾಪಟ್ಟಿ ಬದಲಾವಣೆ

Published : Dec 23, 2025, 06:57 PM IST

ಜನವರಿ 1ರಿಂದ ಬೆಂಗಳೂರು ಕಲಬುರಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ವೇಳಾಪಟ್ಟಿ ಬದಲಾವಣೆ, ನಿರ್ಗಮನ ಸಮಯ, ಮಾರ್ಗ ಸೇರಿದಂತೆ ಕೆಲ ಮಹತ್ತರ ಬದಲಾವಣೆ ಮಾಡಲಾಗಿದೆ. ರೈಲು ಬದಲಾವಣೆ ವಿವರವನ್ನು ಸಚಿವಾಲಯ ಪ್ರಕಟಿಸಿದೆ. 

PREV
16
ವಂದೇ ಭಾರತ್ ವೇಳಾಪಟ್ಟಿ

ಭಾರತೀಯ ರೈಲ್ವೇ ರೈಲುಗಳ ಪೈಕಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಭಾರಿ ಬೇಡಿಕೆ. ಹಂತ ಹಂತವಾಗಿ ವಂದೇ ಭಾರತ್ ರೈಲುಗಳನ್ನು ವಿಸ್ತರಣೆ ಮಾಡಲಾಗುತ್ತಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಬೆಂಗಳೂರು-ಕಲಬುರಗಿ ವಂದೇ ಭಾರತ್ ರೈಲು ಪ್ರಯಾಣಿಕರಿಗೆ ನಿರಂತರವಾಗಿ ಸೇವೇ ನೀಡುತ್ತಿದೆ. ಆದರೆ ಹೊಸ ವರ್ಷದಿಂದ (ಜನವರಿ 1, 2026) ಬೆಂಗಳೂರು-ಕಲಬುರಗಿ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ವೇಳಾಪಟ್ಟಿಯಲ್ಲಿ ಮಹತ್ತರ ಬದಲಾವಣೆ ಮಾಡಲಾಗುತ್ತಿದೆ.

26
ವಂದೇ ಭಾರತ್ ರೈಲು ಸೇವೆ

ಸೌತ್ ವೆಸ್ಟರ್ನ್ ರೈಲ್ವೇ (SWR) ನಿರ್ವಹಣೆ ಮಾಡುವ ಕಲಬುರಗಿ SMVT -ಬೆಂಗಳೂರು-ಕಲಬುರಗಿ ವಂದೇ ಭಾರತ್ ರೈಲು 2024ರ ಮಾರ್ಚ್ ತಿಂಗಳಲ್ಲಿ ಉದ್ಘಾಟನೆಗೊಂಡಿತ್ತು. ಎರಡು ರೈಲು ಈ ಮಾರ್ಗದಲ್ಲಿ ಸೇವೆ ನೀಡುತ್ತಿದೆ. ರೈಲು ಸಂಖ್ಯೆ 22231 ಹಾಗೂ ರೈಲು ಸಂಖ್ಯೆ22232 ರೈಲುಗಳು ಸೇವೆ ನೀಡುತ್ತಿದೆ. ಗುರುವಾರ ಹೊರತುಪಡಿಸಿ ಇನ್ನುಳಿದ ಎಲ್ಲಾ ದಿನ ಪ್ರಯಾಣಕರಿಗೆ ಸೇವೆ ನೀಡುತ್ತಿದೆ.

36
ಹೊಸ ಮಾರ್ಗ, ಹೊಸ ನಿಲುಗಡೆ

ಬೆಂಗಳೂರು ಕಲಬುರಗಿ ಬೆಂಗಳೂರು ವಂದೇ ಭಾರತ್ ರೈಲು ಮಾರ್ಗ, ನಿಲುಗಡೆಯಲ್ಲೂ ಬದಲಾವಣೆ ಮಾಡಲಾಗಿದೆ. ಹೊಸದಾಗಿ ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ ಮಾರ್ಗದ ಮೂಲಕ ಸಾಗಲಿದೆ.ಇದೇ ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ. ಇನ್ನು ಯಾದಗಿರಿ, ರಾಯಚೂರು, ಮಂತ್ರಲಾಯ ರಸ್ತೆ, ಗುಂಟಕಲ್, ಅನಂತಪುರ, ಯಲಂಹಕಾ ಜಂಕ್ಷನ್‌ಗಳ ನಿಲುಗಡೆ ಯಥಾ ಪ್ರಕಾರ ಮುಂದುವರಿಯಲಿದೆ.

46
ಕಲಬುರಗಿಯಿಂದ ಹೊರಡುವ ಸಮಯದಲ್ಲಿ ಬದಲಾವಣೆ

ಕಲಬುರಗಿಯಿಂದ ಬೆಂಗಳೂರು ಹೊರಡುವ 22231 ರೈಲು ಕಲಬುರಗಿಯಿಂದ ಬೆಳಗ್ಗೆ 6.10ಕ್ಕೆ ಹೊರಡಲಿದೆ. ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಂಯ ನಿಲ್ದಾಣಕ್ಕೆ 11 ಗಂಟೆಗೆ ಆಗಮಿಸಲಿದೆ. ಬೆಂಗಳೂರಿಗೆ ಮಧ್ಯಾಹ್ನ 2.00 ಗಂಟೆಗೆ ಆಗಮಿಸಿಲಿದೆ.

56
ಬೆಂಗಳೂರು ಟು ಕಲಬರುಗಿ ಸಮಯ

ರೈಲು ಸಂಖ್ಯೆ 22232 ಬೆಂಗಳೂರಿನಿಂದ ಮಧ್ಯಾಹ್ನ 2.40ಕ್ಕೆ ಹೊರಡಲಿದೆ. ಸಂಜೆ ವೇಳೆ ಹೊಸದಾಗಿ ನಿಲುಗಡೆ ಮಾಡಿರುವ ಸಾಯಿ ಸತ್ಯ ನಿಲಯಂಗೆ ಬರಲಿದೆ. ಕಲಬುರಗಿಗೆ ರಾತ್ರಿ 10.45ಕ್ಕೆ ತಲುಪಲಿದೆ. ಇನ್ನು ಸದ್ಯ ಇರುವ ನಿಲುಗಡೆಗಳಲ್ಲಿ ರೈಲು ನಿಲುಗಡೆಯಾಗಲಿದೆ.

ಬೆಂಗಳೂರು ಟು ಕಲಬರುಗಿ ಸಮಯ

66
ವಂದೇ ಭಾರತ್ ರೈಲು ಟಿಕೆಟ್

ಬೆಂಗಳೂರು ಕಲಬುರಗಿ ಬೆಂಗಳೂರು ರೈಲು ಟಿಕೆಟ್ ದರ ಎಸಿ ಚೇರ್‌ಗೆ 1,475 ರೂಪಾಯಿ ಹಾಗೂ ಎಕ್ಸಿಕ್ಯೂಟೀವ್ ಚೇರ್ ಟಿಕೆಟ್ ಬೆಲೆ 2,710 ರೂಪಾಯಿ ನಿಗದಿ ಮಾಡಲಾಗಿದೆ.

ವಂದೇ ಭಾರತ್ ರೈಲು ಟಿಕೆಟ್

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories